Advertisement

ಹೂಡಾ ಕಸದ ಆಟೋಗೆ ಶಾಸಕರ ಫೋಟೊ

06:18 AM Jun 14, 2020 | Lakshmi GovindaRaj |

ಹಾಸನ: ನಗರದ ವಿಜಯನಗರ ಬಡಾವಣೆಯಲ್ಲಿ ಹಾಸನ ನಗರಾಭಿವೃದಿಟಛಿ ಪ್ರಾಧಿಕಾರ (ಹೂಡಾ)ದಿಂದ ಕಸ ಸಂಗ್ರಹಿಸುವ ಆಟೋದ ಮೇಲೆ ತಮ್ಮ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ ಎಂದು ಎಂದು ಜಿಪಂ  ಉಪಾಧ್ಯಕ್ಷ ಎಚ್‌.ಪಿ.ಸ್ವರೂಪ್‌ ಆಪಾದಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಲ್ನೋಟಕ್ಕೆ ಶಾಸಕರು ಕಸ ಸಂಗ್ರಹಣೆಯನ್ನು ಉಚಿತವಾಗಿ ಎಂದು ಶಾಸಕರು ಬಿಂಬಿಸುತ್ತಿದ್ದರೂ ಪರಿವರ್ತನಾ ಟ್ರಸ್ಟ್‌ ಹೆಸರಿನಲ್ಲಿ  ಹಾಸನದ ವಿದ್ಯಾನಗರ, ವಿವೇಕ ನಗರ, ಇಂದಿರಾ ನಗರದಲ್ಲಿಯೂ ಬಡಾವಣೆಯ ಸುಮಾರು ಮೂರು ಸಾವಿರ ಮನೆಗಳಿಂದ ತಲಾ 40 ರೂ. ನಂತೆ ವಸೂಲಿ ಮಾಡುತ್ತಿದ್ದಾರೆಂದು ಹಣ ಸಂಗ್ರಹಣೆ ಮಾಡಿ ವಿತರಣೆ ಮಾಡಿರುವ  ರಶೀದಿಗಳನ್ನು ಪ್ರದರ್ಶಿಸಿದರು.

ನಗರದ ಹೊರ ವಲಯದ ಗ್ರಾಮ ಪಂಚಾಯಿತಿಗಳು ಕಸ ಸಂಗ್ರಹಣೆಗೆ ಆಟೋ ಮತ್ತು ಟ್ರ್ಯಾಕ್ಟರ್‌ ಖರೀದಿದ್ದರೂ ಅವುಗಳ ಬಳಕೆಗೆ ಬಿಡದೇ ತಮ್ಮ ಆಟೋಗಳಲ್ಲಿಯೇ ಕಸ ಸಂಗ್ರಹಣೆ ಮಾಡಬೇಕು ಎಂದು  ಗ್ರಾಮ ಪಂಚಾಯಿತಿ ಪಿಡಿಒ, ಕಾರ್ಯದರ್ಶಿಗಳಿಗೆ ತಾಕೀತು ಮಾಡಿದ್ದಾರೆ ಎಂದು ಆರೋಪಿಸಿದರು. ನನ್ನ ತಂದೆ ನಾಲ್ಕು ಬಾರಿ ಶಾಸಕರಾಗಿದ್ದರೂ ಈ ರೀತಿ ಕೀಳು ಮಟ್ಟದ ಪ್ರಚಾರ ಪಡೆದುಕೊಂಡು ರಾಜಕಾರಣ ಮಾಡಿರಲಿಲ್ಲ.

ಎಚ್‌.ಡಿ.ರೇವಣ್ಣ ಅವರು ಹಾಸನ  ನಗರಕ್ಕೆ ಮಾಡಿಸಿರುವ ಅಭಿವೃದಿಟಛಿ ಯೋಜನೆಗಳಿಗೆಲ್ಲಫೋಟೋ ಹಾಕಿಕೊಳ್ಳುವಂತಿದ್ದರೆ ಹಾಸನದ ತುಂಬೆಲ್ಲಾ ಸಾವಿರಾರು ಫೋಟೋ ಹಾಕಿಸಿಕೊಂಡು ಪ್ರಚಾರ  ಪಡೆಯಬಹುದಿತ್ತು ಎಂದರು.  ಜಿಲ್ಲಾ ಜೆಡಿಎಸ್‌ ವಕ್ತಾರ ಎಚ್‌.ರಘು, ಪಕ್ಷದ ಮುಖಂಡ ರಾದ ಮೊಗಣ್ಣಗೌಡ, ಸಂಗಂ, ಚನ್ನಂಗಿಹಳ್ಳಿ ಶ್ರೀಕಾಂತ್‌ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next