Advertisement

ಗಂಗೊಳ್ಳಿ : ಹಂದಿ ತಂದವರನ್ನು ವಾಪಸ್‌ ಕಳುಹಿಸಿದರು!

01:00 AM Dec 01, 2018 | Karthik A |

ಗಂಗೊಳ್ಳಿ: ಗಂಗೊಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿ ವೇಳೆ ಹಂದಿಗಳನ್ನು ಬಿಟ್ಟು ಹೋಗುತ್ತಿದ್ದ ಜನರಿಂದಲೇ ಗುರುವಾರ ಗಂಗೊಳ್ಳಿಯ ಜನರು ವಾಪಸ್‌ ಕಳುಹಿಸಿದ ಘಟನೆ ನಡೆದಿದೆ. ಗಂಗೊಳ್ಳಿಯ ಬೀಚ್‌ ರಸ್ತೆ ಪರಿಸರದಲ್ಲಿ ಹಂದಿ ಮರಿಗಳನ್ನು ಬಿಡುತ್ತಿದ್ದ  ಸಂದರ್ಭ ಎಚ್ಚರಗೊಂಡ ಸ್ಥಳೀಯರೊಬ್ಬರು ಹಂದಿ ಮರಿಗಳನ್ನು ತಂಡ ಟಾಟಾ ಏಸ್‌ ವಾಹನವನ್ನು ಬೆನ್ನಟ್ಟಿದರು. ಗಂಗೊಳ್ಳಿ ಮ್ಯಾಂಗನೀಸ್‌ ರಸ್ತೆ ವಠಾರದಲ್ಲಿ ವಾಹನವನ್ನು ಅಡ್ಡಗಟ್ಟಿದ ಸ್ಥಳೀಯರು ವಾಹನದಲ್ಲಿದ್ದ ಹಾವೇರಿ ಮೂಲದ ಮೂವರನ್ನು ತರಾಟೆಗೆ ತೆಗೆದುಕೊಂಡು ಮೂವರನ್ನು ವಾಹನ ಸಮೇತ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Advertisement

ಆರೋಪಿತರು ಅಸೋಡುವಿನಲ್ಲಿ ಟೆಂಟ್‌ ಹಾಕಿ ವಾಸವಿದ್ದು, ಮೂಲತಃ ಹಾವೇರಿಯವರಾಗಿದ್ದಾರೆ. ಇವರು ಹಂದಿ ಮರಿಗಳನ್ನು ಬೇರೆ ಬೇರೆ ಕಡೆಗಳಲ್ಲಿ ಬಿಟ್ಟು, ಅದು ದೊಡ್ಡದಾದ ಬಳಿಕ ಅದನ್ನು ಹಿಡಿದು ಮಾರಾಟ ಮಾಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೆಲ ಸಮಯದ ಹಿಂದೆಯೇ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಗಂಗೊಳ್ಳಿ ಗ್ರಾ.ಪಂ. ಹಾಗೂ ಪೊಲೀಸ್‌ ಠಾಣೆಗೆ ಮೌಖಿಕ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next