Advertisement
ಛಾಯಾಚಿತ್ರಗ್ರಾಹಕರಾದ ಆಸ್ಟ್ರೋ ಮೋಹನ್ ಮತ್ತು ಬೆಂಗಳೂರಿನ ಅರುಣ್ ಮಹೇಂದ್ರಕರ್ ಈ ಹೊಸ ಪರಿಕಲ್ಪನೆಗೆ ನಾಂದಿ ಹಾಡಿದ್ದಾರೆ. ಉಡುಪಿಯ ಸುಮಾರು 57 ಚಿತ್ರಗಳನ್ನು ಗ್ಯಾಲರಿ ಅದಿತಿಯಲ್ಲಿ ಪ್ರದರ್ಶಿಸಲಾಗುವುದು. ಕಾಪು ದೀಪ ಸ್ತಂಭ, ಕಾರ್ಕಳದ ಬಾಹುಬಲಿ, ಸೈಂಟ್‌ಮೇರಿಸ್ ದ್ವೀಪ ಹಾಗೂ ಬಾರಕೂರು ಬಸದಿಗಳು ವಿಶೇಷ ಆಕರ್ಷಣೆಯಾಗಿವೆ. ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಮಣಿಪಾಲವನ್ನು ಬಾನಿನಿಂದ ನೋಡಿದಾಗ ಅದರ ಸೊಬಗು ಅತಿ ವಿಶಿಷ್ಟವಾಗಿದೆ ಎಂದು ಗ್ಯಾಲರಿಯ ಆಡಳಿತ ವಿಶ್ವಸ್ತ ಡಾ| ಕಿರಣ್ ಆಚಾರ್ಯ ತಿಳಿಸಿದ್ದಾರೆ. ಮಾ. 11 ಸಂಜೆ 6 ಗಂಟೆಗೆ ಪ್ರದರ್ಶನದ ಉದ್ಘಾಟನೆ ಜರಗಲಿದೆ. ತರಂಗ ವಾರ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಪೈ, ಉಡುಪಿ ಎಎಸ್‌ಪಿ ವಿಷ್ಣುವರ್ಧನ್ ಹಾಗೂ ಸಾಯಿ ರಾಧಾ ಸಮೂಹದ ಮುಖ್ಯಸ್ಥ ಮನೋಹರ ಶೆಟ್ಟಿ ಕಾರ್ಯಕ್ರಮಕ್ಕೆ ಶುಭಕೋರಲಿದ್ದಾರೆ. ಮಾ. 11 ಸಂಜೆ 6 ರಿಂದ ರಾತ್ರಿ 8 ಗಂಟೆಯ ವರೆಗೆ, ಮಾ. 12 ಬೆಳಗ್ಗೆ 10 ರಿಂದ ರಾತ್ರಿ 8 ರತನಕ ಚಿತ್ರಗಳನ್ನು ವೀಕ್ಷಿಸಬಹುದು ಎಂದು ಪ್ರಕಟನೆ ತಿಳಿಸಿದೆ. Advertisement
ಡ್ರೋನ್ ಚಿತ್ರಗಳ ಛಾಯಾಚಿತ್ರ ಪ್ರದರ್ಶನ
12:48 PM Mar 11, 2017 | |
Advertisement
Udayavani is now on Telegram. Click here to join our channel and stay updated with the latest news.