Advertisement

“Phone Tapping’ ಮಾಡಿಲ್ಲ; ಮಾಹಿತಿ ಕೊಟ್ಟರೆ ತನಿಖೆ: ಪರಮೇಶ್ವರ್‌

10:40 PM May 21, 2024 | Team Udayavani |

ಬೆಂಗಳೂರು: ಫೋನ್‌ಟ್ಯಾಪ್‌ ಮಾಡಿಲ್ಲ ಅಂತಾ ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಆದಾಗ್ಯೂ ಟ್ಯಾಪಿಂಗ್‌ ಮಾಡಿರುವ ಬಗ್ಗೆ ನಿಖರ ಮಾಹಿತಿ ಇದ್ದರೆ ಕೊಡಲಿ, ತನಿಖೆ ಮಾಡಲಾಗುವುದು ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರಕ್ಕೆ ಬಹಳ ಕೆಲಸ ಇದೆ. ಇಷ್ಟು ದಿನ ಬರಗಾಲ ಇತ್ತು. ಅದರ ನಿರ್ವಹಣೆ ಸೇರಿ ಹತ್ತಾರು ಕಾರ್ಯಗಳಿವೆ. ಫೋನ್‌ ಟ್ಯಾಪ್‌ ಮಾಡುವ ಆವಶ್ಯಕತೆ ಇಲ್ಲ. ಮಾಡಿಯೂ ಇಲ್ಲ. ಇದನ್ನು ಈಗಾಗಲೇ ಹೇಳಿದ್ದೇನೆ. ನಿಖರ ಮಾಹಿತಿ ಇದ್ದರೆ ನೀಡಲಿ, ತನಿಖೆ ಮಾಡಲಾಗುವುದು ಎಂದರು.

ವಿದೇಶಾಂಗ ಇಲಾಖೆಗೆ ಪತ್ರ
ಇನ್ನು ಪ್ರಜ್ವಲ್‌ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದ ಬಗ್ಗೆ ಎಸ್‌ಐಟಿ ನಿರಂತರ ತನಿಖೆ ಮಾಡುತ್ತಿದೆ. ಸಂಪೂರ್ಣ ಅಧಿಕಾರ ನೀಡಿದ್ದೇವೆ. ಈಗಾಗಲೇ ಪ್ರಧಾನಿಗೆ ಮುಖ್ಯಮಂತ್ರಿ ಪತ್ರ ಬರೆದಿ¨ªಾರೆ. ವಾರಂಟ್‌ ಆಧಾರದ ಮೇಲೆ ಎಸ್‌ಐಟಿ ಕೂಡ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದೆ. ತತ್‌ಕ್ಷಣ ಪಾಸ್‌ಪೋರ್ಟ್‌ ರದ್ದು ಮಾಡಬೇಕಾಗುತ್ತದೆ. ಪಾಸ್‌ಪೋರ್ಟ್‌ ರದ್ದು ಮಾಡುವ ಅಧಿಕಾರ ಇದೆ. ಇದಕ್ಕೆ ಕೇಂದ್ರ ಸರಕಾರ ಸ್ಪಂದಿಸಬೇಕು ಎಂದು ಪರಮೇಶ್ವರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next