Advertisement

ಕುರುಬ ಸಮುದಾಯದ ಸಮಗ್ರ ಅಭಿವೃದ್ಧಿಗೆ ಪಣ: ಎಚ್ ವಿಶ್ವನಾಥ್

03:57 PM Sep 30, 2020 | Mithun PG |

ಬೆಂಗಳೂರು: ಕರ್ನಾಟಕವೂ ಸೇರಿದ ಹಾಗೆ ಇತರೆಡೆ ಹರಿದು ಹಂಚಿ ಹೋಗಿರುವ ಸಮುದಾಯವನ್ನು ಬೆಸೆಯುವ ಸಂಸ್ಥೆ ಶಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್. ನಾವೆಲ್ಲ ದೇವರಾಜ್ ಅರಸರ ಸಿದ್ಧಾಂತದಲ್ಲಿ ಬೆಳೆದು ಬಂದವರು. ಬೇರೆ ಜನಾಂಗವನ್ನು ಪ್ರೀತಿಸುತ್ತಲೇ ಕುರುಬ ಸಮುದಾಯದ ಅಭಿವೃದ್ಧಿ ಪಡಿಸಲು ಪ್ರಯತ್ನ ನಡೆಸಿದ್ದೇವೆ ಎಂದು ಎಚ್ ವಿಶ್ವನಾಥ್ ತಿಳಿಸಿದ್ದಾರೆ.

Advertisement

ಶಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್ 5 ವಾರ್ಷಿಕೋತ್ಸವ ಆಚರಣೆ ಮಾಡುವ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಂಕರಾಚಾರ್ಯರ ಹಾಗೆ ರಾಜ್ಯದ ನಾಲ್ಕು ದಿಕ್ಕುಗಳಲ್ಲಿ ಕನಕ ಪೀಠಗಳನ್ನು ಸ್ಥಾಪಿಸಿದ್ದೇವೆ. ನಾನು ಸಂಸದನಾಗಿದ್ದಾಗ ಯುರೋಪಿನ ಪ್ರವಾಸ ಮಾಡಿದ್ದೇನೆ. ನಾನು ಲಂಡನ್ನಿಗೆ ಹೋದ ಸಂದರ್ಭದಲ್ಲಿ ಹಲವಾರು ವಿಚಾರಗಳು ನನ್ನ ಗಮನಕ್ಕೆ ಬಂದವು. 750 ವರ್ಷ ಇತಿಹಾಸ ಇರುವ ಲಂಡನ್ನಿನ್ನ ಪಾರ್ಲಿಮೆಂಟ್ ನೋಡಿದಾಗ ಅಲ್ಲಿನ ಸ್ಪೀಕರ್ ಕುರಿ ಉಣ್ಣೆಯ ಮೇಲೆ ಕುಳಿತುಕೊಳ್ಳುತ್ತಾರೆ. ಅಲ್ಲಿನ ಸರ್ಕಾರಗಳು ಕುರುಬರಿಗೆ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿವೆ.

ಕುರುಬರು ಕುಲಶಾಸ್ತ್ರದ ಮೂಲಕ ರೂಪಗೊಂಡ ಒಂದು ಸಮುದಾಯ. ನಮ್ಮಲ್ಲಿ ಸೂರಿಲ್ಲದ ನೆಲೆ ಇಲ್ಲದ ಜನರಿಗೆ ಪರಿಶಿಷ್ಟ ಜನಾಂಗಕ್ಕೆ ಸೇರಿಸಬೇಕೆಂಬ ಸಂಘಟಿತ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಬಾಬ್ರಿ ಪ್ರಕರಣದ ಆರೋಪಿಗಳು ಖುಲಾಸೆ; ರಾಷ್ಟ್ರೀಯವಾದಿಗಳಿಗೆ ಇಂದು ಸಂತಸದ ದಿನ: ಈಶ್ವರಪ್ಪ

ಇದಕ್ಕಾಗಿ ಹೋರಾಟಕ್ಕೆ ನಾವು ಅಣಿಯಾಗಬೇಕು. ಅದನ್ನು 5ನೇ ವಾರ್ಷಿಕೋತ್ಸವದಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಅಕ್ಟೋಬರ್ 2 ರಂದು ವಾರ್ಷಿಕೋತ್ಸವ ನಡೆಯಲಿದೆ. ಇದನ್ನು ಭಾರತದ ಆಚೆಗೂ ಬೇರೆ ದೇಶಗಳಲ್ಲಿಯೂ ಈ ಸಮಾವೇಶ ನಡೆಸಲು ನಿರ್ಧರಿಸಲಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ಎಲ್ಲ ರಾಷ್ಟ್ರಗಳೊಂದಿಗೆ ಸಂಪರ್ಕ ಹೊಂದಲು ಪ್ರಯತ್ನ ಮಾಡುತ್ತೇವೆ ಎಂದರು.

Advertisement

ಎಚ್.ಎಂ ರೇವಣ್ಣ ಮಾತನಾಡಿ, ಕುರುಬ ಸಮುದಾಯ ರಾಷ್ಟ್ರ ಮಟ್ಟದಲ್ಲಿ ರಾಜಕೀಯವಾಗಿ ಸಾಕಷ್ಟು ಮುಂಚೂಣಿಗೆ ಬಂದಿವೆ. ಬೇರೆ ರಾಜ್ಯಗಳಲ್ಲಿ ಬೇರೆ ಹೆಸರಲ್ಲಿ ಕುರುಬರನ್ನು ಕರೆಯಲಾಗುತ್ತಿದೆ. ಆಂಧ್ರದಲ್ಲಿ ಕುರುಮ, ತಮಿಳುನಾಡಿನಲ್ಲಿ ಕುರುಮನ್ ಅಂತ ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿ ಧನಗರ್ ಅಂಥ ಕರೆಯುತ್ತಾರೆ. ಉತ್ತರ ಪ್ರದೇಶದಲ್ಲಿ ಪಾಲ್ ಕ್ಷತ್ರಿಯ ಎನ್ನುತ್ತಾರೆ.

ಇದನ್ನೂ ಓದಿ: ‘ಚಂದಮಾಮ’ದ ಜನಪ್ರಿಯ ‘ವಿಕ್ರಮ-ಬೇತಾಳ’ದ ಚಿತ್ರ ಕಲಾವಿದ ಕೆ.ಸಿ. ಶಿವಶಂಕರ್ ನಿಧನ

2015 ರಿಂದ ಬೇರೆ ಬೇರೆ.ರಾಜ್ಯಗಳಿಗೆ ಭೇಟಿ ನೀಡಿ ಸಂಘಟನೆ ಮಾಡಿದೆವು. ಹರಿಯಾಣದಲ್ಲಿ ಕುರುಬ ಸಮುದಾಯಕ್ಕೆ ಎಸ್ ಟಿ ಸರ್ಟಿಫಿಕೇಟ್ ನೀಡಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಎಸ್ಟಿ ಗೆ ಸೇರಿಸಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ. ದೆಹಲಿಯಲ್ಲಿ ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ.

5 ವಾರ್ಷಿಕೋತ್ಸವ ಬೆಂಗಳೂರಿನಲ್ಲಿ ವರ್ಚ್ಯುವಲ್ ಸಮಾವೇಶ ನಡೆಯಲಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ,  ಸಚಿವ ಈಶ್ವರಪ್ಪ, ಬಂಡೆಪ್ಪ ಕಾಶಂಪೂರ್ ಪಾಲ್ಗೊಳ್ಳಲಿದ್ದಾರೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next