Advertisement

ಮದ್ಯಪಾನದಿಂದಾಗುವ ದೈಹಿಕ ಸಮಸ್ಯೆಗಳು

07:20 PM Apr 20, 2019 | Sriram |

ಮದ್ಯ ಮತ್ತು ಅನ್ನನಾಳ
ಮದ್ಯ ಆ್ಯಸಿಡ್‌ ತರಹ. ಆ್ಯಸಿಡ್‌ ಮೈಮೇಲೆ ಬಿದ್ದರೆ ಚರ್ಮ ಸುಟ್ಟು ಹೋಗುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಚರ್ಮದ ಮೇಲ್ಪದರಕ್ಕೆ ಹೋಲಿಸಿದರೆ, ಬಾಯಿಯಿಂದ ಒಳಗೆ ಹೋಗುತ್ತಾ ಹೋದಾಗ ಅನ್ನನಾಳದ, ಜಠರದ, ಕರುಳಿನ ಒಳಪದರ ತುಂಬಾ ತೆಳ್ಳಗಿರುವುದಲ್ಲದೆ ತುಂಬಾ ಸೂಕ್ಷ್ಮವಾಗಿಯೂ ಇರುತ್ತದೆ. ಈ ಒಳಪದರ ಮದ್ಯದಿಂದ ಹಾನಿಗೀಡಾಗಿ ಅನ್ನನಾಳದಲ್ಲಿ ಹಲವು ತೊಂದರೆಗಳು ಕಂಡುಬರುತ್ತವೆ:
– ಎದೆಯುರಿತ (ಆ್ಯಸಿಡಿಟಿ), ನೋವು ಕಂಡುಬರುತ್ತದೆ
– ಗ್ಯಾಸ್ಟ್ರೋ-ಈಸೋಫೇಜಿಯಲ್‌ ರಿಫ್ಲಕÕ… ಡಿಸೀಸ್‌: ಜಠರದಲ್ಲಿರುವ ಆ್ಯಸಿಡ್‌ ಹಿಂದಿರುಗಿ ಅನ್ನನಾಳಕ್ಕೆ ಹೋಗಿ ಅದರ ಒಳಪದರಕ್ಕೆ ಇದರಿಂದಾಗಿ ಎದೆಯುರಿತ, ನೋವು ಕಂಡುಬರುತ್ತದೆ. ಈ ಪ್ರಕ್ರಿಯೆ ಮುಂದುವರಿಯುತ್ತಾ ಜೀವಕೋಶಗಳು ಮಾರ್ಪಾಡಾಗಲಾರಂಭಿಸುತ್ತವೆ. ಇದನ್ನು ಬ್ಯಾರೆಟ್ಸ್‌ ಈಸೋಫೇಗಸ್‌ ಎಂದು ಕರೆಯುತ್ತಾರೆ. ಈ ಬ್ಯಾರೆಟ್ಸ್‌ ಈಸೋಫೇಗಸ್‌, ಸಮಯ ಕಳೆದ ಹಾಗೆ ಅನ್ನನಾಳದ ಕ್ಯಾನ್ಸರ್‌ ಆಗಿ ಮಾರ್ಪಾಡುಗೊಳ್ಳುವ ಸಾಧ್ಯತೆಗಳು ಹೆಚ್ಚು.
– ಈಸೋಫೇಜಿಯಲ್‌ ಸ್ಟ್ರಿಕ್ಚರ್‌ (ಅನ್ನನಾಳದ ಸ್ಟ್ರಿಕ್ಚರ್‌): ಅನ್ನನಾಳದ ಒಳಪದರ ಪದೇ ಪದೆ ಗಾಯಕ್ಕೊಳಗಾದಾಗ ಅಗಲವಾಗುವ ಸಾಮರ್ಥ್ಯ ಕಳೆದುಕೊಂಡು ಅನ್ನನಾಳದ ಆ ಭಾಗ, ಪರಿಧಿಯಲ್ಲಿ ಸಣ್ಣದಾಗುತ್ತಾ ಹೋಗಿ ಮುಚ್ಚಿಬಿಡುತ್ತದೆ. ಸಮಯ ಕಳೆದ ಹಾಗೆ ಈ ಸ್ಟ್ರಿಕ್ಚರಿರುವ ಅನ್ನನಾಳದ ಭಾಗ ಕ್ಯಾನ್ಸರ್‌ ರೂಪ ಪಡೆಯುತ್ತದೆ.
– ಈಸೋಫೇಜಿಯಲ್‌ ವೆರೈಸಸ್‌ (ಅನ್ನನಾಳದ ರಕ್ತನಾಳಗಳು ಹಿಗ್ಗುವಿಕೆ): ಅನ್ನನಾಳದಲ್ಲಿ ರಕ್ತಸ್ರಾವವಾಗುತ್ತದೆ. ಈ ರಕ್ತವು ವ್ಯಕ್ತಿಯಲ್ಲಿ ವಾಂತಿಯಾಗಿ ಹೊರಬರುತ್ತದೆ.
– ಈಸೋಫೇಜಿಯಲ್‌ ಕ್ಯಾನ್ಸರ್‌ (ಅನ್ನನಾಳದ ಕ್ಯಾನ್ಸರ್‌)

