Advertisement

ಬೈಕ್‌ಗೆ ಪಿಕಪ್‌ ಢಿಕ್ಕಿ : ಮಹಿಳೆ ಸಾವು, ಪತಿ ಗಂಭೀರ

08:44 AM May 22, 2018 | Team Udayavani |

ಕುಂದಾಪುರ: ಆಲೂರು ಪೇಟೆಯಲ್ಲಿ ಮೇ 20ರಂದು ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗೆ ಪಿಕಪ್‌ ಢಿಕ್ಕಿ ಹೊಡೆದು  ಮಹಿಳೆ ಸಾವನ್ನಪ್ಪಿದ್ದಾರೆ. 

Advertisement

ಉಡುಪಿ ಅಂಬಾಗಿಲಿನ ಕಮಲಾಕ್ಷ ಶೇಟ್‌ ಅವರ ಪತ್ನಿ ರೇಶ್ಮಾ ಶೇಟ್‌ (42) ಮೃತರು. 

ಕಮಲಾಕ್ಷ ಶೇಟ್‌ ಬೈಕ್‌ನಲ್ಲಿ  ಪತ್ನಿ ರೇಶ್ಮಾ ಶೇಟ್‌ ಹಾಗೂ ಮಗನನ್ನು ಕುಳ್ಳಿರಿಸಿಕೊಂಡು ಚಿತ್ತೂರು ಕಡೆಯಿಂದ ಮುಳ್ಳಕಟ್ಟೆ ಕಡೆಗೆ ಹೋಗಲು ಆಲೂರು ಪೇಟೆಯಲ್ಲಿ ಸೂಯೇìದಯ ಜನರಲ್‌ ಸ್ಟೋರ್‌ ಬಳಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದಾಗ ಪಿಕಪ್‌ ವಾಹನ ಕಮಲಾಕ್ಷ ಅವರ ಸುಜುಕಿ ಬೈಕ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ಗಾಯಗೊಂಡಿದ್ದು, ಕಮಲಾಕ್ಷ  (46) ಅವರನ್ನು ಮಣಿಪಾಲದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ರೇಶ್ಮಾ ಶೇಟ್‌ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಅವರು ಮೃತಪಟ್ಟಿದ್ದರು.
ಪಿಕಪ್‌ ಚಾಲಕ ಸತ್ಯಪ್ರಸಾದ್‌  ವಿರುದ್ಧ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next