Advertisement

ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರ

10:59 AM Jan 24, 2018 | |

ಅತ್ತಾವರ: ಅಧ್ಯಾಪಕರು ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಮತ್ತು ಅಟೋಟಗಳನ್ನು ಕಲಿಸಿದರೆ ಸಾಲದು. ಮುಖ್ಯವಾಗಿ ಇಂದಿನ ಸಂದರ್ಭದಲ್ಲಿ ನೈತಿಕ ಗುಣ ಹೇಗೆ ರೂಢಿಸಿಕೊಳ್ಳಬೇಕು ಮತ್ತು ಮಾನವೀಯ ಮೌಲ್ಯಗಳನ್ನು ಹೇಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜೀವನ್‌ ದಾಸ್‌ ಶೆಟ್ಟಿ ಬಜಪೆ ಅಭಿಪ್ರಾಯಪಟ್ಟರು.

Advertisement

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಮಧುಸೂದನ್‌ ಕುಶೆ ವಿದ್ಯಾಸಂಸ್ಥೆ ಅತ್ತಾವರ ಇಲ್ಲಿ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರಿಗೆ ನಡೆದ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಶಿಕ್ಷಣ ಶಿಕ್ಷಕರ ಪರಿವೀಕ್ಷಣಾಧಿಕಾರಿ ಗುರು ನಾಥ ಬಾಗೇವಾಡಿ ಅವರು
ಅಧ್ಯಕ್ಷತೆ ವಹಿಸಿ, ಅಧ್ಯಾಪಕರು ಪ್ರತಿ ದಿನ ಪುನಃಶ್ಚೇತನಗೊಳ್ಳುತ್ತಿರಬೇಕು. ಇಂದಿನ ವಿವಿಧ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸಲು ಅಧ್ಯಾಪಕರು ಜ್ಞಾನ, ಕೌಶಲಗಳನ್ನು ಕಲಿತುಕೊಳ್ಳುವುದು
ಬಹಳ ಮುಖ್ಯ ಎಂದರು.

ಮುಖ್ಯ ಅತಿಥಿಯಾಗಿ ಮಧು ಸೂದನ್‌ ಕುಶೆಯ ಪ್ರಾಂಶುಪಾಲ ಕೆ.ಕೆ. ಉಪಾಧ್ಯಾಯ, ತಾಲೂಕು ದೈಹಿಕ
ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಲಿಲ್ಲಿ ಪಾಯಸ್‌, ಪ್ರಧಾನ ಕಾರ್ಯದರ್ಶಿ ರಾಜೀವ್‌ ನಾಯಕ್‌, ಕೋಶಾಧಿಕಾರಿ ಲ್ಯಾನ್ಸಿ ಸಿಕ್ವೇರಾ ಉಪಸ್ಥಿತರಿದ್ದರು.

ಸಮ್ಮಾನ
ಈ ಸಂದರ್ಭ ಜೀವನ್‌ದಾಸ್‌ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಿ, ಗೌರವಿಸಲಾಯಿತು. ಸಂಘದ ಅಧ್ಯಕ್ಷ ತ್ಯಾಗಂ ಹರೇಕಳ ಸ್ವಾಗತಿಸಿ ಪ್ರಸ್ತಾವನೆಗೈದರು. ದೈಹಿಕ ಶಿಕ್ಷಣ ಶಿಕ್ಷಕ ಅರುಣ್‌ ಪ್ರಸಾದ್‌ ರೈ ನೆರವೇರಿಸಿಕೊಟ್ಟರು. ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ವಂದಿಸಿದರು. ವಿಷ್ಣು ಹೆಬ್ಟಾರ್‌ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next