Advertisement

ಮದ್ಯ ಮತ್ತು ಜಠರ
ಮದ್ಯವು, ಜಠರದಿಂದ ಉತ್ಪಾದನೆಯಾಗುವ ಆ್ಯಸಿಡಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಅತಿಯಾದ ಮದ್ಯಪಾನದಿಂದ ಜಠರದ ಸೋಂಕು ಮದ್ಯ ಮತ್ತು ಸಣ್ಣ ಕರುಳು ಹಾಗೂ ಹುಣ್ಣು ಆಗಬಹುದು.
– ಮದ್ಯಪಾನದಿಂದ, ಸಣ್ಣಕರುಳಿನ ಕಾಬೋìಹೈಡ್ರೇಟ್‌, ಪ್ರೊಟೀನ್‌ ಹಾಗೂ ಕೊಬ್ಬಿನಂಶ ಹೀರುವ ಸಾಮರ್ಥ್ಯ ಕುಗ್ಗುವುದು. ಇವುಗಳ ಕೊರತೆಯಿಂದಾಗಿ ಬೆಳವಣಿಗೆ ಕುಗ್ಗುವುದು, ಪೋಷಕಾಂಶಗಳಲ್ಲಿ ಏರುಪೇರಾಗುವುದು.
– ನೀರು, ಲವಣಾಂಶಗಳ, ಖನಿಜಗಳ, ಜೀವಸತ್ವಗಳ ಹೀರುವಿಕೆಯ ಸಾಮರ್ಥ್ಯ ಕಡಿಮೆಯಾಗುವುದು. ಇದರಿಂದ ಸುಸ್ತು-ಆಯಾಸವೆನಿಸುವುದು.
– ಆಹಾರ ಸರಿಯಾದ ರೀತಿಯಲ್ಲಿ ಪಚನವಾಗುವುದಿಲ್ಲ .
– ಸಣ್ಣ ಕರುಳಿನ ಒಳಪದರಿನಲ್ಲಿ ಹುಣ್ಣುಗಳಾಗುತ್ತವೆ ಹಾಗೂ ಆ ಭಾಗಗಳಿಂದ ರಕ್ತಸ್ರಾವವಾಗುತ್ತದೆ. ಇದು ಆಹಾರದ ಜತೆಗೆ ಬೆರೆತು ಅನಂತರ ಕಪ್ಪು ಬಣ್ಣದ ಮಲವಾಗಿ ವಿಸರ್ಜನೆಯಾಗುತ್ತದೆ. ಅಂದರೆ, ಮದ್ಯವ್ಯಸನಿಗಳಲ್ಲಿ ಕಪ್ಪು ಬಣ್ಣದ ಮಲ ಬರುತ್ತಿದ್ದರೆ, ಅದು ಕರುಳಿನಲ್ಲಿ ಉಂಟಾದ ಹುಣ್ಣುಗಳಿಂದ ರಕ್ತಸ್ರಾವವೆಂದು ಅರ್ಥಮಾಡಿಕೊಳ್ಳಬೇಕು.

ಮದ್ಯ ಮತ್ತು ದೊಡ್ಡ ಕರುಳು
ಮದ್ಯವ್ಯಸನಿಗಳಲ್ಲಿ ಭೇದಿ ಅಥವಾ ಅತಿಸಾರ ಕಂಡುಬರುವುದು. ಮದ್ಯಪಾನದಿಂದ ಕರುಳಿನ ಕ್ಯಾನ್ಸರ್‌ ಬರುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಮದ್ಯ ಮತ್ತು ಮೂತ್ರಪಿಂಡ
ಮದ್ಯವು ನೇರವಾಗಿ ಕಿಡ್ನಿಯನ್ನು ಹಾನಿ ಮಾಡುವುದು ಹಾಗೂ ಲಿವರಿನ ತೊಂದರೆಯಿಂದಾಗಿ ಕಿಡ್ನಿಯಲ್ಲಿ ತೊಂದರೆಗಳು ಕಂಡುಬರುತ್ತವೆ.
– ಹಾರ್ಮೋನುಗಳ ವೈಪರೀತ್ಯದಿಂದಾಗಿ ಕಿಡ್ನಿಯಲ್ಲಿನ ಬದಲಾವಣೆಗಳಿಂದಾಗಿ ರಕ್ತದೊತ್ತಡದಲ್ಲಿ ಏರುಪೇರಾಗುತ್ತದೆೆ.
– ಲವಣಾಂಶ, ನೀರಿನಂಶ, ಖನಿಜಾಂಶಗಳ ಸಮತೋಲನ ಕಾಯ್ದುಕೊಳ್ಳುವಲ್ಲಿ ಕಿಡ್ನಿಯ ಸಾಮರ್ಥ್ಯ ಕಡಿಮೆಯಾಗಿ ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವುದು ಅಥವಾ ಕಾಲುಗಳಲ್ಲಿ ನೀರು ತುಂಬಿಕೊಳ್ಳುವುದನ್ನು ನೋಡಬಹುದು.
– ಹೆಪಾಟೋರೀನಲ್‌ ಸಿಂಡ್ರೋಮ…: ಲಿವರ್‌ ಮತ್ತು ಕಿಡ್ನಿಗಳೆರಡಕ್ಕೂ ಹಾನಿಯಾಗಿ ಎರಡರ ಕಾರ್ಯವೈಖರಿಯಲ್ಲಿ ವೈಪರೀತ್ಯಗಳು ಕಂಡುಬರುವುದು

