Advertisement

ಫೋನಿ: ಒಡಿಶಾಕ್ಕೆ ಹೆಚ್ಚುವರಿ ನೆರವು

06:11 AM May 07, 2019 | Team Udayavani |

ಹೊಸದಿಲ್ಲಿ: ಫೋನಿ ಚಂಡಮಾರುತದಿಂದ ತತ್ತರಿಸಿರುವ ಒಡಿಶಾಕ್ಕೆ ಕೇಂದ್ರ ಸರಕಾರ ನೀಡಿರುವ ಆರ್ಥಿಕ ನೆರವಿಗೆ ಹೆಚ್ಚುವರಿಯಾಗಿ 1,000 ಕೋ. ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಪಿಎಂ ಮೋದಿ ತಿಳಿಸಿದ್ದಾರೆ. ಸೋಮವಾರ, ಚಂಡ ಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಅವರು, ಅವಘಡ ಉಂಟಾದ ಬೆನ್ನಲ್ಲೇ ಒಡಿಶಾಕ್ಕೆ 341 ಕೋ. ರೂ.ಗಳ ಮುಂಗಡ ಪರಿಹಾರ ನೀಡಲಾ ಗಿತ್ತು. ಆ ಮೊತ್ತಕ್ಕೆ ಹೆಚ್ಚುವರಿ 1,000 ಕೋ. ರೂ. ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ಜತೆಗೆ, ಸಿಎಂ ಪಾಟ್ನಾಯಕ್‌ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next