Advertisement

ಉಕ್ರೇನ್‌ನಲ್ಲಿ ಕೈಗೆಟಕುವ ವೈದ್ಯ ಶಿಕ್ಷಣ

06:32 PM Feb 18, 2022 | Team Udayavani |

ಪೂರ್ವ ಯುರೋಪ್‌ನ ರಾಷ್ಟ್ರ ಉಕ್ರೇನ್‌ ಈಗ ಜಗತ್ತನ್ನು ತುದಿಗಾಲಿನಲ್ಲಿ ನಿಲ್ಲಿಸಿದೆ. ರಷ್ಯಾ ಆ ದೇಶದ ಮೇಲೆ ದಾಳಿ ಮಾಡಲಿದೆ ಎಂಬ ಅಂಶ ಈಗ ಎಲ್ಲರ ಕಳವಳಕ್ಕೆ ಕಾರಣವಾಗಿದೆ. ಇನ್ನು ಭಾರತ ಮತ್ತು ಉಕ್ರೇನ್‌ ವಿಚಾ ರಕ್ಕೆ ಬರುವುದಿದ್ದರೆ, ಎರಡೂ ದೇಶಗಳ ನಡುವೆ ರಾಜ ತಾಂತ್ರಿಕವಾಗಿ ಉತ್ತಮ ಬಾಂಧವ್ಯವಿದೆ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಉಕ್ರೇನ್‌ನಲ್ಲಿ ಅತ್ಯುತ್ತಮ ವಿವಿಗಳಿವೆ ಮತ್ತು ಕೈಗೆ ಎಟಕುವ ರೀತಿಯ ಶುಲ್ಕವಿದೆ.

Advertisement

ಅಧ್ಯಯನ ಅವಕಾಶಗಳು :

ವೈದ್ಯಕೀಯ ಶಿಕ್ಷಣ, ಕಂಪ್ಯೂಟರ್‌ ಸೈನ್ಸ್‌, ನರ್ಸಿಂಗ್‌ ಕೋರ್ಸ್‌, ನಾಗರಿಕ ವಿಮಾನಯಾನ, ಎಂಜಿನಿಯರಿಂಗ್‌, ಅರ್ಥಶಾಸ್ತ್ರ, ಎಂಬಿಎ ಮತ್ತು ಪಿಎಚ್‌.ಡಿ.

ವೈದ್ಯಕೀಯ ಶಿಕ್ಷಣಕ್ಕೆ ಬೆಸ್ಟ್‌ :

ವೈದ್ಯ ಶಿಕ್ಷಣಕ್ಕೆ ಜಗತ್ತಿನಲ್ಲಿಯೇ ಅತ್ಯಂತ ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳು ಬೇರೆ ರಾಷ್ಟ್ರಗಳಲ್ಲಿ ಇದ್ದರೂ ಉಕ್ರೇನ್‌ ನಲ್ಲಿ ಇರುವ ಸಂಸ್ಥೆಗಳೂ ಕಡಿಮೆ ಏನಲ್ಲ. ಅಂತಾರಾಷ್ಟ್ರೀಯವಾಗಿ ಇರುವಂಥ ಮಾನದಂಡಗಳಿಗೆ ಅನುಗುಣವಾಗಿ ಅವುಗಳು ಕಾರ್ಯನಿರ್ವ ಹಿಸುತ್ತಿವೆ. ಎಂಬಿಬಿಎಸ್‌ ಮತ್ತು ಎಂ.ಡಿ. ಕೋರ್ಸ್‌ಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿ ಕಲಿಸಲಾಗುತ್ತದೆ. ಅಲ್ಲಿ ಒಟ್ಟು ಆರು ವರ್ಷಗಳು ಬೇಕಾಗುತ್ತವೆ.

Advertisement

ಜನಪ್ರಿಯ  ಕೋರ್ಸ್‌ ದಂತ ವೈದ್ಯಕೀಯ  :

ನರ್ಸಿಂಗ್‌ ಕೋರ್ಸ್‌ಗಳು- ಅದರ ಅವಧಿ ಎರಡು ವರ್ಷಗಳು ಆರ್ಥೋಪೆಡಿಕ್‌ ಡೆಂಟಿಸ್ಟ್ರಿ- 2 ವರ್ಷದ ಕೋರ್ಸ್‌. ಕೋರ್ಸ್‌ ಮುಕ್ತಾಯದಲ್ಲಿ ಬ್ಯಾಚುಲರ್‌ ಡೆಂಟಲ್‌ ಆರ್ಥೋಪೆಡಿಕ್‌ ವೈದ್ಯ ಸ್ನಾತಕೋತ್ತರ ಪದವಿಗಳು- 2-3 ವರ್ಷದ ಅವಧಿ

ಆಯ್ಕೆ ಏಕೆ? :

ಯು.ಕೆ., ಅಮೆರಿಕ ಮತ್ತು ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ವಚ್ಚ ಐಇಎಲ್‌ಟಿಎಸ್‌, ಟಿಒಇಎಫ್ಎಲ್‌ನಂಥ ಇಂಗ್ಲಿಷ್‌ ಭಾಷಾ  ಪ್ರಾವೀಣ್ಯತೆ ಸಾಬೀತು ಮಾಡುವ ಪರೀಕ್ಷೆ ಅಗತ್ಯವಿಲ್ಲ

ವೆಚ್ಚವೆಷ್ಟು? :

  • ಎಂಬಿಬಿಎಸ್‌ ಕಲಿಯಲು ಟ್ಯೂಶನ್‌ ಶುಲ್ಕ 3,500 ಡಾಲರ್‌ನಿಂದ 5 ಸಾವಿರ ಡಾಲರ್‌ (2.62 ಲಕ್ಷ ರೂ.ಗಳಿಂದ75 ಲಕ್ಷ ರೂ.). ದೇಶದ ಖಾಸಗಿ ಕಾಲೇಜುಗಳಲ್ಲಿ ಇದು 7 ಲಕ್ಷ ರೂ.ಗಳಿಂದ 10 ಲಕ್ಷ ರೂ. ಗಳಾಗಿವೆ.
  • ಭಾರತದಿಂದ ಸರಿ ಸುಮಾರು 20 ಸಾವಿರ ಮಂದಿ ವಿದ್ಯಾರ್ಥಿಗಳು ಆ ದೇಶದಲ್ಲಿ ಕಲಿಯುತ್ತಿದ್ದಾರೆ. ಈ ಪೈಕಿ ನಾಲ್ಕು ಸಾವಿರ ಮಂದಿ ವೈದ್ಯಕೀಯ ಕೋರ್ಸ್‌ ಕಲಿಯುತ್ತಿದ್ದಾರೆ. ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ 18 ಸಾವಿರ ಮಂದಿ ಭಾರತೀಯರು ಇದ್ದಾರೆ. ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ನಡೆಸಿದ ಅಧ್ಯಯನದ ಪ್ರಕಾರ 20 ಸಾವಿರ ಮಂದಿ ಇದ್ದಾರೆ. ಈ ಪೈಕಿ ತೆಲಂಗಾಣದಿಂದಲೇ 1 ಸಾವಿರ ಮಂದಿ ಇದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next