Advertisement

ಬೇಡಿಕೆ ಈಡೇರಿಕೆಗೆ ಛಾಯಾಗ್ರಾಹಕರ ಮನವಿ

02:21 PM Nov 03, 2020 | Suhan S |

ಗದಗ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ನೇತೃತ್ವದಲ್ಲಿ ನೂರಾರು ಛಾಯಾಗ್ರಾಹಕರು ನಗರದ ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಛಾಯಾವೃತ್ತಿ ಸಮೂಹವನ್ನು ರಾಜ್ಯ- ಕೇಂದ್ರ ಸರ್ಕಾರಗಳು ಸಂಪೂರ್ಣನಿರ್ಲಕ್ಷಿಸಿವೆ. ಕೊರೊನಾ ಲಾಕ್‌ಡೌನ್‌ನಿಂದ ಛಾಯಾ ವೃತ್ತಿ ಸಮೂಹದ  ಬದುಕು ಸಂಕಷ್ಟಕ್ಕೆ ಸಿಲುಕಿವೆ ಎಂದು ಘೋಷಣೆ ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಬ್ಯಾಹಟ್ಟಿ ಮಾತನಾಡಿ, ಕೋವಿಡ್‌ ಹಾಗೂ ನೆರೆ ಸಂತ್ರಸ್ತ ವೃತ್ತಿ ಬಾಂಧವರಿಗೆ ವಿಶೇಷ ಪ್ಯಾಕೇಜ್‌ ನೀಡಬೇಕು. ಛಾಯಾಗ್ರಾಹಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಿ, ಕಾರ್ಮಿಕಇಲಾಖೆ ವಿವಿಧ ಯೋಜನೆ ಒದಗಿಸಬೇಕು. ಛಾಯಾಗ್ರಾಹಕರಿಗೆ ಕಾರ್ಮಿಕ ಸ್ಮಾರ್ಟ್‌ ಕಾರ್ಡ್‌ ನೀಡಬೇಕು. 151 ವರ್ಷದ ಇತಿಹಾಸವಿರುವ ಛಾಯಾಗ್ರಹಣಕ್ಕೆ ಕರ್ನಾಟಕ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಬೇಕು. ಜಿಲ್ಲಾ ಸಂಘದ ಭವನಕ್ಕೆ ನಿವೇಶನ ನೀಡಬೇಕು ಎಂದರು.

ವೃತ್ತಿಪರ ಛಾಯಾಗ್ರಾಹಕರ ವ್ಯಾಪಾರದ ನೆರವಿಗೆ ಸರ್ಕಾರ ಹಾಗೂ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಬೇಕು. ಸರ್ಕಾರಿ ಕಚೇರಿಗಳಲ್ಲಿ ವೆಬ್‌ ಕ್ಯಾಮರಾಗಳಿಂದ ಛಾಯಾಚಿತ್ರ ತೆಗೆಯುವುದು ನಿಷೇಧಿಸಿ, ವೃತ್ತಪರ ಛಾಯಾಗ್ರಾಹಕರಿಗೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಹಾಗೂ ವೃತ್ತಿಪರ ಛಾಯಾಗ್ರಾಹಕರಿಗೆ ವೃತ್ತಿ ಹಾಗೂ ಜೀವನ ಭದ್ರತೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಇದೇ ವೇಳೆ ಛಾಯಾಗ್ರಾಹಕರುವಿವಿಧ ಬೇಡಿಕೆ ಈಡೇರಿಕೆಗೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ವೇಳೆ ಸಂಘದ ಗೌರವಾಧ್ಯಕ್ಷ ‌ ಗಂಗಾಧರ ಹೂಗಾರ, ಉಪಾಧ್ಯಕ್ಷ‌ ಅಪ್ಪುರಾಜ ಭದ್ರಕಾಳಿಮಠ, ಸಹ ಕಾರ್ಯದರ್ಶಿ ಮಹಾದೇವ ಸಂಕನಗೌಡ್ರ, ಖಜಾಂಚಿ ಮಾಧು ಮೇರವಾಡೆ, ಸಂಘಟನಾ ಕಾರ್ಯದರ್ಶಿ ಪವನಮೇರವಾಡೆ, ಮಂಜುನಾಥ ಲಕ್ಷ‌ಟ್ಟಿ, ರೋಣ ತಾಲೂಕು ಕಾರ್ಯದರ್ಶಿ ನಿಂಗಪ್ಪ ಕಾಶಪ್ಪನವರ, ಶಿರಹಟ್ಟಿ ತಾಲೂಕು ಅಧ್ಯಕ್ಷ ಶರಣಪ್ಪ ಹೂಗಾರ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next