Advertisement

ಕಲ್ಪನೆಗೂ ಮೀರಿದ ‘ಬ್ಯೂಟಿಫುಲ್’ ಅಂದ್ರೆ ಫೋಟೋಗ್ರಫಿ..!

12:59 PM Aug 19, 2021 | Team Udayavani |

ಫೋಟೋ ಎಂದರೇ ಅದೊಂದು ನೂರಾರು ನೆನಪುಗಳು ಒಂದು ಫ್ರೇಮ್. ಯಾರಿಗಿಷ್ಟ್ ಆಗುವುದಿಲ್ಲ ಹೇಳಿ..? ಅದೊಂದು “ವಾವ್ಹ್” ಮೂವ್ಮೆಂಟ್..!

Advertisement

ಕಲ್ಪನೆಗೆ ಮೀರಿದ ಚಿತ್ರಗಳನ್ನು ಒದಗಿಸಬಲ್ಲದು ಫೋಟೋಗ್ರಫಿ. ನಮ್ಮ ಕಣ್ಣಿಗೆ ಹತ್ತಾರು ಅಪರೂಪದ ದೃಶ್ಯಗಳು ಕಾಣಸಿಗುತ್ತವೆ.  ಅದು ನಮಗೆ ವಿಶೇಷ ಎನ್ನಿಸುವುದಿಲ್ಲ. ಆದರೆ ಅದೇ ದೃಶ್ಯವನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದು ಅದಕ್ಕೊಂದು ಜೀವ ತುಂಬುವಲ್ಲಿ ಫೋಟೋಗ್ರಾಫರ್ ಸಫಲನಾಗಿ ಬಿಡುತ್ತಾನೆ. ಕೆಲವೊಮ್ಮೆ ಅಪರೂಪದ ಚಿತ್ರಗಳಿಗಾಗಿ ಫೋಟೋಗ್ರಾಫರ್ ದಿನ, ವಾರ, ತಿಂಗಳಾನುಗಟ್ಟಲೆ ಕಾಯಬೇಕಾಗುತ್ತದೆ. ಹಾಗಾಗಿ ಛಾಯಾಚಿತ್ರವಿಲ್ಲದ ಜಗತ್ತನ್ನು ಕಲ್ಪಸಿಕೊಳ್ಳಲೂ ಆಗದು.

ಇದನ್ನೂ ಓದಿ : ವಕ್ಫ್ ಆಸ್ತಿ ಕಬಳಿಕೆ ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಕ್ರಮ: ಸಚಿವೆ ಶಶಿಕಲಾ ಜೊಲ್ಲೆ

ಫೋಟೋಗ್ರಾಫರ್ ಎಂದಾಕ್ಷಣ ಸ್ಟುಡಿಯೋದಲ್ಲಿ ಕುಳಿತು ಪಾಸ್ ಪೋರ್ಟ್, ಫ್ಯಾಮಿಲಿ, ಮದುವೆ ಇನ್ನಿತರ ಸಮಾರಂಭಗಳಲ್ಲಿ ಫೋಟೋ ತೆಗೆಯುವ ಫೋಟೋಗ್ರಾಫರ್ ಗಳು ನಮ್ಮ ಕಣ್ಮುಂದೆ ಬರುವುದು ಸಹಜ. ಆ ದಿನಗಳಲ್ಲಿ ಫೋಟೋ ತೆಗೆಸಿಕೊಳ್ಳುವುದೆಂದರೆ ಹೇಳಿ ವಿವರಿಸಲಾಗದ ಸಂಭ್ರಮ. ಹೊಸ ಬಟ್ಟೆ ಹಾಕಿಕೊಂಡು ಕೈಯಲ್ಲಿ ಅಪ್ಪ ಕೊಡಿಸಿದ ಚಾಕ್ಲೇಟ್ ಹಿಡಿದುಕೊಂಡು ಫೋಟೋಗ್ರಾಫರ್ ಸ್ವಲ್ಪ ನಗು ಅಂತ ಹೇಳಿ ಸುಂದರ ಕ್ಷಣವನ್ನು ಸೆರೆಹಿಡಿದು ಮಿಲ್ಕು ಹಾಕಿಸುವ ಫೋಟೋಗ್ರಾಫರ್ .

ಇನ್ನು ಹೆಚ್ಚಿನ ಮನೆಗಳಲ್ಲಿ ಕ್ಯಾಮೆರಾಗಳೇ ಇರುತ್ತಿರಲಿಲ್ಲ ಹಾಗಾಗಿ ಫೋಟೋಗ್ರಾಫರ್ ಬಳಿಗೆ ಹೋಗಿ ಫೋಟೋ ತೆಗೆಸಿ, ಅದಕ್ಕೊಂದು ಫ್ರೇಮ್ ಹಾಕಿಸಿ ಮನೆಯ ಗೋಡೆಯಲ್ಲಿ ನೇತು ಹಾಕುವುದೆಂದರೆ ಅದರ ಸಂಭ್ರಮವೇ ಬೇರೆಯಾಗಿತ್ತು. ಕತ್ತಿನಲ್ಲಿ ಪುಟ್ಟ ಪೆಟ್ಟಿಗೆಯಾಕಾರದ ಕ್ಯಾಮೆರಾವನ್ನು ನೇತು ಹಾಕಿಕೊಂಡು ಬರುತ್ತಿದ್ದ ಫೋಟೋಗ್ರಾಫರ್ ನನ್ನು ನೋಡಿದರೆ ಅಚ್ಚರಿ, ಸಂಭ್ರಮದಿಂದ ಕುಣಿದಾಡುವ ಕಾಲ ಅದಾಗಿತ್ತು.

