ಬೆಳ್ತಂಗಡಿ: ಲೌಕಿಕ ಜೀವನದ ಎಲ್ಲ ಬಂಧನಗಳು ಮೋಕ್ಷ ಮಾರ್ಗಕ್ಕೆ ಅಡ್ಡಿಗಳಾಗಿವೆ. ಬದುಕಿನ ಔನ್ನತ್ಯದ ದೃಷ್ಟಿಯಿಂದ ಆರು ಸೂಕ್ತಿಗಳನ್ನು ಅನುಸರಿಸುವವರು ಮೋಕ್ಷದ ಕಡೆಗೆ ಸಾಗುತ್ತಾರೆ ಎಂದು ಆಚಾರ್ಯ ಶ್ರೀ ಕ್ಷೇಮಸಾಗರ ಮುನಿ ಮಹಾರಾಜ್ ಹೇಳಿದರು.
ಅವರು ಸೋಮವಾರ ಧರ್ಮಸ್ಥಳ ಬಾಹುಬಲಿಯ ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಪಂಚಮಹಾವೈಭವದ ಸಭಾಂಗಣದಲ್ಲಿ ಮುನಿ ಸಂಘದ ಮಂಗಲ ಪ್ರವಚನ ನೀಡಿದರು. ಮಿಥ್ಯ, ತಣ್ತೀ, ತ್ಯಾಗವಿಲ್ಲದೆ ಆತ್ಮಶುದ್ಧಿ ಅಸಾಧ್ಯ. ಭವ ಬಂಧನ ಮತ್ತು ಸಾಂಸಾರಿಕ ಬಂಧನಗಳಿಗೆ ಮಿಥ್ಯಾ ತಣ್ತೀವೇ ಕಾರಣ ಎಂದರು.
ಆಯಿìಕಾ ಜಿನವಾಣಿ ಮಾತಾಜಿ ಅವರು ಮಾತನಾಡಿ, ಆತ್ಮಜ್ಞಾನ ಹಾಗೂ ಸಮಸ್ತ ಬಂಧನಗಳ ಕ್ಷಯವೇ ದೀಕ್ಷೆಯಾಗಿದೆ. ಎಲ್ಲರಿಗೂ ದೀಕ್ಷೆ ಪಡೆಯುವ ಸ್ವಭಾವ ಬಾರದು. ಶರೀರದ ಮೇಲಿನ ವ್ಯಾಮೋಹ ತೊಲಗುವ ವರೆಗೆ ಕೇಶಲೋಚನ ಮಾಡಲು ಸಾಧ್ಯವಿಲ್ಲ. ನಮ್ಮ ಅಭಿಮಾನ, ಅಹಂಕಾರ, ಮೋಹ ಎಲ್ಲವೂ ದೂರವಾದರೆ ಮಾತ್ರ ದೀಕ್ಷೆ ಪಡೆಯಲು ಸಾಧ್ಯ ಎಂದರು.
ಕ್ಷುಲ್ಲಕ ಧ್ಯಾನಸಾಗರ್‌ಜಿ ಮಹಾರಾಜ್ ಪ್ರವಚನ ನೀಡಿ, ವರ್ಣ ಎಂಬುದು ಕರ್ಮಾಶ್ರಿತವಾದುದು. ಜಾತಿಯು ದೇಹಾಶ್ರಿತವಾಗಿದೆ. ಹಿಂದೆ ವರ್ಣಗಳ ಮಧ್ಯೆ ನಡೆಯುತ್ತಿದ್ದ ಮದುವೆ ಬಳಿಕ ಜಾತಿಗಳ ಮಧ್ಯೆ ನಡೆಯಲಾರಂಭವಾಯಿತು. ಜಾತಿಗಳ ನಡುವಿನ ಮದುವೆಯು ಬಾಧೆ ಉಂಟು ಮಾಡುವುದಿಲ್ಲ ಎಂದರು.
ಆಚಾರ್ಯ 108 ಶ್ರೀ ವರ್ಧಮಾನ ಸಾಗರ್‌ಜಿ ಮಹಾರಾಜ್ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಮಸ್ತ ಮುನಿ ವರ್ಗ, ಆಯಿìಕಾ ಮಾತಾಜಿಯವರು, ಕ್ಷುಲ್ಲಕರು, ಕ್ಷುಲ್ಲಕಿಯರು ಉಪಸ್ಥಿತರಿದ್ದರು.