Advertisement

ಪೈ ಇಂಟರ್‌ನ್ಯಾಷನಲ್‌ ಲಕ್ಕಿ ಗ್ರಾಹಕರ ಆರಿಸಿದ ಪುಟಾಣಿಗಳು

12:15 PM Dec 11, 2017 | |

ಬೆಂಗಳೂರು: ದಸರಾ ಮತ್ತು ದೀಪಾವಳಿ ವೇಳೆ ಪೈ ಇಂಟರ್‌ನ್ಯಾಷನಲ್‌ ಎಲೆಕ್ಟ್ರಾನಿಕ್ಸ್‌ ಸಂಸ್ಥೆ ಹಮ್ಮಿಕೊಂಡಿದ್ದ ಮೆಗಾ ಫೆಸ್ಟಿವಲ್‌ ಸೇಲ್‌ನಲ್ಲಿ ಪೈ ಇಂಟರ್‌ನ್ಯಾಷನಲ್‌ ಮಳಿಗೆಗಳಲ್ಲಿ ವಿವಿಧ ಉತ್ಪನ್ನ ಖರೀದಿಸಿದ ಗ್ರಾಹಕರಿಗೆ ನೀಡಲಾಗಿದ್ದ ಲಕ್ಕಿ ಕೂಪನ್‌ಗಳ ಡ್ರಾ ಭಾನುವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಿತು.

Advertisement

ಸಾವಿರಾರು ಗ್ರಾಹಕರ ಸಮ್ಮಿಖದಲ್ಲೇ ಪುಟಾಣಿಗಳು ಲಕ್ಕಿ ಕೂಪನ್‌ ಎತ್ತುವ ಮೂಲಕ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿದರು. ಮೆಗಾ ಬಂಪರ್‌ ಬಹುಮಾನವಾಗಿ 10 ಗ್ರಾಹಕರಿಗೆ ತಲಾ ಒಂದೊಂದು ಹ್ಯೂಂಡೈ ಎಕ್ಸ್‌ಸೆಂಟ್‌ ಕಾರು, ಸೂಪರ್‌ ಬಂಪರ್‌ ಬಹುಮಾನವಾಗಿ 10 ಅದೃಷ್ಟಶಾಲಿಗಳಿಗೆ ತಲಾ ಒಂದೊಂದು ಹ್ಯೂಂಡೈ ಗ್ರ್ಯಾಂಡ್‌ ಐ10 ಕಾರು, ಬಂಪರ್‌ ಬಹುಮಾನವಾಗಿ 10 ಲಕ್ಕಿ ಗ್ರಾಹಕರಿಗೆ ತಲಾ ಒಂದೊಂದು ಹ್ಯೂಂಡೈ ಇಯೊನ್‌ ಕಾರು ವಿತರಿಸಲಾಗುತ್ತದೆ.

ಮೊದಲ ಬಹುಮಾನವಾಗಿ 320 ಲಕ್ಕಿ ಗ್ರಾಹಕರಿಗೆ 50 ಸಾವಿರ ರೂ. ಮೌಲ್ಯದ ಹಾಗೂ ಎರಡನೇ ಬಹುಮಾನವಾಗಿ 320 ಲಕ್ಕಿ ಗ್ರಾಹಕರಿಗೆ 25 ಸಾವಿರ ರೂ. ಮೌಲ್ಯದ ಉಚಿತ ಶಾಪಿಂಗ್‌ ಫೈ ಮಳಿಗೆಗಳಲ್ಲಿ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಮೂರನೇ ಬಹುಮಾನ ಪಡೆದ 1600 ಗ್ರಾಹಕರಿಗೆ 5 ಸಾವಿರ ರೂ. ಮೌಲ್ಯದ ಉಚಿತ ಶಾಪಿಂಗ್‌ ಮತ್ತು ನಾಲ್ಕನೇ ಬಹುಮಾನ ಪಡೆದ 80 ಸಾವಿರ ಗ್ರಾಹಕರಿಗೆ 500 ರೂ. ಮೌಲ್ಯದ ಉಚಿತ ಶಾಪಿಂಗ್‌ ಅವಕಾಶ ನೀಡಲಾಗುತ್ತದೆ.