Advertisement

ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಗಳಿರಲಿ ಇವರು ಇರಲೇ ಬೇಕು. ಇವರು ಬಂದಿಲ್ಲ ಅಂದ್ರೆ ಆ ಕಾರ್ಯಕ್ರಮಕ್ಕೆ ಕಳೆಯೇ ಇರುವುದಿಲ್ಲ. ಸದಾ ಒಂದಲ್ಲ ಒಂದು ಕಾರ್ಯಕ್ರಮ, ಘಟನಾವಳಿಗಳನ್ನು ಸೆರೆ ಹಿಡಿಯುತ್ತಾ ಸುದ್ದಿಮನೆಯ ಮೊಗಸಾಲೆಗೆ ತಲುಪಿಸುವ ಇವರಿಲ್ಲವೆಂದರೆ ಪತ್ರಿಕೆ ಹೊರಬರುವುದೇ ಇಲ್ಲ. ಇದಕ್ಕೆ ಕಾರಣವೂ ಇದೆ. ವರದಿಗಾರರು ಹೇಳಲು ಹೊರಡುವ ಒಂದು ಪುಟದ ವಿಚಾರವನ್ನು ಇವರ ಒಂದೇ ಒಂದು ಫೋಟೋ ಹೇಳಿ ಮುಗಿಸಿಬಿಡುತ್ತದೆ.

ಛಾಯಾಗ್ರಾಹಕನ ಕೈಚಳಕದ ಕಲೆ ಹೆಚ್ಚಿರುತ್ತದೆ. ಹಿಂದೆ ಛಾಯಾಗ್ರಹಣ ಎನ್ನುವುದು ಮದುವೆ ಸಮಾರಂಭಗಳಲ್ಲಿ ಮತ್ತು ಇನ್ನಿತರೆ ಕೆಲವು ಸಂದರ್ಭಗಳಲ್ಲಿ ಮಾತ್ರ ಬಳಕೆ ಮಾಡಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಎಲ್ಲೆಲ್ಲಿಯೂ ಈ ಛಾಯಾಗ್ರಣದ ಬಳಕೆಯಾಗುತ್ತಲೇ ಇದೆ. ಇಂದಿನ ದಿನಗಳಲ್ಲಿ ಛಾಯಾಗ್ರಹಣ ಎಂಬುದು ಕ್ರೀಡೆ, ಪತ್ರಿಕೋದ್ಯಮ ಮತ್ತು ಇನ್ನಿತರೆ ಕ್ಷೇತ್ರಗಳಲ್ಲಿ ಹೆಚ್ಚಿನ ಮಹತ್ವವನ್ನು ಪಡೆಯುತ್ತಿದ್ದು ಹಲವರು ಇದರ ಕಲಿಕೆಯ ಬಗೆಗೆ ಆಸಕ್ತಿಯನ್ನು ತೋರುತ್ತಿದ್ದಾರೆ.

ಫೋಟೋಗ್ರಫಿ ಕೆಲವರಿಗೆ ಹವ್ಯಾಸವಾದರೆ ಮತ್ತೆ ಕೆಲವರಿಗೆ ವೃತ್ತಿಯಾಗಿದೆ. ಹೀಗಾಗಿ ಇಬ್ಬರೂ ಪ್ರತ್ಯೇಕವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ಮದುವೆ ಇನ್ನಿತರೆ ಶುಭ ಸಮಾರಂಭದಲ್ಲಿ ಪಾಲ್ಗೊಂಡು ಫೋಟೋ ತೆಗೆಯುವ ಫೋಟೋಗ್ರಾಫರ್ ಗೂ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವ ಫೋಟೋಗ್ರಾಫರ್ ಗೂ ಅಜಗಜಾಂತರ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವ ಫೋಟೋಗ್ರಾಫರ್ ಸದಾ ಕ್ರಿಯಾಶೀಲನಾಗಿರಬೇಕು. ಅಷ್ಟೇ ಅಲ್ಲ, ಎಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸುವ , ಸಾಮಾನ್ಯ ಜ್ಞಾನ ಮತ್ತು ಸಮಯದೊಂದಿಗೆ ಓಡುವ ಗುಣವನ್ನು ಹಾಗೂ ಧೈರ್ಯವನ್ನು ಹೊಂದಿರಬೇಕಾಗಿರುತ್ತದೆ.

 

-ಆಕರ್ಷ ಆರಿಗ

ಎಸ್. ಡಿ. ಎಮ್ ಸ್ನಾತಕೋತ್ತರ ಕೇಂದ್ರ ಉಜಿರೆ

ಇದನ್ನೂ ಓದಿ : ಅಪಘಾತವಾದರೂ ಆ್ಯಂಬುಲೆನ್ಸ್ ನಲ್ಲಿ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು !

Advertisement

Udayavani is now on Telegram. Click here to join our channel and stay updated with the latest news.

Next