Advertisement
ಮಲ್ಪೆ, ಅಂಬಲಪಾಡಿ, ಗುಂಡಿಬೈಲು, ದೊಡ್ಡಣಗುಡ್ಡೆ, ಮಠದಬೆಟ್ಟು, ಬಡಾನಿಡಿ ಯೂರು ಹಂಪನಕಟ್ಟೆ, ಕೆಮ್ಮಣ್ಣು, ಸಂತೆಕಟ್ಟೆ, ಉದ್ಯಾವರ, ಉಪ್ಪೂರು ಭಾಗದ ಮನೆಯ ಆವರಣ, ಗಾರ್ಡನ್, ದನದ ಕೊಟ್ಟಿಗೆ, ಕೋಳಿ ಗೂಡು ಸಮೀಪ ಹೆಬ್ಟಾವು ಕಾಣಿಸಿಕೊಳ್ಳುವುದು ಇತ್ತೀಚೆಗೆ ಜಾಸ್ತಿಯಾಗಿದೆ. ಮನೆ ಪರಿಸರದಲ್ಲಿ ಸಂಜೆ, ರಾತ್ರಿ ವೇಳೆ ಹೆಬ್ಟಾವು ಕಂಡ ಕೂಡಲೇ ಜನರು ಉರಗ ತಜ್ಞರು, ಅರಣ್ಯ ಇಲಾಖೆಯನ್ನು ಸಂಪರ್ಕಿಸುತ್ತಿದ್ದಾರೆ.
ಡಿಸೆಂಬರ್‌ನಿಂದ ಫೆಬ್ರವರಿವರೆಗೂ ಹೆಬ್ಟಾವುಗಳ ಮಿಲನ ಕಾಲವಾಗಿದೆ. ಹೆಬ್ಟಾವುಗಳು ದೈತ್ಯದೇಹಿ ಆಗಿರುವುದ ರಿಂದ ಶತ್ರುಗಳಿಂತ ತಮಗೆ ಆಗಬಹು ದಾದ ಅಪಾಯವನ್ನು ತಪ್ಪಿಸಿಕೊಳ್ಳಲು ರಾತ್ರಿ ವೇಳೆ ಹೆಚ್ಚು ಸಂಚರಿಸುತ್ತವೆ. ಮಿಲನ ಸಮಯದಲ್ಲಿ ಗಂಡು-ಹೆಣ್ಣುಗಳ ಸಂಪರ್ಕಕ್ಕೆ ಸಂಜೆ, ಹಗಲು ಹೊತ್ತಿನಲ್ಲಿ ಓಡಾಟ ಇರುತ್ತದೆ. ಈ ಸಮಯದಲ್ಲಿ ಮಾತ್ರ ಇವುಗಳು ಕಾಣಿಸಿಕೊಳ್ಳುತ್ತದೆ.
Related Articles
Advertisement
ಸಾಯಿಸಿದ್ರೆ ಜಾಮೀನು ರಹಿತ ಜೈಲುಭಾರತದಲ್ಲಿ ವನ್ಯಜೀವಿ ಸಂರಕ್ಷಣೆ ಕಾಯೆx ಅಡಿಯಲ್ಲಿ ಹುಲಿಯಷ್ಟೇ ಪ್ರಧಾನ ಆದ್ಯತೆಯನ್ನು ಹೆಬ್ಟಾವುಗಳ ಸಂರಕ್ಷಣೆಗೂ ನೀಡಲಾಗಿದೆ. ವನ್ಯಜೀವಿ ಕಾಯ್ದೆ ಸಂರಕ್ಷಿತ ಉರಗ ಪಟ್ಟಿಯಲ್ಲಿ ಶೆಡ್ನೂಲ್1, ಪಾರ್ಟ್ 1ರಲ್ಲಿ ಹೆಬ್ಟಾವಿಗೆ ಸ್ಥಾನ ನೀಡಲಾಗಿದೆ. ಅದರಂತೆ ಹೆಬ್ಟಾವುಗಳಿಗೆ ಹಿಂಸೆ ನೀಡಿ, ಹೊಡೆದು ಸಾಯಿಸಿದರೆ ಕಾನೂನು ಪ್ರಕಾರ ಜಾಮೀನು ರಹಿತ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಭಾರತದ ಹೆಬ್ಟಾವುಗಳು ಇದುವರೆಗೆ ಆಹಾರಕ್ಕಾಗಿ ಮನುಷ್ಯರನ್ನು, ಮಕ್ಕಳನ್ನು ನುಂಗಿದ ದಾಖಲೆ ಎಲ್ಲಿಯೂ ನಡೆದಿಲ್ಲ. ಎಲ್ಲ ಹಾವುಗಳಂತೆ ಹಿಡಿಯಲು ಹೋಗಿ ನೋವು ಮಾಡಿದರೆ ಇದು ಸಹ ಕಚ್ಚುತ್ತದೆ. ಇದರಲ್ಲಿ ವಿಷ ಇರುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು, ಉರಗ ತಜ್ಞರು ತಿಳಿಸಿದ್ದಾರೆ. ಕೃಷಿ ರಕ್ಷಕ ಹೆಬ್ಟಾವು
