Advertisement

Nobel: ಮೂವರು ಸಂಶೋಧಕರಿಗೆ ಭೌತ ನೊಬೆಲ್‌

09:16 PM Oct 03, 2023 | Team Udayavani |

ಸ್ಟಾಕ್‌ಹೋಂ: ಪರಮಾಣುಗಳು ಮತ್ತು ಅಣುಗಳಲ್ಲಿ ಅಂತರ್ಗತವಾಗಿರುವ ಎಲೆಕ್ಟ್ರಾನುಗಳ ಜಗತ್ತನ್ನು ಅನ್ವೇಷಿಸಲು ಹೊಸ ವಿಧಾನವನ್ನು ಪರಿಚಯಿಸಿದ ಮೂವರು ಸಂಶೋಧಕರಿಗೆ ಪ್ರಸಕ್ತ ಸಾಲಿನ ಭೌತ ನೊಬೆಲ್‌ ಸಂದಿದೆ.

Advertisement

ಅಮೆರಿಕದ ದಿ ಓಹಿಯೋ ಸ್ಟೇಟ್‌ ಯುನಿವರ್ಸಿಟಿಯ ಪಿಯರ್‌ ಅಗೋಸ್ಟಿನಿ, ಜರ್ಮನಿಯ ಮ್ಯಾಕ್ಸ್‌ ಪ್ಲ್ರಾಂಕ್‌ ಇನ್‌ಸ್ಟಿಟ್ಯೂಟ್‌ ಆಫ್ ಕ್ವಾಂಟಂ ಆಪ್ಟಿಕ್ಸ್‌ ಆ್ಯಂಡ್‌ ಲುಡ್ವಿಗ್‌ ಮ್ಯಾಕ್ಸಿಮಿಲಿಯನ್‌ ವಿವಿಯ ಪ್ರೊಫೆಸರ್‌ ಫೆರೆಂಕ್‌ ಕ್ರೌಸ್‌ ಮತ್ತು ಸ್ವೀಡನ್‌ನ ಲುಂಡ್‌ ವಿವಿಯ ಅನ್ನೆ ಎಲ್‌ ಹುಲಿಯರ್‌ ಅವರು 2023ರ ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಎಲೆಕ್ಟ್ರಾನುಗಳು ಚಲಿಸುವ ಅಥವಾ ತಮ್ಮ ಶಕ್ತಿಯನ್ನು ಬದಲಾಯಿಸಿಕೊಳ್ಳುವ ತ್ವರಿತ ಪ್ರಕ್ರಿಯೆಯನ್ನು ಅಳೆಯಲು ಬಳಸುವಂಥ ಬೆಳಕಿನ ಅತಿ ಸಣ್ಣ ಮಿಂಚನ್ನು ಸೃಷ್ಟಿಸುವುದು ಹೇಗೆ ಎಂಬುದನ್ನು ಈ ಸಾಧಕರು ಕಂಡುಹಿಡಿದಿದ್ದಾರೆ. ವಿಭಜಿತ ಸೆಕೆಂಡುಗಳಲ್ಲಿ ಪರಮಾಣುಗಳಲ್ಲಿನ ಎಲೆಕ್ಟ್ರಾನುಗಳನ್ನು ನೋಡಲು ಅನುವಾಗುವ ಈ ಅನ್ವೇಷಣೆಯು ಭೌತ ಜಗತ್ತಿಗೆ ನೀಡಿದ ಗಣನೀಯ ಕೊಡುಗೆಯಾಗಿದೆ ಎಂದು ನೊಬೆಲ್‌ ಸಮಿತಿ ಹೇಳಿದೆ.

ವಿಶೇಷವೆಂದರೆ, ಭೌತ ನೊಬೆಲ್‌ ಪ್ರಶಸ್ತಿಯನ್ನು ಪಡೆದ 5ನೇ ಮಹಿಳೆ ಎಂಬ ಖ್ಯಾತಿಗೆ ಎಲ್‌ ಹುಲಿಯರ್‌ ಪಾತ್ರರಾಗಿದ್ದಾರೆ. ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿಯು 8.30 ಕೋಟಿ ರೂ. ನಗದು ಬಹುಮಾನವನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next