Advertisement

ಆನೆ ಕಾಲು ರೋಗ ನಿಯಂತ್ರಣಕ್ಕೆ ಮಾತ್ರೆ ವಿತರಣೆ

03:14 PM Jan 06, 2022 | Team Udayavani |

ನಾರಾಯಣಪುರ: ಸಮೀಪದ ಗೆದ್ದಲಮರಿ ಸರ್ಕಾರಿ ಶಾಲೆಯಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಆನೆ ಕಾಲು ರೋಗ ನಿಯಂತ್ರಣ ಮಾತ್ರೆಗಳು ಸಾಮೂಹಿಕವಾಗಿ ನುಂಗಿಸುವ ಕಾರ್ಯಕ್ರಮ ನಡೆಯಿತು.

Advertisement

ಈ ವೇಳೆ ಮುಖ್ಯ ಶಿಕ್ಷಕ ಸಂಗಯ್ಯ ಬಾಚಿಹಾಳ ಮಾತನಾಡಿ, ಕೊಲೆಕ್ಸ್‌ ಸೊಳ್ಳೆ ಕಚ್ಚುವಿಕೆಯಿಂದ ಆನೆ ಕಾಲು ರೋಗ ಹರಡುತ್ತದೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಮನೆ ಆವರಣದ ಪರಿಸರ ಸ್ವತ್ಛವಾಗಿ ಇಟ್ಟುಕೊಳ್ಳಬೇಕು ಹಾಗೂ ಕಲುಷಿತ ನೀರು ನಿಲ್ಲದಂತೆ ನೋಡಬೇಕು. ಸ್ವತ್ಛತೆಗೆ ಆದ್ಯತೆ ನೀಡಬೇಕಾಗಿದ್ದು, ಆನೆ ಕಾಲು ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸೂಚಿಸಿರುವ ವರ್ಷದಲ್ಲಿ ಒಂದು ಬಾರಿ ಐಡಿಎ ತ್ರಿವಳಿ ಮಾತ್ರೆಗಳನ್ನು ನುಂಗುವ ಮೂಲಕ ಆನೆ ಕಾಲು ರೋಗದಿಂದ ಮುಕ್ತರಾಗಬಹುದು ಎಂದು ಹೇಳಿದರು.

ಆರೋಗ್ಯ ಇಲಾಖೆಯ ಸುನೀತಾ, ಆಶಾ ಕಾರ್ಯಕರ್ತೆಯರು ಮಹಾಲಕ್ಷ್ಮೀ, ಕನಕಮ್ಮ ಸೇರಿದಂತೆ ಸಹ ಶಿಕ್ಷಕರು, ಎಸ್‌ ಡಿಎಂಸಿಯವರು ಇದ್ದರು.

ಸ್ಥಳೀಯ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಐಬಿ ತಾಂಡಾದ (ಹನುಮನಗರ) ಅಂಗನವಾಡಿ ಕೇಂದ್ರ, ಮೌನೇಶ್ವರ ಕ್ಯಾಂಪ್‌ ಸರ್ಕಾರಿ ಶಾಲೆ ಸೇರಿದಂತೆ ಇತರೆ ಶಾಲೆಗಳಲ್ಲಿ ಆಯಾ ಭಾಗದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಆನೆ ಕಾಲು ರೋಗ ನಿಯಂತ್ರಕ ಮಾತ್ರೆಗಳನ್ನು ಸಾಮೂಹಿಕವಾಗಿ ನುಂಗಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next