Advertisement

ಫೊಟೋಗ್ರಫಿ, ಮ್ಯೂಸಿಕ್‌; ನೀರಜ್‌ ಹವ್ಯಾಸ 

10:42 PM Aug 11, 2021 | Team Udayavani |

ಹೊಸದಿಲ್ಲಿ: ಜಾವೆಲಿನ್‌ ಕೈಯಲ್ಲಿ ಇಲ್ಲದ ಹೊತ್ತು ಕ್ಯಾಮರಾ ಮತ್ತು ಸಂಗೀತ ತನ್ನ ನೆಚ್ಚಿನ ಸಂಗಾತಿಗಳಾಗಿವೆ ಎಂಬುದಾಗಿ ನೀರಜ್‌ ಚೋಪ್ರಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Advertisement

“ಛಾಯಾಚಿತ್ರಗ್ರಹಣ ನನ್ನ ಪ್ರೀತಿಯ ಹವ್ಯಾಸ. ಜತೆಗೆ ಸಂಗೀತ ಆಲಿಸುವುದೂ ಇಷ್ಟ. ಆದರೆ ಯಾವುದೇ ಕ್ಲಬ್‌ಗಳಿಗೆ ಹೋಗುವುದಿಲ್ಲ. ಏಕೆಂದರೆ ನನಗೆ ಡ್ಯಾನ್ಸ್‌ ಗೊತ್ತಿಲ್ಲ. ಕೆಲವೊಮ್ಮೆ ಗೆಳೆಯರೊಂದಿಗೆ ಶಾಪಿಂಗ್‌ಗೆ ಹೋಗುವುದಿದೆ’ ಎಂದಿದ್ದಾರೆ ಚೋಪ್ರಾ.

“ಪಬ್‌ಜಿ, ಮಿನಿ ಮಿಲಿಟಿಯ ಕೂಡ ಆಡುತ್ತಿದ್ದೆ. ಈಗ ಪಬ್‌ಜಿಗೆ ನಿಷೇಧ ಹೇರಲಾಗಿದೆ. ಆದರೆ ಒಮ್ಮೆ ತರಬೇತಿ, ಸ್ಪರ್ಧೆ ಎದುರಾದೊಡನೆ ಈ ಎಲ್ಲ ಹವ್ಯಾಸಗಳನ್ನೂ ಮೂಲೆಗೆ ತಳ್ಳುತ್ತಿದ್ದೆ’ ಎಂಬುದಾಗಿ ಹೇಳಿದರು.

“ಮುಂದಿನ ವರ್ಷ ಸಾಲು ಸಾಲು ಸ್ಪರ್ಧೆಗಳು ಕಾದಿವೆ. ಕಾಮನ್ವೆಲ್ತ್‌ ಗೇಮ್ಸ್‌ ಮತ್ತು ಏಶ್ಯಾಡ್‌ ಬರಲಿದೆ. ಬಳಿಕ ವಿಶ್ವ ಚಾಂಪಿಯನ್‌ಶಿಪ್‌ ಎದುರಾಗಲಿದೆ. ಇದಕ್ಕೆಲ್ಲ ದೊಡ್ಡ ಮಟ್ಟದ ತಯಾರಿ ಅಗತ್ಯ. ಹೀಗಾಗಿ ಈ ಒಂದು ತಿಂಗಳು ನಾನು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಲಿದ್ದೇನೆ’ ಎಂದರು ನೀರಜ್‌ ಚೋಪ್ರಾ.

Advertisement

Udayavani is now on Telegram. Click here to join our channel and stay updated with the latest news.

Next