ಚೆನ್ನೈ: ಬಹುಭಾಷಾ ನಟಿ ಕೀರ್ತಿ ಸುರೇಶ್ (Keerthy Suresh) ತಮ್ಮ ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ (Antony Thattil) ಅವರೊಂದಿಗೆ ಗುರುವಾರ(ಡಿ.12 ರಂದು) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಎರಡು ಕುಟುಂಬದವರ ಸಮ್ಮುಖದಲ್ಲಿ ಗೋವಾದಲ್ಲಿ ವಿವಾಹ ಸಮಾರಂಭ ನೆರವೇರಿದೆ. ಕೀರ್ತಿ ಸುರೇಶ್ ಮತ್ತು ಆಂಟೋನಿ ತಟ್ಟಿಲ್ ಅಯ್ಯಂಗಾರ್ ಪದ್ಧತಿಯಂತೆ ವಿವಾಹವಾಗಿದ್ದಾರೆ.
#ForTheLoveOfNyke ಎನ್ನುವ ಕ್ಯಾಪ್ಷನ್ ಬರೆದು ಕೀರ್ತಿ ವಿವಾಹದ ಫೋಟೋವನ್ನು ಹಂಚಿಕೊಂಡಿದ್ದಾರೆ. ಆಂಟೋನಿ – ಕೀರ್ತಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಮದುವೆ ಸಮಾರಂಭಕ್ಕೆ ದಳಪತಿ ವಿಜಯ್ ಸೇರಿದಂತೆ ನಟಿಯ ಆತ್ಮೀಯ ಸ್ನೇಹಿತರು ಭಾಗಿಯಾಗಿದ್ದಾರೆ. ರಾಶಿ ಖನ್ನಾ, ಮೌನಿ ರಾಯ್ ಮತ್ತು ಹನ್ಸಿಕಾ ಮೋಟ್ವಾನೆ ಸೇರಿದಂತೆ ಹಲವರು ನವ ದಂಪತಿಗೆ ಶುಭಕೋರಿದ್ದಾರೆ.
ಆಂಟೋನಿ ದುಬೈ ಮೂಲದ ಉದ್ಯಮಿಯಾಗಿದ್ದು, ಕಳೆದ 15 ವರ್ಷಗಳಿಂದ ಕೀರ್ತಿ ಹಾಗೂ ಆಂಟೋನಿ ರಿಲೇಷನ್ ಶಿಪ್‌ನಲ್ಲಿದ್ದರು.
ದಳಪತಿ ವಿಜಯ್ ಮದುವೆ ಸಂಭ್ರಮದಲ್ಲಿ ಕಾಣಿಸಿಕೊಂಡ ಫೋಟೋ.. 👇🏻
ಇತ್ತೀಚೆಗೆ ಕೀರ್ತಿ ಅವರ ಮದುವೆ ಸುದ್ದಿ ವೈರಲ್ ಆಗಿತ್ತು. ಕೀರ್ತಿ ಆಂಟೋನಿ ಜತೆಗಿನ ದೀಪಾವಳಿ ಹಬ್ಬದ ಫೋಟೋವನ್ನು ಹಂಚಿಕೊಂಡಿದ್ದರು. ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸದ್ಯ ಕೀರ್ತಿ – ಆಂಟೋನಿ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.