Advertisement
ದೇಶದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಈ ಸುಳಿವು ನೀಡಿದ್ದಾರೆ. ಕೊರೊನಾ ಮೂರನೇ ಅಲೆ ಬಾರದೆ ಇದ್ದರೆ ದಸರಾ ರಜೆ ಬಳಿಕ ಸುಪ್ರೀಂನಲ್ಲಿ ಪೂರ್ಣ ಪ್ರಮಾಣದಲ್ಲಿ ಭೌತಿಕ ವಿಚಾರಣೆ ಪುನರಾರಂಭಿಸಬಹುದು ಎಂಬ ವಿಶ್ವಾಸವಿದೆ ಎಂದಿದ್ದಾರೆ.
Related Articles
ನ್ಯಾಯಾಂಗದಲ್ಲಿ ಮಹಿಳೆಯರಿಗೆ ಶೇ. 50 ಮೀಸಲಾತಿ ಸಿಗಬೇಕು. ದೇಶದ ಕಾನೂನು ಕಾಲೇಜುಗಳಲ್ಲಿಯೂ ಹೆಣ್ಣುಮಕ್ಕಳಿಗೆ ಇದೇ ಮಾದರಿಯ ಮೀಸಲಾತಿಗೆ ಬೆಂಬಲ ನೀಡುವುದಾಗಿಯೂ ಸಿಜೆಐ ಘೋಷಿಸಿದ್ದಾರೆ.
Advertisement
ಇದು ಸಾವಿರಾರು ವರ್ಷಗಳ ಶೋಷಣೆಗೆ ಸಂಬಂಧಿಸಿದ ವಿಚಾರ. ನ್ಯಾಯಾಂಗದ ಕೆಳಹಂತಗಳಲ್ಲಿ ಶೇ. 30ಕ್ಕಿಂತಲೂ ಕಡಿಮೆ ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಹೈಕೋರ್ಟ್‌ಗಳಲ್ಲಿ ಶೇ. 11.5ರಷ್ಟಿದ್ದರೆ, ಸುಪ್ರೀಂನಲ್ಲಿ ಕೇವಲ ಶೇ. 11-12ರಷ್ಟು ಮಹಿಳೆಯರಿದ್ದಾರೆ. ಮೀಸಲಾತಿ ನಿಮ್ಮೆಲ್ಲರ ಹಕ್ಕು ಎಂದು ಸಿಜೆಐ ಹೇಳಿದ್ದಾರೆ.