Advertisement

ಐದು ಮಕ್ಕಳ ಮಹಾರಾಣಿ!

12:00 PM Sep 02, 2019 | Sriram |

ಮಂಗಳೂರು: ದೇಶದಲ್ಲೇ ಹುಲಿ ಸಂತತಿ ಅಳಿವಿನಂಚಿನಲ್ಲಿರಬೇಕಾದರೆ, ಪಿಲಿಕುಳ ನಿಸರ್ಗಧಾಮದಲ್ಲಿರುವ 8 ವರ್ಷದ ‘ರಾಣಿ’ ಮುದ್ದಾದ 3 ಹೆಣ್ಣು ಹಾಗೂ 2 ಗಂಡು ಮರಿಗಳಿಗೆ ಜನ್ಮ ನೀಡಿದೆ!

Advertisement

ನಿಸರ್ಗಧಾಮ ಅಥವಾ ಉದ್ಯಾನವನಗಳಲ್ಲಿ ಸಾಕುವ ಹುಲಿಗಳು 2- 3 ಮರಿಗಳಿಗೆ ಜನ್ಮ ನೀಡುವುದು ಸಾಮಾನ್ಯ. ಪಿಲಿಕುಳದ ರಾಣಿ ಐದು ಮರಿಗಳಿಗೆ ಜನ್ಮ ಕೊಟ್ಟಿರುವುದು ನಿಸರ್ಗ ಧಾಮದ ಅಧಿಕಾರಿಗಳು, ಸಿಬಂದಿಗೆ ಅಚ್ಚರಿ ತಂದಿದೆ. ಕೆಲವು ದಿನಗಳ ಹಿಂದೆಯಷ್ಟೇ ರಾಣಿ ಮರಿ ಹಾಕಿದ್ದು, ಎಲ್ಲ ಮರಿಗಳು ಆರೋಗ್ಯವಾಗಿವೆ. ಅವು ಗಳಿಗೆ ಸೋಂಕು ಉಂಟಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದ್ದು, ತಾಯಿ-ಮರಿಗಳನ್ನು ಬೋನಿನಲ್ಲಿಡಲಾಗಿದೆ. ಸದ್ಯ ಸಾರ್ವಜನಿಕರ ವೀಕ್ಷಣೆಗೆ ಅವ ಕಾಶ ಇರುವುದಿಲ್ಲ. 2-3 ತಿಂಗಳ ಬಳಿಕ ಅವುಗಳಿಗೆ ಚುಚ್ಚು ಮದ್ದು- ಲಸಿಕೆ ನೀಡಿ ಆರೋಗ್ಯ ಪರಿಶೀಲಿಸಿದ ಬೋನಿ ನಿಂದ ಹೊರ ಬಿಡಲಾಗುವುದು.

ಬನ್ನೇರುಘಟ್ಟದ ರಾಣಿ
ರಾಣಿಯನ್ನು 3 ವರ್ಷಗಳ ಹಿಂದೆ ಬನ್ನೇರುಘಟ್ಟದಿಂದ ತರಲಾ ಗಿತ್ತು. ಸದ್ಯ ಮರಿಗಳು ತಾಯಿಯ ಹಾಲನ್ನಷ್ಟೇ ಸೇವಿಸುತ್ತಿದ್ದು, ಕೆಲವೇ ದಿನಗಳಲ್ಲಿ ಮಾಂಸಾಹಾರ ನೀಡಲಾ ಗುವುದು. 3 ವರ್ಷಗಳ ಬಳಿಕ ಮರಿಗಳನ್ನು ಬೇರೆ ಮೃಗಾಲಯಗಳಿಗೆ ಕಳು ಹಿಸುವ ಯೋಚನೆಯಿದೆ ಎಂದು ಅಧಿಕಾರಿಗಳು ‘ಉದಯವಾಣಿ’ಗೆ ತಿಳಿಸಿದ್ದಾರೆ.

