Advertisement

ಇ.ಡಿ. ವಿರುದ್ಧ ಕೇರಳದ ನಾಲ್ವರು ಶಾಸಕರು ಕೋರ್ಟ್‌ಗೆ

09:33 PM Aug 11, 2022 | Team Udayavani |

ಕೊಚ್ಚಿ: ಕೇರಳದಲ್ಲಿ ಆಡಳಿತಾರೂಢ ಎಲ್‌ಡಿಎಫ್ ನ ಐವರು ಶಾಸಕರು, ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿರುವ ಹಣಕಾಸು ಅಕ್ರಮಗಳ ಕುರಿತ ಪ್ರಕರಣಗಳ ವಿರುದ್ಧ ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

Advertisement

ಸಿಪಿಎಂ ಶಾಸಕರಾದ ಕೆ.ಕೆ. ಶೈಲಜಾ, ಐಬಿ ಸತೀಶ್‌, ಎಂ. ಮುಕೇಶ್‌, ಸಿಪಿಐ ಶಾಸಕ ಇ. ಚಂದ್ರಶೇಖರನ್‌, ಕಾಂಗ್ರೆಸ್‌ (ಜಾತ್ಯಾತೀತ) ಶಾಸಕ ಕದನ್ನಪಲ್ಲಿ ರಾಮಚಂದ್ರನ್‌ ಅವರು ಇ.ಡಿ. ತನಿಖೆ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೇರಳ ಮೂಲಸೌಕರ್ಯ, ಹೂಡಿಕೆ ನಿಧಿ ಮಂಡಳಿ(ಕೆಐಐಎಫ್ಬಿ) ವತಿಯಿಂದ ವಿತರಿಸಲಾಗಿದ್ದ ಮಸಾಲಾ ಬಾಂಡ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ ಇ.ಡಿ. ಪ್ರಕರಣ ದಾಖಲಿಸಿದೆ.

ಮಸಾಲಾ ಬಾಂಡ್‌ಗಳು ಅಕ್ರಮ ಎಂದು ಇ.ಡಿ. ಹೇಳಿದೆ. ಆದರೆ, ಅವುಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅನುಮತಿ ಪಡೆದೇ ವಿತರಿಸಲಾಗಿದೆ ಎಂದು ಅರ್ಜಿಯಲ್ಲಿ ಶಾಸಕರು ವಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next