Advertisement
ಆದರೆ ಪೈಲಟ್ ಸಮಯ ಪ್ರಜ್ಞೆ, ಚಾಣಾಕ್ಷತನ ಹಾಗೂ ಆತ್ಮಸ್ಥೈರ್ಯದಿಂದ ಒಂದು ಎಂಜಿನ್‌ನಿಂದಲೇ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದು ಪ್ರಯಾಣಿಕರ ಪ್ರಾಣ ಉಳಿಸಿದೆ. ಇದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಪೈಲಟ್ ಸೂಕ್ತ ಸಂದರ್ಭ ತಾಂತ್ರಿಕ ಕೌಶಲ ಬಳಸದೇ ಇದ್ದರೆ, ವಿಮಾನ ದುರಂತಕ್ಕೀಡಾಗುವ ಎಲ್ಲ ಸಾಧ್ಯತೆಗಳಿದ್ದವು. ವಿಮಾನ ತುರ್ತು ಭೂಸ್ಪರ್ಶದಿಂದ ಉಂಟಾದ ಆಘಾತದಿಂದ ಸಿಬಂದಿ ಇನ್ನೂ ಹೊರಬಂದಿಲ್ಲ ಎನ್ನಲಾಗುತ್ತಿದೆ.
Related Articles
Advertisement
ಎಂಜಿನ್ ಫೈಲ್ ದೊಡ್ಡ ಅಪಾಯದೇಶದ ಪ್ರತಿಷ್ಠಿತ ವಿಮಾನ ತಯಾರಿಕಾ ಕಂಪೆನಿಯ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರು ಹೇಳುವಂತೆ, “ಯಾವುದೇ ನಾಗರಿಕಯಾನ ವಿಮಾನ ಹಾರಾಟದಲ್ಲಿರಬೇಕಾದರೆ ಎರಡು ಎಂಜಿನ್‌ಗಳ ಪೈಕಿ ಒಂದು ತಾಂತ್ರಿಕವಾಗಿ ನಿಷ್ಕ್ರಿಯಗೊಳ್ಳುವುದು ಅಂದರೆ ತಾಂತ್ರಿಕ ಭಾಷೆಯಲ್ಲಿ ದೊಡ್ಡ ಮಟ್ಟದ ಅಪಾಯದ ಪರಿಸ್ಥಿತಿಯಾಗಿರುತ್ತದೆ. ಏಕೆಂದರೆ, ಒಂದು ಎಂಜಿನ್ ಕೈಕೊಟ್ಟ ಮೇಲೆ ಕೇವಲ ಒಂದೇ ಎಂಜಿನ್ ಮೇಲೆ ಇಡೀ ವಿಮಾನದ ಹಾರಾಟ ಅವಲಂಬಿಸಿಕೊಂಡಿರುತ್ತದೆ. ಮತ್ತೂಂದು ಎಂಜಿನ್‌ನ ಭವಿಷ್ಯ ಕೂಡ ಡೋಲಾಯ ಮಾನವಾಗಬಹುದು. ಒಂದು ಎಂಜಿನ್ ವಿಫಲವಾದ ತತ್‌ಕ್ಷಣ ಅದರಿಂದ ಆಯಿಲ್ ಸೋರಿಕೆ, ಮತ್ತೇನೋ ತಾಂತ್ರಿಕ ದೋಷವೂ ಕಾಣಿಸಿಕೊಳ್ಳಬಹುದು. ಒಂದೇ ಎಂಜಿನ್‌ನಲ್ಲಿ ಆ ವಿಮಾನವನ್ನು ಎಷ್ಟು ದೂರಕ್ಕೆ, ಎಷ್ಟು ಹೊತ್ತು ಚಲಾಯಿಸಬಹುದು ಎನ್ನುವುದು ಆ ವಿಮಾನದ ಕಾರ್ಯಕ್ಷಮತೆ, ಈಗಾಗಲೇ ಎಷ್ಟು ಹಾರಾಟ ನಡೆಸಿದೆ ಹಾಗೂ ಎಷ್ಟು ಭಾರ ಹೊಂದಿದೆ ಎಂಬಿತ್ಯಾದಿ ಅಂಶಗಳ ಮೇಲೆ ಅವಲಂಬಿಸಿರುತ್ತದೆ. ಒಂದು ಎಂಜಿನ್ ಕೈಕೊಟ್ಟ ಕಾರಣ ಮತ್ತೂಂದು ಎಂಜಿನ್‌ನಲ್ಲೇ ಪೂರ್ಣವಾಗಿ ಮೇಲೆ ಚಲಾಯಿಸಬಹುದು ಎನ್ನಲು ಸಾಧ್ಯವಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ತಾಂತ್ರಿಕ ಪರಿಣತರು ವಿವರಿಸಿದ್ದಾರೆ. ಏರ್ ಇಂಡಿಯಾವೇ ಹೊಣೆ
ಮಂಗಳೂರು ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಆದ ಘಟನೆ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ವಾಯುಸೇನೆಯ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ. ಅತ್ರಿ ಪ್ರಕಾರ, “ವಿಮಾನ ಹಾರಾಡುತ್ತಿರಬೇಕಾದರೆ, ಎಂಜಿನ್ ಆಫ್ ಆಗಿರುವುದು ಸಣ್ಣ ವಿಚಾರವೇನು