ಮದ್ಯ ಮತ್ತು ಮೂಳೆ
– ಮೂಳೆಗಳ ಸಾಂದ್ರತೆ ಕಡಿಮೆಯಾಗಿ ಬಲಹೀನಗೊಳ್ಳುತ್ತವೆ. ಬಲಹೀನಗೊಂಡ ಮೂಳೆಗಳು ಬೇಗನೆ ಮುರಿದುಬಿಡುತ್ತವೆ, ಕೆಲಸದ ಸಾಮರ್ಥ್ಯ ಕಡಿಮೆಯಾಗುವುದು, ಬೇಗ ಆಯಾಸವಾಗುವುದು, ಅತಿಯಾದ ಕೈ-ಕಾಲು ನೋವು ಬರುವುದು, ಇತ್ಯಾದಿ.

Advertisement

ಮದ್ಯ ಮತ್ತು ಮಾಂಸಖಂಡಗಳು/ಸ್ನಾಯುಗಳು
ಮದ್ಯವ್ಯಸನಿಗಳ ಒಂದು ಮುಖ್ಯ ದೂರೆಂದರೆ, ಯಾವಾಗಲೂ ಮೈ-ಕೈ-ಕಾಲು ನೋಯುತ್ತದೆ. ಇದಾಗಲು ಕಾರಣವೇನೆಂದರೆ, ಮದ್ಯದಿಂದ ದೇಹದ ಸ್ನಾಯುಗಳಿಗಾಗುವ ಹಾನಿ. ಈ ರೀತಿ ಸ್ನಾಯುಗಳ ಹಾನಿಯಿಂದ ಅಲ್ಕೋಹಾಲಿಕ್‌ ಮಯೋಪತಿ ಎನ್ನುವ ಪರಿಸ್ಥಿತಿ ಉಂಟಾಗುತ್ತದೆ.

ಮದ್ಯ ಮತ್ತು ಲೈಂಗಿಕ ಜೀವನ
ಮದ್ಯಪಾನ ಮಾಡಿದಾಗ ಲೈಂಗಿಕ ಆಸಕ್ತಿ ಹೆಚ್ಚಾದ ಹಾಗೆ ಆಗುತ್ತದೆ. ಆದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಮುಂಚೆಯ ತರಹ ಲೈಂಗಿಕ ಕ್ರಿಯೆಯ ಸಾಮರ್ಥ್ಯವಿರುವುದಿಲ್ಲ. ಈ ರೀತಿಯ ತೊಂದರೆಗಳು ಸಮಯ ಕಳೆದ ಹಾಗೆ ಮದ್ಯಪಾನ ಮಾಡುವುದನ್ನು ಬಿಟ್ಟಿದ್ದರೂ ದೀರ್ಘ‌ಕಾಲದ ಸಮಸ್ಯೆಗಳಾಗಿ ಉಳಿದುಕೊಳ್ಳುತ್ತವೆ. ಮದ್ಯಪಾನದಿಂದಾಗುವ ಲೈಂಗಿಕ ಸಮಸ್ಯೆಗಳನ್ನು ಈ ಕೆಳಗಿನಂತೆ ಅರ್ಥಮಾಡಿಕೊಳ್ಳಬಹುದು:
– ಲೈಂಗಿಕ ಆಸಕ್ತಿ ಕಡಿಮೆಯಾಗುವುದು
– ಶಿಶ°ದ ಸ್ಪರ್ಶಜ್ಞಾನ ಕಡಿಮೆಯಾಗುವುದು
– ಶಿಶ° ನಿಮಿರದಿರುವುದು
– ಶೀಘ್ರ ಸ್ಖಲನವಾಗುವುದು ಅಥವಾ ಸ್ಖಲನವಾಗದಿರುವುದು

