Advertisement
1958ರಲ್ಲಿ ನಿರ್ಮಾಣವಾದ ಈ ಸೇತುವೆಯ ಪ್ರಮುಖ ಪಿಲ್ಲರ್‌ಗಳ ತಳದಲ್ಲೇ ಕಲ್ಲುಗಳು ಕುಸಿದಿದ್ದು ಅಪಾಯದಲ್ಲಿದೆ. ನಿರ್ಮಾಣವಾದ ಸಂದರ್ಭದಲ್ಲೇ ಕಳಪೆ ಕಾಮಗಾರಿಯ ಆರೋಪ ಕೇಳಿಬಂದಿದ್ದು ಸ್ಥಳೀಯರಾದ ಬೇಳಂಜೆ ರಮಾನಂದ ಹೆಗ್ಡೆ ಅವರು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಈ ಬಗ್ಗೆ ಹೋರಾಟವನ್ನೂ ನಡೆಸಿದ್ದರು.
ಮಳೆಗಾಲದಲ್ಲಿ ಉಕ್ಕಿ ಹರಿಯುವ ಸೀತಾನದಿ ಈಗ ಬತ್ತಿ ಹೋಗಿದೆ. ಈ ಸಮಯದಲ್ಲಿ ತಾತ್ಕಲಿಕ ದುರಸ್ತಿ ಕಾರ್ಯ ಮಾಡಲು ಅನುಕೂಲವಾಗಿದ್ದು, ಕ್ರಮ ಕೈಗೊಂಡಲ್ಲಿ ಸಂಭಾವ್ಯ ಅಪಾಯವನ್ನು ತಪ್ಪಿಸಬಹುದು.
Related Articles
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ದುರಸ್ಥಿ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹೆಬ್ರಿ ಬೇಳಂಜೆ ಸಂಪರ್ಕ ಕಡಿತಗೊಳ್ಳುವ ಭೀತಿ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
Advertisement
ದುರಸ್ತಿ ಮಾಡಲಾಗುವುದುಪರಿಶೀಲಿಸಿದ್ದೇವೆ. ಯಾವುದೇ ಭಯ ಪಡುವ ಅಪಾಯ ಇಲ್ಲ. ಪಿಲ್ಲರ್‌ನ ಕೆಲವೊಂದು ಕಲ್ಲುಗಳು ಜಾರಿಹೋಗಿದ್ದು 15 ದಿನಗಳ ಒಳಗೆ ತಾತ್ಕಾಲಿಕ ದುರಸ್ತಿ ಕಾರ್ಯ ಆರಂಭವಾಗಲಿದೆ. ಅಲ್ಲದೆ ಬೆಂಗಳೂರಿನಿಂದ ತಜ್ಞರನ್ನು ಕರೆಯಿಸಿ ಸೇತುವೆಯ ಗುಣಮಟ್ಟವನ್ನು ಪರೀಕ್ಷಿಸಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು. ಅಂತಹ ಯಾವುದೇ ಅಪಾಯವಿಲ್ಲ.
-ಲಾಯೆಡ್, ಲೋಕೋಪಯೋಗಿ ಅಭಿಯಂತರರು ಪರಿಶೀಲನೆ
ಸೇತುವೆ ಕೆಳಭಾಗದ ಪಿಲ್ಲರ್‌ಗಳ ಕಲ್ಲುಗಳು ಜಾರಿವೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿ ಸಲಾಗಿದ್ದು, ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
-ರಾಜೇಂದ್ರ, ಪಿ.ಡಿ.ಒ .ಚಾರ ಗ್ರಾ.ಪಂ.