Advertisement

ಹಜ್‌ಯಾತ್ರೆ: ಪ್ರಯಾಣ ದರ ಅಗ್ಗ

07:30 AM Feb 28, 2018 | Team Udayavani |

ಹೊಸದಿಲ್ಲಿ: ಹಜ್‌ ಯಾತ್ರಿಕರಿಗೆ ಕೇಂದ್ರ ಸರಕಾರ ಸಿಹಿ ಸುದ್ದಿ ನೀಡಿದೆ. ಕಳೆದ ತಿಂಗಳಷ್ಟೇ ಹಜ್‌ ಯಾತ್ರೆಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ನಿಲ್ಲಿಸಿದ್ದ ಕೇಂದ್ರ ಸರಕಾರ, ಈಗ, ಯಾತ್ರೆ ಕೈಗೊಳ್ಳುವವರಿಗೆ ವಿಮಾನ ಟಿಕೆಟ್‌ ದರದಲ್ಲಿ  ವಿನಾಯಿತಿ ನೀಡಿದೆ. ಏರ್‌ ಇಂಡಿಯಾ, ಸೌದಿ ಏರ್‌ಲೈನ್ಸ್‌ ಹಾಗೂ ಫ್ಲೈನಾಸ್‌ ವಿಮಾನಗಳಲ್ಲಿ ಪ್ರಯಾಣಿಸುವ ಯಾತ್ರಿಕರಿಗೆ ಈ ಸೌಲಭ್ಯ ಸಿಗಲಿದೆ.

Advertisement

ಮಂಗಳವಾರ, ಈ ವಿಚಾರ ಪ್ರಕ ಟಿಸಿದ ಕೇಂದ್ರ ಸಚಿವ ಮುಖಾ¤ರ್‌ ಅಬ್ಟಾಸ್‌ ನಖೀÌ, 2013-14ರಲ್ಲಿ ಅಹ್ಮದಾಬಾದ್‌ನಿಂದ ಸೌದಿಗೆ ಹೋಗುವ ಯಾತ್ರಿಕನೊಬ್ಬ ಟಿಕೆಟ್‌ ರಿಯಾಯಿತಿ ಇದ್ದರೂ ಒಂದು ಪ್ರಯಾಣಕ್ಕೆ 98,750 ರೂ. ನೀಡಬೇಕಿತ್ತು. ಈಗ, ಇದು 65,015 ರೂ. ಆಗಲಿದೆ. ಅಂತೆಯೇ, ಮುಂಬಯಿಯಿಂದ ಸೌದಿಗೆ ಹೋಗುವ ಏರ್‌ಟಿಕೆಟ್‌ ಬೆಲೆ 98,750 ರೂ.ಗಳಿಂದ 57,857 ರೂ.ಗಳಿಗೆ ಇಳಿದಿದೆ. ಈ ಮೂಲಕ, ಯುಪಿಎ ಅವಧಿಯಲ್ಲಿನ ಲೂಟಿಯನ್ನು ತಪ್ಪಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next