ಶಹಾಬಾದ: ಉತ್ತಮ ಸಮಾಜ ನಿರ್ಮಾಣದ ಹೊಣೆ ಹೊತ್ತ ಶಿಕ್ಷಕರು ದೈಹಿಕವಾಗಿ, ಮಾನಸಿಕವಾಗಿ ಸದೃಢ ವಾಗಿದ್ದರೆ ಮಾತ್ರ ದೇಶದ ಶೈಕ್ಷಣಿಕ ಪ್ರಗತಿಯಾಗಲು ಸಾಧ್ಯವಾಗುತ್ತದೆ ಎಂದು ಎಂದು ದಂತ ವೈದ್ಯೆ ಡಾ| ಸಂಧ್ಯಾ ಕಾನೇಕರ್ ಹೇಳಿದರು.
ನಗರದ ಎಸ್.ಜಿ. ವರ್ಮಾ ಹಿಂದಿ ಪ್ರೌಢಶಾಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಎನ್‌ಸಿಡಿ ಘಟಕದ ವತಿಯಿಂದ ವಿವಿಧ ಶಾಲೆಗಳ ಶಿಕ್ಷಕರಿಗೆ ಆಯೋಜಿಸಲಾಗಿದ್ದ ಅಸಾಂಕ್ರಾಮಿಕ ರೋಗಗಳ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಲಕಾಲಕ್ಕೆ ತಪಾಸಣೆಗೆ ಒಳಗಾಗು ವುದರಿಂದ ಪ್ರಾರಂಭದಲ್ಲೇ ರೋಗ ಪತ್ತೆಹಚ್ಚಿ ಚಿಕಿತ್ಸೆ ಪಡೆಯಬಹುದು. ಇದರಿಂದ ಆರೋಗ್ಯ ರಕ್ಷಣೆ ಪಡೆದಂತಾಗುತ್ತದೆ. ಆದ್ದರಿಂದ ಶಿಕ್ಷಕರು ಈ ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ಡಾ| ಚಂದ್ರಿಕಾ ಕೋಡ್ಲಾ ಮಾತನಾಡಿ, ಇತ್ತೀಚೆಯ ಆಧುನಿಕ ಆಹಾರ ಪದ್ಧತಿ ಯಿಂದಾಗಿ ರಕ್ತದೊತ್ತಡ, ಮಧುಮೇಹ ಸಾಮಾನ್ಯವಾಗಿದೆ. ಇದರ ಜೊತೆಗೆ ಮತ್ತಷ್ಟು ಅನಾರೋಗ್ಯ ಸಂಬಂಧಿತಸಮಸ್ಯೆಗಳಿಗೆ ಒಳಗಾಗದಂತೆ ಎಚ್ಚರವಹಿಸಲು ತಪಾಸಣೆ ಶಿಬಿರ ಸಹಕಾರಿಯಾಗಲಿದೆ ಎಂದರು. ಸಿಬ್ಬಂದಿಗಳಾದ ಬಸಯ್ನಾ ಹಿರೇಮಠ, ಸುನೀತಾ, ಶರಣಮ್ಮ, ಸುಜಾತಾ ಮತ್ತಿತರರು ಇದ್ದರು.