Advertisement

ವೈಜ್ಞಾನಿಕ ಪ್ರಶ್ನೆಗಳಿಗೆ ಉತ್ತರಿಸಲು ಫಿಸಿಕ್ಸ್‌ ಅಗತ್ಯ

06:59 AM Jan 16, 2019 | |

Qಮೂಲ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಿಸುವುದು ಹೇಗೆ?
ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಮೂಲವಿಜ್ಞಾನದ ಬಗ್ಗೆ ಮಾಹಿತಿ ಕೊರತೆ ಇದೆ. ಮುಖ್ಯವಾಗಿ ಭೌತಶಾಸ್ತ್ರ ನಮ್ಮ ದೈನಂದಿನ ಜೀವನದಲ್ಲಿ ಯಾವ ರೀತಿ ಮುಖ್ಯ ಪಾತ್ರ ವಹಿಸುತ್ತದೆ ಎಂಬುದರ ಬಗ್ಗೆ ತಿಳಿಹೇಳಿ ಅವರಲ್ಲಿ ಆಸಕ್ತಿ ಮೂಡಿಸುವ ಕೆಲಸವಾಗಬೇಕು. ಶಿಕ್ಷಕರು ಇದರಲ್ಲಿ ಪ್ರಮುಖ ಪಾತ್ರ ವಹಿಸಬೇಕು

Advertisement

Qತರಂಗಾಂತರಗಳಿಂದ ಜೀವ ಸಂಕುಲ- ಮನುಷ್ಯರಿಗೆ ಯಾವ ರೀತಿಯ ಅಪಾಯ ಇದೆ?ತರಂಗಾಂತರಗಳಿಂದ ಎಲ್ಲ ಕಾಲದಲ್ಲೂ ಅಪಾಯ ಇದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರವಾಹ ಅಥವಾ ಇನ್ನಿತರ ವಿಕೋಪಗಳು ಎಲ್ಲ ಕಾಲದಲ್ಲೂ ಉಂಟಾಗುವುದಿಲ್ಲ.ಆದರೆ ನಮ್ಮ ದೈನಂದಿನ ಜೀವನದಲ್ಲಿ ಪರಿಸರ, ಪ್ರಕೃತಿ ಬಗ್ಗೆ ಕಾಳಜಿ ವಹಿಸಬೇಕು.

Qಅನ್ಯಗ್ರಹ ಸಂಶೋಧನೆಗಳು ಮುಂದಿನ ದಶಕದಲ್ಲಿ ಪ್ರಯೋಜನಕಾರಿಯೇ?
ತಂತ್ರಜ್ಞಾನ ವೇಗವಾಗಿ ಸಾಗುತ್ತಿದೆ. ಮುಂದಿನ ಪೀಳಿಗೆ ತಂತ್ರಜ್ಞಾನವನ್ನು ಅವಲಂಬಿಸಿ ಬದುಕು ಕಟ್ಟಿಕೊಳ್ಳ ಬಹುದು. ಆದರೆ ಅನ್ಯಗ್ರಹ ಶೋಧನೆ ಗಳು ಪ್ರಚಲಿತಕ್ಕೆ ಬರಲು ಬಹಳಷ್ಟು ಕಾಲಾವಕಾಶ ಬೇಕಾಗಬಹುದು. ಅಲ್ಲದೆ, ಅದು ಜನಸಾಮಾನ್ಯರಿಗೆ ಪ್ರಯೋಜನವಾಗಲು ತುಂಬಾ ಸಮಯತೆಗೆದುಕೊಳ್ಳುತ್ತದೆ.

Qಫಿಸಿಕ್ಸ್‌ ಸಂಶೋಧನೆಯ ಮಹತ್ವವೇನು?
ಭೌತಶಾಸ್ತ್ರ ನಮ್ಮ ದೈನಂದಿನ ಜೀವನದಲ್ಲಿ ಮಹತ್ತರ ಪಾತ್ರ ವಹಿಸಿದೆ. ಒಂದು ಚೆಂಡು ಮೇಲೆ ಎಸೆದಾಗ ಯಾಕೆ ಕೆಳಗೆ ಬರುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇರುತ್ತದೆ. ಹೀಗೆ ದಿನನಿತ್ಯದ ಹಲವು ಘಟ್ಟಗಳಲ್ಲಿ ಎದುರಾಗುವ ವೈಜ್ಞಾನಿಕ ಪ್ರಶ್ನೆಗಳಿಗೆ ಉತ್ತರಿಸಲು ಫಿಸಿಕ್ಸ್‌ ಸಂಶೋಧನೆ ಅತೀ ಅಗತ್ಯ.

Qಹೊಸ ತಂತ್ರಜ್ಞಾನಗಳ ಪ್ರಯೋಜನ ಹೇಗೆ?
ನಮ್ಮ ಜೀವನದ ಅಂಗವಾಗಿಯೇ ಇರುವ ಮೊಬೈಲ್‌ನ ಉಪಯೋಗ ಹಲವು. ಇದರಲ್ಲಿ ಕೆಲವು ನ್ಯೂನತೆಗಳೂ ಇವೆ. ಹಾಗಾಗಿ ತಂತ್ರಜ್ಞಾನವನ್ನು ನಾವು ಬಳಸುವ ರೀತಿಯಲ್ಲಿದೆ. ಪೂರಕವಾದ ರೀತಿಯಲ್ಲಿ ಉಪಯೋಗಿಸಿದರೆ ಯಾವುದೇ ಸಮಸ್ಯೆಯಿಲ್ಲ.

Advertisement

ನಿತ್ಯ ಜೀವನದಲ್ಲಿ ಭೌತಶಾಸ್ತ್ರದ ಮಹತ್ವವೇನು?
ನಮ್ಮ ಎಲ್ಲಾ ಚಟುವಟಿಕೆಗಳಲ್ಲೂ ಭೌತಶಾಸ್ತ್ರದ ಸತ್ವ ಇರುತ್ತದೆ. ಅದು ನಮ್ಮ ಅರಿವಿಗೆ ಬಾರದೆ ಇರಬಹುದು. ಅದನ್ನು ತಿಳಿದುಕೊಳ್ಳುವ ಸಲುವಾಗಿ ಭೌತಶಾಸ್ತ್ರದ ಬಗ್ಗೆ ಅರಿತುಕೊಳ್ಳಬೇಕು.​​​ 

•ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next