ಹೆಬ್ಟಾವುಗಳು ವಾಸ ಮಾಡುತ್ತಿರುವ ಜಾಗವನ್ನು ಆರೋಗ್ಯ ಪೂರ್ಣ ಪರಿಸರ ಎನ್ನುತ್ತಾರೆ. ಈ ಹಿಂದೆ ಉಡುಪಿ ಸುತ್ತಮುತ್ತ ವಿಶಾಲ ಕೃಷಿ ಪ್ರದೇಶಗಳಿದ್ದು, ಹೆಬ್ಟಾವುಗಳ ವಾಸಸ್ಥಾನವೂ ಆಗಿತ್ತು. ಬೆಳೆ ಕಟಾವು ಸಮಯದಲ್ಲಿ ಬೆಳೆ ನಾಶಪಡಿಸಲು ಬರುವ ಇಲಿ, ಹೆಗ್ಗಣಗಳನ್ನು ತಿಂದು ಬೆಳೆ ರಕ್ಷಣೆ ಮಾಡುತ್ತಿದ್ದವು. ಪ್ರಸ್ತುತ ಕೃಷಿ ವಿಮುಖವಾಗುತ್ತಿರುವುದರಿಂದ ಹೆಬ್ಟಾವುಗಳು ಆಹಾರ ಕೊರತೆ ಎದುರಿಸುತ್ತಿದ್ದು ಬೆಕ್ಕು, ಕೋಳಿ, ನಾಯಿಗಳನ್ನು ತಿನ್ನಲು ಜನ ವಸತಿ ಪ್ರದೇಶಕ್ಕೆ ಬರುತ್ತವೆ. ಈ ಸಮಯದಲ್ಲಿ ದೂರದಿಂದಲೇ ಉದ್ದದ ದೋಟಿಯಿಂದ ನೋವು ಮಾಡದಂತೆ ಸ್ವಲ್ಪ ಕಿರುಕುಳ ನೀಡಿದಲ್ಲಿ ಮತ್ತೆ ಹಾವುಗಳು ಆ ಜಾಗದ ಕಡೆಗೆ ತಲೆ ಹಾಕುವುದಿಲ್ಲ ಎನ್ನುತ್ತಾರೆ ಉರಗ ತಜ್ಞ ಗುರುರಾಜ್ ಸನಿಲ್. ಇಲಾಖೆಗೆ ತಿಳಿಸಿ
ಹೆಬ್ಟಾವುಗಳು ಜನರಿಗೆ ತೊಂದರೆ ನೀಡುವ ಪ್ರಾಣಿಗಳಲ್ಲ. ಹಾವುಗಳೆಂದರೆ ಜನರಿಗೆ ಆತಂಕ ಇರುತ್ತದೆ. ಇಂಥ ಸಂದರ್ಭದಲ್ಲಿ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಉರಗ ತಜ್ಞರ ನೆರವಿನೊಂದಿಗೆ ಹೆಬ್ಟಾವುಗಳನ್ನು ರಕ್ಷಿಸಿ ದೂರದ ಅರಣ್ಯಕ್ಕೆ ಸುರಕ್ಷಿತವಾಗಿ ಅವುಗಳನ್ನು ಬಿಡಲಾಗುತ್ತದೆ. – ಆಶಿಶ್ ರೆಡ್ಡಿ, ಡಿಎಫ್ಒ, ಅರಣ್ಯ ಇಲಾಖೆ (ಕುಂದಾಪುರ ವಿಭಾಗ) ನಿರುಪದ್ರವಿ
ಡಿಸೆಂಬರ್‌ನಿಂದ ಫೆಬ್ರವರಿ ವರೆಗೂ ಹಾವುಗಳ ಮಿಲನ ಸಮಯವಾದ್ದರಿಂದ ಅವುಗಳ ಓಡಾಟ ಹೆಚ್ಚಿರುತ್ತದೆ. ಇತ್ತೀಚೆಗೆ ನಗರ, ಗ್ರಾಮೀಣದ ಜನರ ಒತ್ತಾಯ, ಅರಣ್ಯ ಇಲಾಖೆ ಕೋರಿಕೆಯಂತೆ ಈಗಾಗಲೇ 20ಕ್ಕೂ ಅಧಿಕ ಹೆಬ್ಟಾವುಗಳನ್ನು ರಕ್ಷಿಸಿ ದೂರದ ಕಾಡುಗಳಿಗೆ ಬಿಡಲಾಗಿದೆ. ಹೆಬ್ಟಾವುಗಳು ಅದರ ಪಾಡಿಗೆ ಅದೇ ಪರಿಸರದಲ್ಲಿರುವಂತೆ ಬಿಟ್ಟುಬಿಡಬೇಕು. ಹೆಬ್ಟಾವುಗಳು ಉಪದ್ರವ ಜೀವಿಗಳಲ್ಲ ಮತ್ತು ಅವುಗಳ ಮನುಷ್ಯರನ್ನು ನುಂಗುತ್ತವೆ ಎಂಬ ತಪ್ಪು ನಂಬಿಕೆ ಇಟ್ಟುಕೊಳ್ಳುವುದು ಸರಿಯಲ್ಲ.
– ಗುರುರಾಜ್ ಸನಿಲ್, ಉರಗ ತಜ್ಞ – ಅವಿನ್ ಶೆಟ್ಟಿ