Advertisement
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರಕ್ಕೆ ಬಹಳ ಕೆಲಸ ಇದೆ. ಇಷ್ಟು ದಿನ ಬರಗಾಲ ಇತ್ತು. ಅದರ ನಿರ್ವಹಣೆ ಸೇರಿ ಹತ್ತಾರು ಕಾರ್ಯಗಳಿವೆ. ಫೋನ್ ಟ್ಯಾಪ್ ಮಾಡುವ ಆವಶ್ಯಕತೆ ಇಲ್ಲ. ಮಾಡಿಯೂ ಇಲ್ಲ. ಇದನ್ನು ಈಗಾಗಲೇ ಹೇಳಿದ್ದೇನೆ. ನಿಖರ ಮಾಹಿತಿ ಇದ್ದರೆ ನೀಡಲಿ, ತನಿಖೆ ಮಾಡಲಾಗುವುದು ಎಂದರು.
ಇನ್ನು ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದ ಬಗ್ಗೆ ಎಸ್‌ಐಟಿ ನಿರಂತರ ತನಿಖೆ ಮಾಡುತ್ತಿದೆ. ಸಂಪೂರ್ಣ ಅಧಿಕಾರ ನೀಡಿದ್ದೇವೆ. ಈಗಾಗಲೇ ಪ್ರಧಾನಿಗೆ ಮುಖ್ಯಮಂತ್ರಿ ಪತ್ರ ಬರೆದಿ¨ªಾರೆ. ವಾರಂಟ್ ಆಧಾರದ ಮೇಲೆ ಎಸ್‌ಐಟಿ ಕೂಡ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದೆ. ತತ್‌ಕ್ಷಣ ಪಾಸ್‌ಪೋರ್ಟ್ ರದ್ದು ಮಾಡಬೇಕಾಗುತ್ತದೆ. ಪಾಸ್‌ಪೋರ್ಟ್ ರದ್ದು ಮಾಡುವ ಅಧಿಕಾರ ಇದೆ. ಇದಕ್ಕೆ ಕೇಂದ್ರ ಸರಕಾರ ಸ್ಪಂದಿಸಬೇಕು ಎಂದು ಪರಮೇಶ್ವರ್ ಹೇಳಿದರು.