Advertisement

ಮೂಡಿಗೆರೆ: ಅಪಘಾತ ತಪ್ಪಿಸಲು ಹೋಗಿ ಪಲ್ಟಿಯಾದ ಪಿಕಪ್: 10 ಕ್ಕೂ ಹೆಚ್ಚು ಹಂದಿಗಳು ಸಾವು

12:41 PM May 07, 2022 | Team Udayavani |

ಮೂಡಿಗೆರೆ: ಕಾರು ಅಪಘಾತ ತಪ್ಪಿಸಲು ಹೋಗಿ ಹಂದಿಗಳನ್ನು ಹೊತ್ತ ವಾಹನವೊಂದು ಪಲ್ಟಿಯಾಗಿ 10 ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿರುವ ಘಟನೆ ಬಾಳೂರಿನ ವಾಟೇಖಾನ್ ಕಲ್ಲಕ್ಕಿ ಬಳಿ ನಡೆದಿದೆ.

Advertisement

ಚಿಕ್ಕಮಗಳೂರು ಜಿಲ್ಲೆ ತಾಲೂಕಿನ ಬಾಳೂರು ಠಾಣಾ ವ್ಯಾಪ್ತಿಯಲ್ಲಿ ಕಾರು ಅಪಘಾತವನ್ನು ತಪ್ಪಿಸಲು ಹೋಗುವ ವೇಳೆ ಹಂದಿಗಳನ್ನು ಹೊತ್ತು ಸಾಗುತ್ತಿದ್ದ ಪಿಕಪ್ ವಾಹನ ಪಲ್ಟಿಯಾಗಿದ್ದು, ವಾಹನದಲ್ಲಿದ್ದ 10 ಕ್ಕೂ ಹೆಚ್ಚು ಹಂದಿಗಳು ಸ್ಥಳದಲ್ಲೇ ಸಾವನ್ನಪ್ಪಿದೆ.

ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.

Advertisement

Udayavani is now on Telegram. Click here to join our channel and stay updated with the latest news.

Next