Advertisement
ಪಿಂಪ್ರಿಯ ಅಂಬೇಡ್ಕರ್ ಚೌಕ್‌ನಲ್ಲಿರುವ ಹೊಟೇಲ್ ಕ್ರಿಸ್ಟಲ್ ಕೋರ್ಟ್‌ನ ಸಭಾಗೃಹದಲ್ಲಿ ಪಿಂಪ್ರಿ ಬಿಲ್ಲವ ಸಂಘದ ವತಿಯಿಂದ ಯುವಕ ಯುವತಿಯರಿಗಾಗಿ ನಡೆದ ಒಂದು ದಿನದ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಜೀವನೋತ್ಸವ-2018 ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ದೂರದೃಷ್ಟಿತ್ವದ ಆಲೋಚನೆಗಳು, ಸಾಧಿಸಬೇಕು ಎಂಬ ಛಲ, ಪರಿಶ್ರಮವನ್ನು ಹೊಂದಿರುವ ಪ್ರತಿಭೆಗಳಿಗೆ ಅನುಗುಣವಾಗಿ ಕಾರ್ಯಸಾಧನೆಯಿಂದ ಪ್ರತಿಯೊಬ್ಬರೂ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಅಲಂಕರಿಸಬಹುದು. ಬೇರೊಬ್ಬರನ್ನು ಹೊಂದಿಕೊಂಡು ಬಾಳುವುದಕ್ಕಿಂತ ಸ್ವ ಉದ್ಯಮಿಗಳಾಬೇಕು ಎಂಬ ಚಿಂತನೆ ಯುವ ಪ್ರತಿಭೆಗಳಲ್ಲಿ ಮೂಡಿ ಬರಬೇಕು ಎಂದರು.
Related Articles
Advertisement
ಸಂಘದ ಕಾರ್ಯದರ್ಶಿ ಶ್ಯಾಮ್ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಶ್ರಮಪಟ್ಟ ಸಂಘದ ಯುವ ಪ್ರತಿಭೆ ಶೇಖರ್ ಚಿತ್ರಾಪು ಅವರ ಕಾರ್ಯ ಶ್ಲಾಘಿಸಿ, ಸ್ವಾಗತಿಸಿದರು. ಪಿಂಪ್ರಿ ಬಿಲ್ಲವ ಸಂಘದ ವತಿಯಿಂದ ಸುಧಾಕರ ಕಾರ್ಕಳ ಅವರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ರವಿ ಜತ್ತನ್, ಸಂತೋಷ್ ಪೂಜಾರಿ, ಶ್ರೀಧರ ಪೂಜಾರಿ, ಕಿರಣ್ ಸುವರ್ಣ, ರಾಘು ಪೂಜಾರಿ, ಸತೀಶ್ ಸಾಲ್ಯಾನ್, ಪಿಂಪ್ರಿ ಬಿಲ್ಲವ ಮಹಿಳಾ ಮಂಡಲದ ಅಧ್ಯಕ್ಷೆ ಸಂಗೀತಾ ಸುವರ್ಣ, ಮೀನಾಕ್ಷಿ ಪೂಜಾರಿ, ಪುಣೆ ಬಿಲ್ಲವ ಸಂಘದ ಪ್ರಮುಖರಾದ ಉತ್ತಮ ಪಣಿಯಾಡಿ, ಪ್ರಿಯಾ ಯು. ಪಣಿಯಾಡಿ, ಪ್ರಶಾಂತ್ ಸುವರ್ಣ, ಶಿವು ಪೂಜಾರಿ, ಪುಣೆ ತುಳು ಕೂಟದ ಗೀತಾ ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಲೋನವಾಲದ ಗಣೇಶ್ ಪೂಜಾರಿ ಅವರು ಉಪಸ್ಥಿತರಿದ್ದರು. ನೂತನ್ ಸುವರ್ಣ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಾವು ಮಾಡುವ ವ್ಯಾಪಾರದಲ್ಲಿ ನಷ್ಟಗೊಂಡಾಗ ಕುಗ್ಗದೆ, ಯಶಸ್ಸಿಗೆ ಹಿಗ್ಗದೆ ನಮ್ಮ ಕಾರ್ಯ ಸಾಧನೆಯೊಂದಿಗೆ ಮುನ್ನಡೆದರೆ ಪ್ರತಿಯೊಬ್ಬನಿಗೂ ಯಶಸ್ಸು ಸಾಧ್ಯ. ಕಠಿನ ಪರಿಶ್ರಮ, ಶ್ರದ್ಧೆ, ಕಾರ್ಯಶೀಲತೆ ನಮ್ಮಲ್ಲಿರಬೇಕು. ಯಾವುದೇ ಉದ್ಯಮದಲ್ಲೂ ಕೀಳರಿಮೆ ಇರಬಾರದು. ಮುಂದೆ ಏನೆಂಬುದು ಎಂಬ ಕುತೂಹಲವನ್ನು ಯಶಸ್ವಿಯಾಗಿ ಕೊಂಡೊಯ್ಯಬಲ್ಲದು. ತನ್ನ ಯಶಸ್ಸಿನೊಂದಿಗೆ ಇತರರಿಗೂ ಉದ್ಯೋಗ ನೀಡಿ ಮಾದರಿಯಾಗಬೇಕು. ತಮ್ಮ ಜೀವನದ ಯಶಸ್ಸು ಯುವಜನತೆಗೆ ತಿಳಿಯ ಬೇಕು. ಅವರಲ್ಲೂ ಉತ್ಸಾಹ ಮೂಡಿ ಬರಬೇಕು
ಪುರಂದರ ಪೂಜಾರಿ
(ಸಂಸ್ಥಾಪಕರು: ಪಂಚಮಿ ಚಾರಿಟೆಬಲ್ ಟ್ರಸ್ಟ್ ಪುಣೆ) ಯುವಕರಿಗೆ ಕೇವಲ ಕ್ರೀಡೆ, ಮನೋ ರಂಜನೆ, ಕಾರ್ಯಕ್ರಮಗಳನ್ನು ಅಷ್ಟೇ ಆಯೋಜಿಸುವುದಲ್ಲ, ಇಂತಹ ವ್ಯಕ್ತಿತ್ವ ವಿಕಸನದಂತಹ ವಿನೂತನ ಕಾರ್ಯಾಗಾರದಂತೆ ಯುವ ಜನತೆಗೆ, ಸಮಾಜದ ಬಂಧುಗಳಿಗೆ ಉಪಯೋಗ ವಾಗುವಂತಹ ಕಾರ್ಯಕ್ರಮಗಳನ್ನು ಇನ್ನು ಮುಂದೆಯೂ ಆಯೋಜಿಸುವ ಕಾರ್ಯವನ್ನು ಸಂಘವು ಮಾಡಲಿದೆ. ಈ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರೋತ್ಸಾಹ ಸಿಕ್ಕಿದೆ. ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು
ಸೋಮಪ್ಪ ಸಾಲ್ಯಾನ್
(ಅಧ್ಯಕ್ಷರು: ಪಿಂಪ್ರಿ ಬಿಲ್ಲವ ಸಂಘ ಪುಣೆ) ವರದಿ : ಹರೀಶ್ ಮೂಡಬಿದ್ರೆ