Advertisement

ಛಾಯಾಗ್ರಹಣ ದಿನಾಚರಣೆ; ಪುರಸ್ಕೃತರಿಗೆ ಸನ್ಮಾನ

11:36 AM Aug 20, 2022 | Team Udayavani |

ಅಫಜಲಪುರ: ಪ್ರಕೃತಿಯಲ್ಲಿ ನೋಡುವ ಎಲ್ಲವೂ ನಮಗೆ ವಿಶೇಷ ಎನಿಸುವುದಿಲ್ಲ. ಆದರೆ ಕ್ಯಾಮರಾ ಕೈಚಳಕದಿಂದ ತೆಗೆದ ಚಿತ್ರಗಳಿಂದ ನಮಗೆ ಸುಂದರ ದೃಶ್ಯ ನೋಡಲು ಸಿಗುತ್ತದೆ ಎಂದು ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ನುಡಿದರು.

Advertisement

ಪಟ್ಟಣದ ಸಿದ್ಧರಾಮೇಶ್ವರ ಕಲ್ಯಾಣ ಮಂಟಪದಲ್ಲಿ ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಕೃತಿ ವಿಸ್ಮಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ನಮಗೆಲ್ಲ ಅದ್ಭುತವಾದ ಚಿತ್ರಗಳನ್ನು ನೀಡುವ ಛಾಯಾಗ್ರಹಕರು ಯಾವಾಗಲೂ ವಿಶೇಷವಾಗಿ ಕಾಣುತ್ತಾರೆ ಎಂದರು.

ಕಲಬುರಗಿಯ ಚಂದನ ಕಲರ್‌ ಲ್ಯಾಬ್‌ ಮಾಲೀಕ ಎಂ.ಎನ್‌. ಎಸ್‌ ಶಾಸ್ತ್ರಿ ಮಾತನಾಡಿ, ಆಧುನಿಕತೆ ಮುಂದುವರಿದಂತೆ ಮೊಬೈಲ್‌ಗ‌ಳ ಹಾವಳಿ ಹೆಚ್ಚಾಗಿದ್ದರಿಂದ ಕ್ಯಾಮೆರಾಮನ್‌ಗಳು ಕಷ್ಟ ಪಡುವಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಫೋಟೊಗ್ರಫರ್‌ಗಳು ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪಡೆದವರನ್ನು ಸನ್ಮಾನಿಸಲಾಯಿತು. ತಾಲೂಕು ಅಧ್ಯಕ್ಷ ಈರಣ್ಣ ಕಿರಣಗಿ, ಕಾರ್ಯದರ್ಶಿ ಬಸವರಾಜ ಅಳ್ಳಗಿ, ಖಜಾಂಚಿ ವೈಜನಾಥ ಆಲೆಗಾಂವ್‌, ಛಾಯಾಗ್ರಹಕ ಪವನ್‌ ಅಲಬಾಳ, ವೀರು ಹಿರೇಮಠ, ಮುಖಂಡರಾದ ರಮೇಶ ಬಾಕೆ, ಶಿವಾನಂದ ಗಾಡಿ, ಚಂದು ದೇಸಾಯಿ, ಪಾಶಾ ಮಣೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next