ಬರಲಿದೆ ಬಿಳಿ ಹುಲಿ!
ತಿರುಪತಿ ಮೃಗಾಲಯದಿಂದ 2 ಬಿಳಿ ಹುಲಿಗಳನ್ನು ಪಿಲಿಕುಳಕ್ಕೆ ತರಲಾಗುವುದು. ಜತೆಗೆ ಎಮು ಮಾದರಿಯ ರಿಯಾ ಎಂಬ ಹಕ್ಕಿ ತಿರುವನಂತಪುರದಿಂದ ಬರಲಿದೆ. ಕಡವೆ ಮಾದರಿಯ ಬಾರಸಿಂಗ ಎಂಬ ಪ್ರಾಣಿಯೂ ಬರಲಿದೆ.

1,200 ಪ್ರಾಣಿ-ಪಕ್ಷಿಗಳು
ಸದ್ಯ ಪಿಲಿಕುಳದಲ್ಲಿ 5 ಗಂಡು-3 ಹೆಣ್ಣು ಸಹಿತ ಒಟ್ಟು 8 ಹುಲಿ, 2 ಏಷಿಯಾಟಿಕ್‌, 2 ಆಪ್ರೋ ಏಷಿಯನ್‌ ಸೇರಿದಂತೆ ಒಟ್ಟು 4 ಸಿಂಹ, 8 ಚಿರತೆ, 2 ಕರಡಿ, 4 ನೀರಾನೆ ಸಹಿತ 100ಕ್ಕೂ ಅಧಿಕ ಜಾತಿಯ 1,200ರಷ್ಟು ಪ್ರಾಣಿ- ಪಕ್ಷಿಗಳಿವೆ.

Advertisement

ಪ್ರತಿದಿನ 120 ಕಿಲೋ ಮಾಂಸ!
ಪ್ರತೀ ಹುಲಿಗೆ ದಿನಕ್ಕೆ 8ರಿಂದ 10 ಕಿಲೋದಂತೆ ನಿಸರ್ಗಧಾಮದ ಪ್ರಾಣಿಗಳಿಗೆ ಪ್ರತೀದಿನ ಸುಮಾರು 120ಕ್ಕೂ ಕಿಲೋಗಿಂತ ಅಧಿಕ ಮಾಂಸಾ ಹಾರದ ಅಗತ್ಯವಿದೆ. ವಾರದಲ್ಲಿ ಒಂದು ದಿನ (ರವಿವಾರ) ಪ್ರಾಣಿಗಳಿಗೆ ಆಹಾರವಿರುವುದಿಲ್ಲ. ವಿಶ್ರಾಂತಿಯ ಹಿನ್ನೆಲೆಯಲ್ಲಿ ಸೋಮವಾರ ಬೋನಿನಿಂದ ಹೊರಗೆ ಬಿಡುವುದಿಲ್ಲ.

ಪಿಲಿಕುಳದಲ್ಲಿ ಕಾಡಿನ ವಾತಾವರಣ, ಸ್ವಾಭಾವಿಕ ಪರಿಸರ ಹಾಗೂ ಆಹಾರ-ಆರೋಗ್ಯದ ಮೇಲೆ ವಿಶೇಷ ಒತ್ತು ನೀಡುವ ಕಾರಣದಿಂದ ಇತರ ಮೃಗಾಲಯಗಳಿಗೆ ಹೋಲಿಸಿದರೆ ಹೆಚ್ಚು ಸಂತಾನೋತ್ಪತ್ತಿ ಇಲ್ಲಿ ನಡೆಯುತ್ತಿದೆ.
– ಎಚ್. ಜಯಪ್ರಕಾಶ್‌ ಭಂಡಾರಿ ನಿರ್ದೇಶಕರು, ಪಿಲಿಕುಳ ಉದ್ಯಾನವನ
-ದಿನೇಶ್‌ ಇರಾ
ಚಿತ್ರ: ಸತೀಶ್‌ ಇರಾ
Advertisement

Udayavani is now on Telegram. Click here to join our channel and stay updated with the latest news.

Next