ಮದ್ಯ ಮತ್ತು ನಪುಂಸಕತ್ವ
ಮದ್ಯಪಾನ ಮಾಡುವುದರಿಂದ ದೇಹದಲ್ಲಿನ ಟೆಸ್ಟೊಸ್ಟಿರೋನ್‌ ಎನ್ನುವ ಹಾರ್ಮೋನು ಕಡಿಮೆಯಾಗುತ್ತದೆ. ಈ ಟೆಸ್ಟೋಸ್ಟಿರೋನ್‌ ಹಾರ್ಮೋನಿನ ಕೊರತೆಯಿಂದ ವೀರ್ಯಾಣುಗಳ ಉತ್ಪಾದನೆ ಕುಂಠಿತಗೊಂಡು ನಪುಂಸಕತ್ವ ಉಂಟಾಗುತ್ತದೆ. ಇದೇ ರೀತಿ ಮದ್ಯಪಾನ ಮಾಡುವ ಮಹಿಳೆಯರಲ್ಲಿ ಅಂಡಾಣುಗಳ ಉತ್ಪನ್ನ ನಿಂತುಬಿಡುತ್ತದೆ. ಈ ತೊಂದರೆಗಳು ಸಾಮಾನ್ಯವಾಗಿ ದೀರ್ಘ‌ಕಾಲದಿಂದ ನಿಯಮಿತವಾಗಿ ಮದ್ಯಪಾನ ಮಾಡುವವರಲ್ಲಿ ಕಂಡುಬರುತ್ತವೆ; ಕೆಲವೊಮ್ಮೆ ಅಲ್ಪಕಾಲದ ಬಳಕೆಯಿಂದಲೂ ಈ ಸಮಸ್ಯೆಗಳು ಉಲ್ಬಣಗೊಳ್ಳಬಹುದು.

ಮದ್ಯ ಮತ್ತು ನರಗಳು
ಮದ್ಯಪಾನದಿಂದ ದೇಹದ ನರಗಳಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಹಾನಿಯಾಗುತ್ತದೆ. ಈ ಹಾನಿಯನ್ನು ಅಲ್ಕೋಹಾಲಿಕ್‌ ನ್ಯುರೋಪತಿ ಎಂದೂ ಕರೆಯಲಾಗುತ್ತದೆ.
– ಕೈ-ಕಾಲಿನ ಬೆರಳಿನ ತುದಿಗಳು ಜುಮು-ಜುಮು
ಎನ್ನುವುದು, ಉರಿನೋವು ಬರುವುದು, ಸ್ಪರ್ಶಜ್ಞಾನ ಕಡಿಮೆಯಾಗುವುದು
– ಈ ತೊಂದರೆಗಳು ಅಂಗೈ-ಅಂಗಾಲುಗಳಿಗೆ ಹರಡಿ ಅನಂತರ ಮೇಲೆ ಹೋಗುತ್ತಾ ಹೋಗುವುದು
– ನಡೆದರೆ ಮುಳ್ಳಿನ ಮೇಲೆ ನಡೆದ ಹಾಗಾಗುವುದು
ಈ ರೀತಿಯಾಗಿ ಮದ್ಯಪಾನವು ದೇಹದ ಪ್ರತಿಯೊಂದು ಅಂಗವಲ್ಲದೇ ಪ್ರತಿಯೊಂದು ಜೀವಕೋಶವನ್ನೂ ಹಾನಿಯನ್ನುಂಟುಮಾಡುತ್ತದೆ. ಈ ಹಾನಿಗಳು ಕೆಲವೊಮ್ಮೆ ತಾತ್ಕಾಲಿಕವಾಗಿದ್ದರೆ ಕೆಲವೊಂದು ಹಾನಿಗಳು ಶಾಶ್ವತವಾಗಿವೆ. ಕೆಲವೊಂದು ಹಾನಿಗಳು ನರಳಾಡಿಸಿದರೆ, ಕೆಲವೊಂದು ಪ್ರಾಣಕ್ಕೆ ಕುತ್ತು ತರುತ್ತವೆ. ಪ್ರಚಲಿತವಾಗಿರುವ ನಂಬಿಕೆಯಾದ ಮದ್ಯದಿಂದ ಲಿವರ್‌ ಮಾತ್ರ ಹಾಳಾಗುತ್ತದೆ ಎನ್ನುವುದು ಮದ್ಯದಿಂದಾಗುವ ದೇಹದ ಎಲ್ಲ ಸಮಸ್ಯೆಗಳಿಗೆ ಕಾರಣ. ಈ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next