ಗ್ರಾಹಕರ ಮೆಚ್ಚುಗೆ: ಭಾನುವಾರ ನಡೆದ ಮೆಗಾ ಫೆಸ್ಟಿವಲ್‌ ಸೇಲ್‌ ಲಕ್ಕಿ ಕೂಪನ್‌ ಡ್ರಾ ಕಾರ್ಯಕ್ರಮದಲ್ಲಿ 82,270 ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗಿದೆ. ಡ್ರಾ ಸಂದರ್ಭದಲ್ಲಿ ಸೇಲ್‌ ಆಗದೇ ಉಳಿದಿರುವ ಕೂಪನ್‌ ನಂಬರ್‌ ಬಂದಾಗ ಪುನಃ ಡ್ರಾ ಮಾಡಲಾಗಿತ್ತು. ಮೂರ್‍ನಾಲ್ಕು ಬಾರಿ ಉಳಿಕೆಯಾಗಿದ್ದ ಕೂಪನ್‌ ಬಂದಾಗ ಪಾರದರ್ಶಕವಾಗಿ ಗ್ರಾಹಕರ ಎದುರಲ್ಲೇ ಪುನಃ ಡ್ರಾ ಮಾಡಲಾಗಿದೆ. ಪೈ ಇಂಟರ್‌ನ್ಯಾಷನಲ್‌ ಸಂಸ್ಥೆಯ ಈ ಪ್ರಾಮಾಣಿಕತೆಗೆ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಪೈ ಇಂಟರ್‌ನ್ಯಾಷನಲ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜಕುಮಾರ್‌ ಪೈ ಮಾತನಾಡಿ, ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗದಲ್ಲಿ 92 ಮಳಿಗೆಗಳನ್ನು ಹೊಂದಿದ್ದೇವೆ. ತೆಲಂಗಾಣದಲ್ಲಿ 20 ಮತ್ತು ಆಂಧ್ರದಲ್ಲಿ ಒಂದು ಮಳಿಗೆ ಇದೆ. ಮುಂದಿನ ವರ್ಷದಲ್ಲಿ 150 ಮಳಿಗೆ ಹೊಂದಲಿದ್ದೇವೆ. ಪೈ ಇಂಟರ್‌ನ್ಯಾಷನ್‌ನಿಂದ ಈ ವರ್ಷ 1070 ಕೋಟಿ ವಹಿವಾಟು ನಡೆಸಿದ್ದೇವೆ. ಫೈ ಇಂಟರ್‌ನ್ಯಾಷನಲ್‌ ಗ್ರೂಪ್‌ ಅಡಿಯಲ್ಲಿ  1200 ಕೋಟಿ ವ್ಯವಹಾರ ಮಾಡಿದ್ದು, 1500 ಕೋಟಿಗೆ ಏರಿಸುವ ಗುರಿ ಇದೆ ಎಂದು ಹೇಳಿದರು.

Advertisement

ಪೈ ಇಂಟರ್‌ನ್ಯಾಷನಲ್‌ ಗ್ರಾಹಕರಿಗಾಗಿ ಪ್ರತಿ ವರ್ಷ 4 ಬಾರಿ ಲಕ್ಕಿ ಡ್ರಾ ಕೂಪನ್‌ ವ್ಯವಸ್ಥೆ ಮಾಡುತ್ತದೆ. ಮುಂದಿನ ವರ್ಷದಿಂದ 6 ಬಾರಿ ಮಾಡುವ ಚಿಂತನೆ ಇದೆ. ಪ್ರತಿ ವರ್ಷ 30 ಕಾರು ಬಹುಮಾನವಾಗಿ ನೀಡುತ್ತೇವೆ. ಅದನ್ನು 100 ಕಾರಿಗೆ ಏರಿಸುವ ಯೋಚನೆಯೂ ಇದೆ ಎಂದರು. ಸಾಮಾಜಿಕ ಬದ್ಧತೆಯ ಆಧಾರದಲ್ಲಿ ಶಿಕ್ಷಣ, ಪರಿಸರ ಹಾಗೂ ಹಿರಿಯ ನಾಗರಿಕ ಸೇವೆಯಲ್ಲೂ ತೊಡಗಿಕೊಂಡಿದ್ದೇವೆ.

