Advertisement

ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಯಶಸ್ವಿ ಕಸಿ! ಹೊಸ ಪ್ರಯೋಗದಲ್ಲಿ ಅಮೆರಿಕ ವಿಜ್ಞಾನಿಗಳು

08:38 PM Oct 20, 2021 | Team Udayavani |

ನ್ಯೂಯಾರ್ಕ್‌: ವಿಶ್ವದಲ್ಲಿ ಇದೇ ಮೊದಲ ಬಾರಿಗೆ, ಹಂದಿಯ ಕಿಡ್ನಿಯೊಂದನ್ನು ಮನುಷ್ಯನಿಗೆ ಕಸಿ ಮಾಡುವ ಮೂಲಕ ಅಮೆರಿಕದ ವೈದ್ಯರು ಹೊಸ ದಾಖಲೆ ಬರೆದ ಹೆಗ್ಗಳಿಕೆಗೆ ನ್ಯೂಯಾರ್ಕ್‌ನ ಲಂಗೋನ್‌ ಹೆಲ್ತ್‌ ಸಂಸ್ಥೆಯ ವಿಜ್ಞಾನಿಗಳು ಭಾಜನರಾಗಿದ್ದಾರೆ.

Advertisement

ಪ್ರತಿದಿನ ವಿಶ್ವಾದ್ಯಂತ ಸಾವಿರಾರು ರೋಗಿಗಳು ಅಂಗಾಂಗ ವೈಫ‌ಲ್ಯದಿಂದ ಸಾವನ್ನಪ್ಪುತ್ತಿದ್ದಾರೆ. ಅಂಗಾಂಗ ದಾನಕ್ಕೆ ಕೇವಲ ಮನುಷ್ಯನನ್ನು ನಂಬದೆ, ಪ್ರಾಣಿಗಳಿಂದಲೂ ಸಹಾಯ ಪಡೆಯುವ ಪ್ರಯತ್ನ ಹಲವಾರು ಶತಮಾನಗಳಿಂದ ನಡೆಯುತ್ತಿವೆ. ಅದರ ಭಾಗವಾಗಿ, ಈ  ಇದೀಗ ಹಂದಿಯ ಕಿಡ್ನಿಯನ್ನು ಮನುಷ್ಯನಲ್ಲಿ ಕೆಲಸ ಮಾಡುವಂತೆ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಹಂದಿಯ ಕಿಡ್ನಿ ಏಕೆ?

ಹಂದಿಯ ಅಂಗಾಂಗಗಳಲ್ಲಿ ಹೆಚ್ಚು ಸಕ್ಕರೆಯಂಶವಿರುತ್ತದೆ. ಇದರಿಂದಾಗಿ ಈವರೆಗೆ ಮಾಡಿದ ಎಲ್ಲ ಪ್ರಯತ್ನಗಳಲ್ಲಿ ವಿಜ್ಞಾನಿಗಳು ವಿಫ‌ಲವಾಗಿದ್ದರು. ಈ ಬಾರಿ ಹಂದಿಯ ಕಿಡ್ನಿಯ ಜೀನ್‌ ಎಡಿಟ್‌ ಮಾಡಿ, ಸಕ್ಕರೆಯಾಂಶವನ್ನು ತೆಗೆದ ನಂತರ ಅದನ್ನು ಮನುಷ್ಯನ ದೇಹಕ್ಕೆ ಅಳವಡಿಸಲಾಗಿದೆ.

ಹೇಗೆ ನಡೆಯಿತು ಪ್ರಯೋಗ?

Advertisement

ಅಂಗಾಂಗ ದಾನ ಮಾಡಬೇಕೆಂದು ಆಸೆ ಹೊಂದಿದ್ದ ಮಹಿಳೆಯೊಬ್ಬಳು ಕೊನೆಯುಸಿರೆಳೆದ ನಂತರ, ಕುಟುಂಬದ ಅನುಮತಿಯೊಂದಿಗೆ ಆಕೆಯ ದೇಹಕ್ಕೆ ಹಂದಿಯ ಕಿಡ್ನಿ ಅಳವಡಿಸಲಾಗಿದೆ. ಸಾಮಾನ್ಯವಾಗಿ, ಮನುಷ್ಯ ಮೃತನಾದ ನಂತರ 36 ಗಂಟೆಗಳವರೆಗೆ ಕಿಡ್ನಿ ಕಾರ್ಯನಿರ್ವಹಿಸುತ್ತಿರುತ್ತವೆ. ಹಾಗಾಗಿ, ಎರಡು ದಿನಗಳ ಕಾಲ ಅಧ್ಯಯನದಲ್ಲಿ ಆ ಕಿಡ್ನಿ ಮನುಷ್ಯರ ಕಿಡ್ನಿಯಂತೆ ಸಹಜವಾಗಿ ಕಾರ್ಯ ನಿರ್ವಹಿಸುತ್ತಿರುವುದು ತಿಳಿದುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಂಗನಿಗಿಂತ ಹಂದಿ ಕಿಡ್ನಿ ಬೆಸ್ಟ್‌:

17ನೇ ಶತಮಾನದಿಂದಲೇ ಮನುಷ್ಯನ ದೇಹಕ್ಕೆ ಪ್ರಾಣಿ ರಕ್ತ ಬಳಕೆ ಮಾಡುವ ಪ್ರಯತ್ನ ನಡೆದಿದೆ. ಈ ಹಿಂದೆ ಅಮೆರಿಕದ ಬೇಬಿ ಫೇ ಹೆಸರಿನ ಮಗುವಿಗೆ ಬಬೂನ್‌ ಜಾತಿಯ ಮಂಗನ ಹೃದಯವನ್ನು ಅಳವಡಿಸಲಾಗಿತ್ತು. ಆ ಮಗು 21 ದಿನಗಳ ಕಾಲ ಅದೇ ಹೃದಯದೊಂದಿಗೆ ಉಸಿರಾಡಿತ್ತು. ಆದರೆ, ಈ ಪ್ರಯೋಗದಿಂದ ಹಂದಿಯ ಅಂಗಾಂಗ ಮನುಷ್ಯನಿಗೆ ಹೆಚ್ಚು ಹೊಂದಾಣಿಕೆಯಾಗುವ ಹೊಸ ಸಾಧ್ಯತೆಯನ್ನು ಕಂಡುಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ :ಕ್ಯಾಶ್‌ಲೆಸ್‌ ವ್ಯವಹಾರದತ್ತ ಕೊಂಕಣ ರೈಲ್ವೇ : ಎಸ್ ಬಿಐನೊಂದಿಗೆ ಕೊಂಕಣ ರೈಲ್ವೇ ಒಪ್ಪಂದ

Advertisement

Udayavani is now on Telegram. Click here to join our channel and stay updated with the latest news.

Next