Advertisement
ಉಜಿರೆಯಲ್ಲಿ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಕೇಂದ್ರ ಸರಕಾರದ ಆಯುಷ್ ಇಲಾಖೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ. ಮತ್ತು ಎಸ್‌ಡಿಎಂ ಎಜುಕೇಶನಲ್ ಸೊಸೈಟಿ ಆಶ್ರಯದಲ್ಲಿ ಆಯೋಜಿಸ ಲಾದ ಎರಡನೇ ರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದೇಶಿಗರು ನಮ್ಮ ಜೀವನ ಶೈಲಿ ಹಾಗೂ ಅಧ್ಯಾತ್ಮ ಸಂಸ್ಕೃತಿಯನ್ನು ಅನುಸರಿಸುತ್ತಿರುವಾಗ ಭಾರತೀಯರಾದ ನಾವು ನಿರ್ಲಕ್ಷಿಸುತ್ತಿರುವುದು ದುರದೃಷ್ಟಕರ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಸರಕಾರದ ಉಪ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮ ಮಾತನಾಡಿ, ಆಧುನಿಕತೆಗೆ ಒಗ್ಗಿಕೊಳ್ಳುತ್ತಿರುವ ನಾವು ನಮ್ಮನ್ನು ಸೃಷ್ಟಿಸಿರುವ ಪ್ರಕೃತಿಯನ್ನು ಅವಗಣಿಸು ತ್ತಿರುವ ಪರಿಣಾಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಉಜಿರೆ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಮಹಾವಿದ್ಯಾಲಯ ಹಾಗೂ ಜರ್ಮನಿಯ ಜಾನ್ನೆಸ್ ಗುರ್ಟನ್ ಬರ್ಗ್ ಆರೋಗ್ಯ ಹಾಗೂ ಕ್ರೀಡಾ ವಿ.ವಿ.ಯ ಜತೆ ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಳ್ಳಲಾಯಿತು. ಭಾರತೀಯ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಪದವೀಧರರ ಸಂಘದ ಅಧ್ಯಕ್ಷ ಡಾ| ನವೀನ್ ಕೆ.ವಿ. ಪ್ರಸ್ತಾವನೆಗೈದರು. ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಡಾ| ಮಂಜುನಾಥ್, ಜರ್ಮನಿಯ ಜಾನ್ನೆಸ್ ಗುರ್ಟನ್ ಬರ್ಗ್ ಆರೋಗ್ಯ ಹಾಗೂ ಕ್ರೀಡಾ ವಿ.ವಿ.ಯ ಪ್ರೊ| ಡಾ| ವೊಲನ್‌ಂಗ್ ಸ್ಕೊಲ್‌ಹಾರ್ನ್, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ ಉಪಸ್ಥಿತರಿದ್ದರು. ಪ್ರಾಂಶುಪಾಲ, ಮುಖ್ಯವೈದ್ಯಾಧಿಕಾರಿ ಡಾ| ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಯೋಗ ವಿಭಾಗದ ಡೀನ್ ಡಾ| ಶಿವಪ್ರಸಾದ್ ವಂದಿಸಿದರು. ಡಾ| ರೀಟಾ ಮರಿಟಾ ಡಿ’ಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಪ್ರಕೃತಿಯಿಂದ ಆರೋಗ್ಯ
ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಆಯುಷ್ ಇಲಾಖೆ ಆಯುಕ್ತೆ ಮೀನಾಕ್ಷಿ ನೇಗಿ ಮಾತನಾಡಿ, “ನನ್ನ ಜೀವನವೇ ನನ್ನ ಸಂದೇಶ’ ಎಂಬ ಮಹಾತ್ಮಾ ಗಾಂಧಿ ಅವರ ಆದರ್ಶವನ್ನು ಪಾಲಿಸಬೇಕಿದೆ. ಆರೋಗ್ಯ ವಿಚಾರದಲ್ಲಿ ಕೇವಲ ವೈಜ್ಞಾನಿತೆಯಿಂದ ಮಾತ್ರ ಗುಣಪಡಿಸಲು ಸಾಧ್ಯ ಎಂಬ ಕಲ್ಪನೆ ತಪ್ಪು. ಪ್ರಕೃತಿ ಜತೆಗೆ ಬೆರೆಯುವುದರೊಂದಿಗೆ ಮನಃಶಾಂತಿ ಸಾಧ್ಯ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ. ಪ್ರಕೃತಿ ಚಿಕಿತ್ಸಾ ಪದ್ಧತಿಯನ್ನು ಜನಪ್ರಿಯಗೊಳಿಸಲು ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾಡಿದ ಸೇವೆ ಮತ್ತು ಸಾಧನೆ ಶ್ಲಾಘನೀಯ ಎಂದರು.