Advertisement

ದುಶ್ಚಟಗಳಿಂದ ಶಾರೀರಿಕ-ಮಾನಸಿಕ ಆರೋಗ್ಯ ಹಾಳು

03:24 PM Jan 26, 2018 | |

ಇಂಡಿ: ಇಂದಿನ ಯುವಜನಾಂಗ ದುಷ್ಚಟಗಳಿಂದ ಶಾರೀರಿಕ ಮತ್ತು ಮಾನಸಿಕವಾಗಿ ಹಾಳಾಗುತ್ತಿದ್ದು, ಇದು ದೇಶದ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಶಾಂತೇಶ್ವರ ಕಾಲೇಜು ಶಿಕ್ಷಣ ಶಾಸ್ತ್ರ ಉಪನ್ಯಾಸಕ ರಮೇಶ ಅಂಗಡಿ ಹೇಳಿದರು.

Advertisement

ತಾಲೂಕಿನ ಲಚ್ಯಾಣ ಗ್ರಾಮದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ
ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಅತಿಥಿ ಉಪನ್ಯಾಸಕರಾಗಿ ಅವರು
ಮಾತನಾಡಿದರು.

ನವಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಅನನ್ಯವಾಗಿದೆ. ಇಂದಿನ ಯುವ ಜನಾಂಗ ಸ್ವಾಮಿ ವಿವೇಕಾನಂದ, ಸುಭಾಸಚಂದ್ರ ಭೋಸ್‌ ಅವರಂತ ಮಹಾನ್‌ ನಾಯಕರ ತತ್ವ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಇಂದಿನ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿದೆ. ರೋಗಗಳಿಂದ ಸಾವನ್ನಪ್ಪುವ ಸಂಖ್ಯೆಯಲ್ಲಿ ಯುವ ಪೀಳಿಗೆ
ಸಂಖ್ಯೆಯೇ ಹೆಚ್ಚಾಗಿದೆ. ಆದ್ದರಿಂದ ಯುವಕರು ದುಶ್ಚಟ ಮಾಡದೆ ತಮ್ಮ ಸದೃಢ ಶರೀರ ಹೊಂದಿ ದೇಶ ಸೇವೆಗೆ
ಮುಂದಾಗಬೇಕು ಎಂದು ಹೇಳಿದರು.

ಉಚ್ಚನ್ಯಾಯಾಲಯದ ಆದೇಶದಂತೆ ಪೊಲೀಸ್‌ ಇಲಾಖೆ ಜ. 26ರಿಂದ ಹೆಲ್ಮೆಟ್‌ ಕಡ್ಡಾಯಗೊಳಿಸಿದೆ. ದ್ವಿಚಕ್ರ ವಾಹನ
ಸವಾರಿ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ತಮ್ಮ ಪ್ರಾಣ ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.

Advertisement

ಕಾಲೇಜು ಪ್ರಾಚಾರ್ಯ ಕೆ.ಎ. ಉಪ್ಪಾರ ಅಧ್ಯಕ್ಷತೆ ವಹಿಸಿದ್ದರು. ಸಂಕಪ್ಪಗೌಡ ಬಿರಾದಾರ, ಸುರೇಶ ವಾಲಿ, ಎಚ್‌.ಡಿ. ಹಳ್ಳಿ, ಎಸ್‌.ಎಸ್‌. ಪಾಟೀಲ, ಸಿ.ಕೆ. ಸದಲಾಪುರ, ಅಂಬಣ್ಣ ಲಾಳಸೇರಿ, ತುಕಾರಾಮ ಚವ್ಹಾಣ, ಅಶ್ವಿ‌ನಿ
ಅಂದೇವಾಡಿ, ಗೌರಿಶಂಕರ ಬಾಬಳಗಿ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು. ಕುಮಾರಿ ಅಕ್ಷತಾ ಬಿರಾದಾರ ಪ್ರಾರ್ಥಿಸಿದರು. ಬಿ.ಜಿ. ಗೊಳ್ಳಗಿ ಸ್ವಾಗತಿಸಿದರು. ಎಚ್‌.ಎಸ್‌. ಗೊಟ್ಯಾಳ ನಿರೂಪಿಸಿದರು. ಬಿ.ಆರ್‌. ಸ್ಥಾವರಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next