ಅಲ್ಲ. ಯಾವುದೇ ವಿಮಾನ ಟೇಕ್‌ಅಫ್ ಆಗಬೇಕಾದರೆ, ತಾಂತ್ರಿಕವಾಗಿ ಚೆಕ್‌ಲಿಸ್ಟ್ ಆಗಬೇಕಾಗುತ್ತದೆ. ಒಂದುವೇಳೆ ಸರಿಯಾದ ತಾಂತ್ರಿಕ ಪರಿಶೀಲನೆ ನಡೆಸದಿದ್ದರೆ ಈ ರೀತಿಯ ಅಪಾಯ ಆಗುವ ಸಾಧ್ಯತೆಯೂ ಇರುತ್ತದೆ. ಸಾಮಾನ್ಯವಾಗಿ ದೊಡ್ಡ ಮಟ್ಟದ ತೊಂದರೆ ಕಾಣಿಸಿಕೊಂಡಾಗ ಮಾತ್ರ ಎಂಜಿನ್ ಕೆಟ್ಟು ಹೋಗುತ್ತದೆ. ಏರ್‌ಇಂಡಿಯಾವೇ ಈ ಘಟನೆಗೆ ಸಂಪೂರ್ಣ ಹೊಣೆಯಾಗಿದ್ದು, ಕೇವಲ ಪೈಲಟ್‌ನ ವೃತ್ತಿ ಕೌಶಲದಿಂದಾಗಿ ವಿಮಾನವು ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ದೋಷಕ್ಕೆ ಕಾರಣ ನಿಗೂಢ
ಎಂಜಿನ್ ವೈಫಲ್ಯ ಬಗ್ಗೆ ಏರ್‌ಇಂಡಿಯಾ ಸಂಸ್ಥೆಯಾಗಲಿ ಅಥವಾ ಮಂಗಳೂರು ವಿಮಾಣ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಇದಕ್ಕೆ ಕಾರಣವೂ ಉನ್ನತ ಮಟ್ಟದ ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ. ಇನ್ನು ವಿಮಾನ ಹಾರಾಟ ರದ್ದುಗೊಂಡು, ನಗರದ ಖಾಸಗಿ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದ ಎಲ್ಲ 173 ಪ್ರಯಾಣಿಕರನ್ನು ಶುಕ್ರವಾರ ಬೆಳಗ್ಗೆ ಎರಡು ವಿಮಾನಗಳಲ್ಲಿ ದೋಹಾಕ್ಕೆ ಕಳುಹಿಸಲಾಗಿದೆ. ಈ ನಡುವೆ, ತಾಂತ್ರಿಕ ವೈಫಲ್ಯದ ವಿಮಾನವನ್ನು ಸದ್ಯ ಯಥಾಸ್ಥಿತಿಯಲ್ಲಿ ನಿಲ್ದಾಣದಲ್ಲೇ ಇಡಲಾಗಿದ್ದು, ಅದಕ್ಕೆ ಹೊಸ ಎಂಜಿನ್ ಅನ್ನು ತಿರುವನಂತಪುರದಿಂದ ತರಿಸಿ ಅಳವಡಿಸಿಕೊಂಡು, ಸೆ. 28ರೊಳಗೆ ಮತ್ತೆ ಕಾರ್ಯಾರಂಭಿಸುವ ಸಾಧ್ಯತೆಯಿದೆ. ಈ ಘಟನೆ ಬಗೆಗಿನ ತನಿಖೆ ಮುಂಬಯಿ ನಾಗರಿಕ ವಿಮಾನಯಾನ ನಿರ್ದೇಶ
ನಾಲಯ ನಡೆಯಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ವಾಪಸ್ ಬಂದಿದ್ದ ಸಂಬಂಧಿಕರು ವಿಮಾನ ತಾಂತ್ರಿಕ ವೈಫಲ್ಯಕ್ಕೊಳಗಾಗಿ ತುರ್ತು ಭೂಸ್ಪರ್ಶ ಆಗುವ ವಿಚಾರ ನಿಲ್ದಾಣಕ್ಕೆ ಕರೆತಂದು ಬಿಟ್ಟಿದ್ದ ಸಂಬಂಧಿಕರಿಗೂ ಗೊತ್ತಾಗಿತ್ತು. ವಿಮಾನ ಲ್ಯಾಂಡಿಂಗ್ ಆಗುವುದಕ್ಕೂ ಮೊದಲೇ ವಿಮಾನದಲ್ಲಿದ್ದ ಪ್ರಯಾಣಿಕರೇ ತಮ್ಮ ತಮ್ಮ ಸಂಬಂಧಿಕರಿಗೆ ಮೊಬೈಲ್ ಕರೆ ಮಾಡಿ ಅಪಾಯದಲ್ಲಿರುವ ವಿಷಯವನ್ನು ತಿಳಿಸಿದ್ದರು. ಹೀಗಾಗಿ ನಿಲ್ದಾಣಕ್ಕೆ ಬಿಟ್ಟು ಹೋಗಿದ್ದ ಕೆಲವು ಸಂಬಂಧಿಕರು ಮತ್ತೆ ನಿಲ್ದಾಣಕ್ಕೆ ದೌಡಾಯಿಸಿ ಬಂದಿದ್ದರು. ಈ ನಡುವೆ ವಿಮಾನದೊಳಗೆ ಪ್ರಯಾಣಿಕರು ಪ್ರಾಣ ಒತ್ತೆಯಿಟ್ಟು ದೇವರಲ್ಲಿ ಮೊರೆಯಿಡು ತ್ತಿದ್ದರು ಎನ್ನಲಾದ ಆಡಿಯೋ ತುಣಕು ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಸುರೇಶ್ ಪುದುವೆಟ್ಟು