Advertisement

ಶತ ದಿನದತ್ತ  ಪಿಲಿಬೈಲ್‌ ಯಮುನಕ್ಕ

12:01 PM Mar 18, 2017 | |

ಮಂಗಳೂರು: ತುಳು ಚಿತ್ರರಂಗದಲ್ಲಿ ಅದ್ವಿತೀಯ ದಾಖಲೆ ಬರೆದಿರುವ “ಪಿಲಿಬೈಲ್‌ ಯಮುನಕ್ಕ’ ಚಿತ್ರ ಮಾ. 18ರ ಶನಿವಾರ 100ನೇ ದಿನದ ಪ್ರದರ್ಶನ ಕಾಣಲಿದೆ. 

Advertisement

ಮಂಗಳೂರಿನ ಪ್ರಭಾತ್‌ ಹಾಗೂ ಬಿಗ್‌ ಸಿನೆಮಾಸ್‌ನಲ್ಲಿ ಪ್ರಸ್ತುತ “ಪಿಲಿಬೈಲ್‌’ ಪ್ರದರ್ಶನ ಕಾಣುತ್ತಿದೆ.ರೋಹನ್‌ ಶೆಟ್ಟಿ, ಹರೀಶ್‌ ರಾವ್‌ ಮತ್ತು ಸಂದೇಶ್‌ ರಾಜ್‌ ಬಂಗೇರ ನಿರ್ಮಾಣದ ಚಿತ್ರವನ್ನು ಸೂರಜ್‌ ಶೆಟ್ಟಿ ನಿರ್ದೇಶಿಸಿದ್ದಾರೆ. ನಾಗರಾಜ್‌ ಅಂಬರ್‌ ನಾಯಕನಾಗಿ ಮತ್ತು ಎಕ್ಕಸಕ ಚಿತ್ರದ ಸೋನಾಲ್‌ ಮೊಂತೇರೊ ನಾಯಕಿಯಾಗಿ ನಟಿಸಿದ್ದಾರೆ. ಇವರ ಜತೆಯಲ್ಲಿ ಕರಾವಳಿಯ ಭರವಸೆಯ ಕಲಾವಿದರಾದ ನವೀನ್‌ ಡಿ. ಪಡೀಲ್‌, ಅರವಿಂದ್‌ ಬೋಳಾರ, ಭೋಜರಾಜ್‌ ವಾಮಂಜೂರು, ಸತೀಶ್‌ ಬಂದಲೆ, ಮಂಜು ರೈ ಮೂಳೂರು, ವಿಸ್ಮಯ ವಿನಾಯಕ್‌, ಉಮೇಶ್‌ ಮಿಜಾರು ಮತ್ತು ಸುನೀಲ್‌ ನೆಲ್ಲಿಗುಡ್ಡೆ ಮುಂತಾದವರು ಚಿತ್ರದಲ್ಲಿದ್ದಾರೆ. ವಿಶೇಷವಾಗಿ ಕನ್ನಡದ “ಪುಟ್ಟಗೌರಿ ಮದುವೆ’ ಧಾರಾವಾಹಿಯ ಪಾತ್ರಧಾರಿ ಚಂದ್ರಕಲಾ ಮೋಹನ್‌ ಅವರು ಇಲ್ಲಿ “ಯಮುನಕ್ಕ’ ಪಾತ್ರದಲ್ಲಿ ಮಿಂಚಿದ್ದಾರೆ.

ಖ್ಯಾತ ಭಾಗವತ ಸತೀಶ್‌ ಶೆಟ್ಟಿ ಪಟ್ಲ ಅವರ ಭಾಗವತಿಕೆ ಶೈಲಿಯ ಹಾಡು ಜನಮನ ಗೆದ್ದಿದೆ. ಮೊದಲ ಬಾರಿಗೆ ಕಿಶೋರ್‌ ಕುಮಾರ್‌ ಶೆಟ್ಟಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕೀರ್ತನ್‌ ಪೂಜಾರಿ ಛಾಯಾಚಿತ್ರಗ್ರಹಣ ಮಾಡಿದ್ದಾರೆ.

ಚಿತ್ರವು ಮೊದಲ ದಿನದಿಂದಲೇ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ಗೆಲುವು ಪಡೆದು ಕೊಂಡಿದೆ. ಇಲ್ಲಿಯವರೆಗೆ ಚಿತ್ರವು 2.80 ಕೋ.ರೂ. ಗಳಿಸುವ ಮೂಲಕ ತುಳುಚಿತ್ರರಂಗದಲ್ಲಿ ಬಹುದೊಡ್ಡ ಸಾಧನೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next