ಕಲಬುರಗಿ: ಕೋವಿಡ್ ಹಾವಳಿಯಿಂದಾಗಿಛಾಯಾಗ್ರಹಕರು ಸಂಕಷ್ಟಕ್ಕೆ ಸಿಲುಕಿದ್ದು, ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಸರ್ಕಾರ ತಕ್ಷಣವೇ ನೆರವಿಗೆ ಧಾವಿಸಬೇಕೆಂದುಒತ್ತಾಯಿಸಿ ಜಿಲ್ಲಾ ಪೋಟೋಗ್ರಾಫರ್ಅಸೋಸಿಯೇಷನ್ ವತಿಯಿಂದ ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆಪ್ರತಿಭಟನೆ ನಡೆಸಿದರು.
ಛಾಯಾಗ್ರಹಕರು ಸಭೆ-ಸಮಾರಂಭಗಳ ಛಾಯಾಚಿತ್ರಗಳನ್ನೇ ತೆಗೆದು ಜೀವನಸಾಗುತ್ತಿದ್ದು, ಕೊರೊನಾ ಹಾಗೂಲಾಕ್‌ಡೌನ್ ಕಾರಣದಿಂದ ಎಲ್ಲವೂಸ್ಥಗಿತಗೊಂಡಿವೆ. ಹೀಗಾಗಿ ಸಂಕಷ್ಟಕ್ಕೆಸಿಲುಕುವಂತೆ ಆಗಿದ್ದು, ಫೋಟೋತೆಗೆದು ಜೀವನ ನಡೆಸಿಕೊಂಡು ಬರುತ್ತಿರುವವರಿಗಾಗಿ ವಿಶೇಷ ಪ್ಯಾಕೇಜ್ ರೂಪಿಸಬೇಕೆಂದು ಅಸೋಸಿಯೇಷನ್‌ನಪದಾಧಿಕಾರಿಗಳು ಮತ್ತು ಸದಸ್ಯರು ಒತ್ತಾಯಿಸಿದರು.
ಪ್ರತಿಯೊಬ್ಬರಿಗೂ ಪರಿಹಾರ ನೀಡುವುದರ ಜತೆಗೆ ಹಲವು ಸಮಸ್ಯೆಗಳು ಮತ್ತು ಬೇಡಿಕೆಗಳಿಗೆ ಸರ್ಕಾರಸ್ಪಂದಿಸಬೇಕು. ಕರ್ನಾಟಕ ಛಾಯಾಗ್ರಾಹಣಅಕಾಡೆಮಿ ಸ್ಥಾಪಿಸಬೇಕು. ಛಾಯಾ ಭವನ ನಿರ್ಮಿಸಲು ನಿವೇಶನ ಮಂಜೂರು ಮಾಡಬೇಕು. ವೃತ್ತಿಪರ ಪೋಟೋಗ್ರಾಫರ್ ಗಳಿಗೆ ಆಧಾರ, ಮತದಾರರ ಚೀಟಿ ಇನ್ನಿತರ ಫೋಟೋಗಳನ್ನು ತೆಗೆಯಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು. ಎಲ್ಲ ಛಾಯಾಗ್ರಹಕರಿಗೆ ಸರ್ಕಾರದಿಂದಲೇ ಗುರುತಿನ ಚೀಟಿ ನೀಡಿ ಸವಲತ್ತುಗಳನ್ನು ಕಲ್ಪಿಸಬೇಕು. ಜೀವ ವಿಮೆಹಾಗೂ ಪಿಂಚಣಿ ನೀಡುವ ಯೋಜನೆರೂಪಿಸಿ ಜಾರಿಗೊಳಿಸಬೇಕು. ಹಿರಿಯ ಛಾಯಾಗ್ರಾಹಕರಿಗೆ ರಾಜ್ಯೋತ್ಸವ, ಲಲಿತಕಲಾ ಅಕಾಡೆಮಿ ಪ್ರಶಸ್ತಿಗಳನ್ನು ನೀಡಬೇಕು. ನಮ್ಮ ಬೇಡಿಕೆಗೆ ಕೂಡಲೇ ಸ್ಪಂದಿಸದೆ ಹೋದಲ್ಲಿ ಅ.30ರಂದು ರಾಜ್ಯಾದ್ಯಂತ ಫೋಟೋಗ್ರಫಿ ಬಂದ್ ಮಾಡಿ ಹೋರಾಟ ನಡೆಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅಸೋಸಿಯೇಷನ್‌ನ ಅಧ್ಯಕ್ಷ ಬಸವರಾಜ ಪಾಟೀಲ್, ಉಪಾಧ್ಯಕ್ಷ ಉಸ್ಮಾನ್ ಜಲಾಲುದ್ದೀನ್, ಕಾರ್ಯದರ್ಶಿ ಬಸವರಾಜ ತೋಟದ, ಸಹ ಕಾರ್ಯದರ್ಶಿ ಶರಣಬಸವಪ್ಪ ಕಣ್ಣಿ, ನಂದಕುಮಾರ ಜಾಕ್ನಳ್ಳಿ, ಗುಂಡೇರಾವ ಭೂಸನೂರ, ನಾಗೇಶ ಮಳಿಕರ್, ಮಂಜುನಾಥ ಜಂಬಗಿ,ಪುಕಾಳೆ ವಿಠuಲ್, ಸಂಜಯ ಚವ್ಹಾಣ,ರಾಜು ಸ್ವಾಮಿ, ಬಸವರಾಜ ಬಿದನೂರ, ರವಿ, ಕೃಷ್ಣಾ ಮಳ್ಳಿ, ಮಹೇಶ ಮೇಲಕೆರಿ, ರಮೇಶಗೌಡ, ರಾಜು ಅಂತೂರಮಠ ಇದ್ದರು