ಅನಾಥ ಮಕ್ಕಳಿಗೆ ಶಿಕ್ಷಣದ ಜತೆಗೆ 20 ಸಾವಿರಕ್ಕೂ ಅಧಿಕ ಮಕ್ಕಳಿಗೆ ನೋಟ್‌ ಬುಕ್‌ ವಿತರಣೆ ಮಾಡುತ್ತಿದ್ದೇವೆ. ಫೈ ಫ‌ರ್ನಿಚರ್‌ ಮಳಿಗೆಯನ್ನು ಬೆಂಗಳೂರಿನ ಐದು ಕಡೆ ತೆರೆದಿದ್ದೇವೆ. ನಮ್ಮದೇ ಉತ್ಪನ್ನವಾದ ಹೆನ್ರಿ ಟಿವಿ ಉತ್ಕೃಷ್ಟ ಗುಣಮಟ್ಟದಲ್ಲಿ ನೀಡುತ್ತಿದ್ದೇವೆ ಎಂದು ಹೇಳಿದರು. ಸಂಸ್ಥೆಯ ಹಣಕಾಸು ವಿಭಾಗದ ನಿರ್ದೇಶಕಿ ಮೀನಾ ರಾಜಕುಮಾರ್‌ ಪೈ, ನಿರ್ದೇಶಕ ಗುರುಪ್ರಸಾದ್‌ ಪೈ, ಉತ್ತಮ್‌ ಪೈ, ಅಜಿತ್‌ ಕುಮಾರ್‌ ಪೈ ಮೊದಲಾದವರು ಉಪಸ್ಥಿತರಿದ್ದರು.

ಮಳಿಗೆ, ಫೇಸ್‌ಬುಕ್‌ನಲ್ಲಿ ಫಲಿತಾಂಶ: ಲಕ್ಕಿ ಡ್ರಾ ವಿಜೇತರ ಹೆಸರು, ವಿಳಾಸ ಹಾಗೂ ಬಹುಮಾನದ ಮಾಹಿತಿ ಪೈ ಇಂಟರ್‌ನ್ಯಾಷನಲ್‌ನ ಎಲ್ಲಾ ಮಳಿಗೆಗಳಲ್ಲಿ ಪ್ರಕಟಿಸಲಾಗುತ್ತದೆ. ಫೇಸ್‌ಬುಕ್‌ ಪೇಜ್‌ನಲ್ಲೂ ಅಪ್‌ಲೋಡ್‌ ಮಾಡುತ್ತೇವೆ. ಬಹುಮಾನ ವಿಜೇತರ ಹೆಸರು ಹಾಗೂ ವಿಳಾಸ ಹುಡುಕಿ ಎಲ್ಲ ಅದೃಷ್ಟಶಾಲಿಗಳಿಗೂ ಬಹುಮಾನ ತಲುಪಿಸುತ್ತೇವೆ  ಎಂದು ರಾಜ್‌ಕುಮಾರ್‌ ಪೈ ತಿಳಿಸಿದರು.

ಪ್ರತಿ ಕುಟಂಬಕ್ಕೂ ಪೈ ಇಂಟರ್‌ನ್ಯಾಷನಲ್‌ನ ಉತ್ಪನ್ನ ತಲುಪಿಸುವುದು ನಮ್ಮ ಗುರಿ. ಗ್ರಾಹಕರು ನಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು, ಪ್ರಾಮಾಣಿಕ ಸೇವೆ ನೀಡುತ್ತಿದ್ದೇವೆ. ಉತ್ಕೃಷ್ಟ ಗುಣಮಟ್ಟ ಹಾಗೂ ಮೌಲ್ಯಯುತ ಉತ್ಪನ್ನದ ಮೂಲಕ ಗ್ರಾಹಕರನ್ನು ಸದಾ ಸಂತೋಷವಾಗಿಡುವುದೇ ನಮ್ಮ ಧ್ಯೇಯ.
-ರಾಜಕುಮಾರ್‌ ಪೈ, ಎಂಡಿ, ಫೈ ಇಂಟರ್‌ನ್ಯಾಷನಲ್‌

Advertisement

Udayavani is now on Telegram. Click here to join our channel and stay updated with the latest news.

Next