Advertisement

ಡಿಸಿಎಂ ಪನ್ನೀರಸೆಲ್ವಂ ಪ್ರಮಾಣ ವಚನ ಪ್ರಶ್ನಿಸಿದ ಅರ್ಜಿ ವಜಾ

03:36 PM Sep 08, 2017 | udayavani editorial |

ಚೆನ್ನೈ : ಎಐಎಡಿಎಂಕೆ ನಾಯಕ ಓ ಪನ್ನೀರಸೆಲ್ವಂ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ PIL ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ಇಂದು ವಜಾ ಮಾಡಿದೆ. 

Advertisement

ವಕೀಲ ವಿ ಎಳಂಗೋವನ್‌ ಅವರು ಸಲ್ಲಿಸಿದ್ದ ಕೋ ವಾರಂಟೋ ಅರ್ಜಿಯನ್ನು ಮುಖ್ಯ ನ್ಯಾಯಾಧೀಶೆ ಇಂದಿರಾ ಬ್ಯಾನರ್ಜಿ ಮತ್ತು ಜಸ್ಟಿಸ್‌ ಎಂ. ಸುಂದರ್‌ ಅವರನ್ನು ಒಳಗೊಂಡ ಮದ್ರಾಸ್‌ ಹೈಕೋರ್ಟಿನ ಪ್ರಥಮ ಪೀಠ ವಜಾ ಮಾಡಿದೆ. 

ಅರ್ಜಿಯನ್ನು ವಜಾ ಮಾಡುವ ವಿಷಯದಲ್ಲಿ ಮದ್ರಾಸ್‌ ಹೈಕೋರ್ಟ್‌ ಸುಪ್ರೀಂ ಕೋರ್ಟಿನ ತೀರ್ಪನ್ನು ಉಲ್ಲೇಖೀಸಿತು. ಆ ತೀರ್ಪಿನಲ್ಲಿ ದಿವಂಗತ ದೇವಿ ಲಾಲ್‌ ಅವರನ್ನು ಉಪ ಪ್ರಧಾನಿಯಾಗಿ ನೇಮಿಸಿದುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾ ಮಾಡಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next