ನ್ಯೂಯಾರ್ಕ್: ಉಡಾವಣೆಯಾದ ಎರಡೇ ವಾರಗಳಲ್ಲಿ ಬಾಹ್ಯಾಕಾಶದಲ್ಲಿ ಡಾರ್ಟ್ (ಡಬಲ್ ಆ್ಯಸ್ಟೆರಾಯ್ಡ ರೀಡೈರೆಕ್ಷನ್ ಟೆಸ್ಟ್) ನೌಕೆ ಸಕ್ರಿಯಗೊಂಡಿದ್ದು, ಡಿಮೋಫಸ್ ಕ್ಷುದ್ರಗ್ರಹದತ್ತ ಸಂಚರಿಸುವ ಮುನ್ನವೇ ಅಲ್ಲಿನ ಚಿತ್ರಗಳನ್ನು ಸೆರೆ ಹಿಡಿದು ಭೂಮಿಗೆ ರವಾನಿಸಿದೆ.
ಅದರ ಕೆಮರಾದ ಯಶಸ್ವಿ ಕಾರ್ಯಾಚರಣೆಯು, ಉಡಾವಣೆಯಾಗುವ ವೇಳೆ ಉಂಟಾದ ತೀವ್ರ ಕಂಪನ ಮತ್ತು ಬಾಹ್ಯಾಕಾಶದ ಮೈನಸ್ 80 ಡಿ.ಸೆ. ತಾಪಮಾನವನ್ನು ಸಮರ್ಥವಾಗಿ ಎದುರಿಸಿರುವುದರ ಸೂಚಕವಾಗಿದೆ ಎಂದು ನಾಸಾ ಹೇಳಿದೆ. ಏಕೆಂದರೆ ಈ ಬಾಹ್ಯಾಕಾಶ ನೌಕೆಯ ಟೆಲಿ ಸ್ಕೋಪಿಕ್ ಪರಿಕರಗಳು ಅತ್ಯಂತ ಸೂಕ್ಷ್ಮ ವಾಗಿದ್ದು, ಸ್ವಲ್ಪಮಟ್ಟಿಗೆ ಅಲುಗಾಡಿದರೂ ಕಾರ್ಯನಿರ್ವಹಣೆ ಸ್ಥಗಿತಗೊಳಿಸುವ ಸಾಧ್ಯತೆಯಿರುತ್ತದೆ.
ಇದನ್ನೂ ಓದಿ:ಮಣಿಪುರಕ್ಕೆ ಮಯನ್ಮಾರ್ ಉಗ್ರರಿಂದ ದಾಳಿ? ಕೇಂದ್ರ ಗುಪ್ತಚರ ಇಲಾಖೆಯ ಮುನ್ನೆಚ್ಚರಿಕೆ
ಚಿತ್ರದಲ್ಲೇನಿದೆ?: ಹಿಂಬದಿಯಲ್ಲಿ ಬಾಹ್ಯಾಕಾಶದ ಕತ್ತಲಿದ್ದರೆ, ಮುಂದೆ ಸ್ಫಟಿಕದಷ್ಟು ಸ್ಪಷ್ಟವಾಗಿ ಸುಮಾರು 12ರಷ್ಟು ನಕ್ಷತ್ರಗಳು ಮಿಂಚುತ್ತಿರುವುದು ಕಾಣಿಸುತ್ತಿದೆ. ಪರ್ಷಿಯಸ್, ಏರೀಸ್ ಮತ್ತು ಟಾರಸ್ ನಕ್ಷತ್ರ ಪುಂಜಗಳು ಸಮಾಗಮಗೊಳ್ಳುವ ಪ್ರದೇಶದಲ್ಲೇ ಈ ಫೋಟೋ ಸೆರೆಹಿಡಿಯಲಾಗಿದೆ.
ಈ ಬಾಹ್ಯಾಕಾಶ ನೌಕೆಯು ತನ್ನ ಗುರಿಯನ್ನು ತಲುಪುವ ಮುನ್ನ ಸುಮಾರು ಒಂದು ವರ್ಷ ಕಾಲ ಬಾಹ್ಯಾಕಾಶ ದಲ್ಲೇ ಪಯಣಿಸಲಿದೆ. ಕೊನೆಗೆ, ಡಿಮೋಫಸ್ ಕ್ಷುದ್ರಗ್ರಹವನ್ನು ಸಮೀಪಿಸುತ್ತಿದ್ದಂತೆ, ಗಂಟೆಗೆ 24,000 ಕಿ.ಮೀ. ವೇಗದಲ್ಲಿ ಸಂಚರಿಸಿ ಕ್ಷುದ್ರಗ್ರಹಕ್ಕೆ ಅಪ್ಪಳಿಸಲಿದೆ.