Advertisement

ಪೈ ಇಂಟರ್‌ನ್ಯಾಶನಲ್‌ ಲಕ್ಕಿ ಡ್ರಾ: 20 ಅದೃಷ್ಟ ಶಾಲಿಗಳಿಗೆ ಕಾರು

06:44 PM Dec 12, 2023 | Team Udayavani |

ಬೆಂಗಳೂರು: ಗೃಹೋಪಯೋಗಿ ವಸ್ತುಗಳ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ಪೈ ಇಂಟರ್‌ ನ್ಯಾಶನಲ್‌ ಸಂಸ್ಥೆಯು ತನ್ನ ಗ್ರಾಹಕರಿಗಾಗಿ ಭಾನುವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡ “ಲಕ್ಕಿ ಡ್ರಾ’ನಲ್ಲಿ 20 ಅದೃಷ್ಟ ಶಾಲಿ ಗ್ರಾಹಕರಿಗೆ ಕಾರು ದೊರಕಿದೆ.

Advertisement

ಪೈ ಇಂಟರ್‌ ನ್ಯಾಶನಲ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್‌ ಪೈ ಮಾತನಾಡಿ, ಗ್ರಾಹಕರು ತಮ್ಮ ಹತ್ತಿರದ ಪೈ ಶೋರೂಮ್‌ನಲ್ಲಿ ಲಕ್ಕಿ ಡ್ರಾ ಫಲಿತಾಂಶಗಳನ್ನು ಪರಿಶೀಲಿಸಬಹುದು ಅಥವಾ ಪೈ ಇಂಟರ್‌ ನ್ಯಾಶನಲ್‌ನ ಸಾಮಾಜಿಕ ಜಾಲತಾಣದಲ್ಲಿ ಪರಿಶೀಲಿಸ ಬಹುದಾಗಿದೆ ಎಂದು ಹೇಳಿದರು.

ಇನ್ನೂ ಪ್ರತಿ ಬಾರಿಯಂತೆ ವಿಜೇತರಿಗೆ ಲಕ್ಕಿ ಕೂಪನ್‌ ನಡೆಸಿದ್ದು, ಡ್ರಾವನ್ನು ಪಾರದರ್ಶಕತೆಯಿಂದ ನಡೆಸಿ ಗ್ರಾಹಕರಿಗೆ ಬಹುಮಾನ ವಿತರಣೆ ಮಾಡಲಾಗಿದೆ. ಲಕ್ಕಿ ಡ್ರಾನಲ್ಲಿ ಒಟ್ಟು 8 ಕೋಟಿ ಲಾಯಲ್ಟಿ ಪಾಯಿಂಟ್‌ ಹಾಗೂ 30 ಲಕ್ಷ ರೂ. ಮೊತ್ತದ ಉಚಿತ ಶಾಪಿಂಗ್‌ ಪೈ ಇಂಟರ್‌ ನ್ಯಾಶನಲ್‌ ಅದೃಷ್ಟಶಾಲಿ ವಿಜೇತರಿಗೆ ಸಿಗಲಿದೆ ಎಂದರು. 10 ಅದೃಷ್ಟಶಾಲಿ ಗ್ರಾಹಕರಿಗೆ ಮೆಗಾ ಬಂಪರ್‌ ಬಹುಮಾನವಾಗಿ ಹುಂಡೈ ಅವಾರ, 10 ಅದೃಷ್ಟಶಾಲಿಗೆ ಸೂಪರ್‌ ಬಂಪರ್‌ ಬಹುಮಾನವಾಗಿ ಹುಂಡೈ ಐ 10, ಉಚಿತ ಶಾಂಪಿಂಗ್‌ ಲಕ್ಕಿ ಕೂಪನ್‌ ನಡಿ ಸಾವಿರಾರು ಗ್ರಾಹಕರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪೈ ಇಂಟರ್‌ ನ್ಯಾಶನಲ್‌ನ ನಿರ್ದೇಶಕ ರಾಹುಲ್‌ ಪೈ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next