Advertisement

ಇಲಾಖಾ ತನಿಖೆಯಲ್ಲಿ ಛಾಯಾಚಿತ್ರ ಮಹತ್ತರ ಪಾತ್ರ: ಲಕ್ಷ್ಮಣ ನಿಂಬರಗಿ

06:20 AM Aug 23, 2018 | |

ಮಲ್ಪೆ: ಪೊಲೀಸ್‌ಇಲಾಖೆ ಹಾಗೂ ಛಾಯಾಗ್ರಾಹಕರಿಗೆ ಅವಿನಾಭಾವ ಸಂಬಂಧ. ವಿವಿಧ ಅಪರಾಧ‌ಗಳ ಇಲಾಖಾ ತನಿಖೆಯಲ್ಲಿ ಛಾಯಾಚಿತ್ರ ಮಹತ್ತರ ಪಾತ್ರವಹಿಸುವುದು ಎಂದು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಹೇಳಿದರು.

Advertisement

ಅವರು ಮಂಗಳವಾರ ಕೆಮ್ಮಣ್ಣು ಹಂಪನಕಟ್ಟೆಯ ಆದರ್ಶ್‌ನಲ್ಲಿ ಜರಗಿದ ವಿಶ್ವಛಾಯಾಚಿತ್ರಗ್ರಹಣ ದಿನಾಚರಣೆ ಅಂಗವಾಗಿ ದಶ ಮಾನೋತ್ಸವ ಸಂಭ್ರಮದಲ್ಲಿರುವ ಉಡುಪಿ ಪ್ರಸ್‌ ಫೋಟೋ ಗ್ರಾಪರ್ ಅಸೋಸಿಯೇಶನ್ಸ್‌ ಕೊಡಮಾಡಲ್ಪಡುವ ಉಪ್ಪಾ ಪುರಸ್ಕಾರವನ್ನು ಆದರ್ಶ ಸ್ಟುಡಿಯೋ ಮಾಲಕ ಶಿವ ಕೆ. ಅಮೀನ್‌ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.

ಸೌತ್‌ ಕೆನರಾ ಫೋಟೋಗ್ರಾಫರ್ ಅಸೋಶಿಯೇಶ‌ನ್‌ ಮಂಗಳೂರು, ಉಡುಪಿ   ಇದರ  ನಿಕಟಪೂರ್ವ ಅಧ್ಯಕ್ಷ ಜಗನ್ನಾಥ ಶೆಟ್ಟಿ ಮಾತನಾಡಿ ಹಿರಿಯ ಹಾಗೂ ಪತ್ರಿಕೆ ಯೊಂದಿಗೆ ಸಂಬಂಧವಿರುವ ಛಾಯಾಚಿತ್ರ ಗ್ರಾಹಕರನ್ನು ಹುಡುಕಿ ಅವರ ಸೇವಾ ಹಿರಿಮೆಯನ್ನು ಮನಗಂಡು ಛಾಯಾಸ್ಫೂರ್ತಿ ಬಿರುದು ನೀಡುತ್ತಿರುವ  ಉಪ್ಪಾ ಸಂಘಟನೆ ಆಯೋಜಿಸುತ್ತಿರುವ ಈ ಕಾರ್ಯಕ್ರಮ ಅಭಿನಂದನಾರ್ಹ ಎಂದರು. 

ಈ ಸಂದರ್ಭದಲ್ಲಿ ಶಿವಣ್ಣ ಅವರ ಅಭಿಮಾನಿ ಬಳಗ ಕೆಮ್ಮಣ್ಣು ತಂಡದವರು ಪೋಲೀಸ್‌ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರನ್ನು ಅಭಿನಂದಿಸಿದರು. ಸಂಜೀವ ಕೆ.ಅಮೀನ್‌ ಉಪಸ್ಥಿತರಿದ್ದರು. ಉಪ್ಪಾ ಅಧ್ಯಕ್ಷ ಜನಾರ್ದನ್‌ ಕೊಡವೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಆಸ್ಟ್ರೋ ಮೋಹನ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next