Advertisement

Belthangady ಪಿಕಪ್‌- ಕಾರು ಅಪಘಾತ, ಚಾಲಕನಿಗೆ ಹಲ್ಲೆಗೆ ಯತ್ನ

09:49 PM Mar 06, 2024 | Team Udayavani |

ಬೆಳ್ತಂಗಡಿ: ಮರೋಡಿ ಗ್ರಾಮದ ಕುಂಜೋಡಿಯಲ್ಲಿ ಕಾರೊಂದು ಪಿಕಪ್‌ಗೆ ಢಿಕ್ಕಿಯಾದ ಪರಿಣಾಮ ಕಾರು ಪಲ್ಟಿಯಾದ ಘಟನೆ ಮಾ. 6ರಂದು ನಡೆದಿದೆ.

Advertisement

ಘಟನೆ ಬಳಿಕ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಪಿಕಪ್‌ ಚಾಲಕ ಬೆಳ್ತಂಗಡಿ ನಿವಾಸಿ ಸಾಧಿಕ್‌ ಝೈನುದ್ದೀನ್‌ (24) ಅವರ ಮೇಲೆ ಹಲ್ಲೆಗೆ ಯತ್ನಿಸಿದಾಗ ತಪ್ಪಿಸಿಕೊಂಡು ಸ್ಥಳದಿಂದ ಓಡಿ ಪಾರಾಗಿದ್ದರು. ಬಳಿಕ ಹಲ್ಲೆಗೆ ಮುಂದಾದವರು ಘಟನಾ ಸ್ಥಳಕ್ಕೆ ಇನ್ನಿಬ್ಬರನ್ನು ಬರಮಾಡಿ, ಪಿಕಪ್‌ನ ಗಾಜುಗಳನ್ನು ಒಡೆದು ಹಾಕಿದ್ದಲ್ಲದೇ, ಬಾಗಿಲನ್ನು ಜಖಂ ಗೊಳಿಸಿದ್ದಾರೆ. ಇದರಿಂದ ಸಾಧಿಕ್‌ ಝೈನುದ್ದೀನ್‌ರಿಗೆ ಸುಮಾರು 3 ಲಕ್ಷ ರೂ. ನಷ್ಟ ಉಂಟಾಗಿದೆ ಎಂಬುದಾಗಿ ವೇಣೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next