ಮುಂಬೈ; ಸಿಬಿಐ ಮುಖ್ಯಸ್ಥ ಸುಭೋದ್ ಕುಮಾರ್ ಜೈವಾಲರಿಗೆ ಮುಂಬೈಯ ಸೈಬರ್ ಸೆಲ್ ಅಪರಾಧ ಇಲಾಖೆಯ ಪೊಲೀಸರು ಸಮನ್ಸ್ ಕಳುಹಿಸಿದ್ದು. ರಾಜಕೀಯ ತಿರುವುಗಳನ್ನು ಪಡೆದಿರುವ ಈ ಫೋನ್ ಕದ್ದಾಲಿಗೆ ಪ್ರಕರಣದ ತನಿಖೆ ಈಗ ಮತ್ತೆ ಚುರುಕು ಪಡೆದಿದೆ. ಬರುವ ಗುರುವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಸಿಬಿಐ ಮುಖ್ಯಸ್ಥರಿಗೆ ಈ-ಮೇಲ್ ಮೂಲಕ ಸಮನ್ಸ್ ಕಳುಹಿಸಿದ್ದಾಗಿ ತಿಳಿಸಿದ್ದಾರೆ.
ಈ ತನಿಖಾ ವರದಿಯನ್ನು ಐಪಿಎಸ್ ಆಫೀಸರ್ ರಶ್ಮಿ ಶುಕ್ಲ ತಯಾರಿಸಿದ್ದು, ಪ್ರಕರಣ ನಡೆದ ಸಮಯದಲ್ಲಿ ರಶ್ಮಿ ಶುಕ್ಲ ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥೆಯಾಗಿದ್ದರು ಮತ್ತು ಮಹಾರಾಷ್ಟ್ರದಲ್ಲಿ ನಡೆದಿದ್ದ ಭ್ರಷ್ಟ ಪೊಲೀಸ್ ವರ್ಗಾವಣೆಯ ವಿರುದ್ಧ ದನಿಯೆತ್ತಿದ್ದರು. ಆಗ ಸುಭೋದ್ ಕುಮಾರ್ ಜೈವಾಲ ಮಹರಾಷ್ಟ್ರದ ಪೋಲೀಸ್ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇದನ್ನೂ ಓದಿ:- ಕಲ್ಲಿದ್ದಲು ಕೊರತೆ ನಿವಾರಿಸಲು ಕೇಂದ್ರದ ಜೊತೆ ಚರ್ಚೆಯಾಗಿದೆ: ಸಿಎಂ ಬೊಮ್ಮಾಯಿ
ಈ ಪ್ರಕರಣದಲ್ಲಿ ಹಿರಿಯ ರಾಜಕಾರಣಿಗಳು ಮತ್ತು ಅಧಿಕಾರಿಗಳ ಕರೆಗಳನ್ನು ಕದ್ದಾಲಿಸಲಾಗಿತ್ತು ಮತ್ತು ಅದರ ವರದಿಯನ್ನು ಉದ್ದೇಶ ಪೂರ್ವಕವಾಗಿ ಸೋರಿಕೆ ಮಾಡಲಾಗಿತ್ತು. ಆದರೆ, ಆ ಪ್ರಕರಣಗಳ ಕುರಿತು ಎಫ್‌ಐಆರ್ ಮಾಡಲಾಗಿತ್ತಾದರೂ ಆ ಪ್ರಕರಣದಲ್ಲಿ ಬಾಗಿಯಾಗಿದ್ದ ಜೈವಾಲ ಅಥವಾ ಇತರ ಅಧಿಕಾರಿಗಳ ಹೆಸರು ಉಲ್ಲೇಖಿಸಿರಲಿಲ್ಲ.
1985ರ ಐಪಿಎಸ್ ಬ್ಯಾಚ್‌ನ ಜೈವಾಲರನ್ನು ಮುಖ್ಯ ಕೇಂದ್ರ (ಸಿಬಿಐ) ತನಿಖಾ ಬ್ಯೂರೋದ ಮುಖ್ಯಸ್ಥರಾಗಿ 2 ವರ್ಷದ ಅವಧಿಗೆ ಈ ವರ್ಷ ಮೇ ತಿಂಗಳಲ್ಲಿ ನೇಮಿಸಲಾಗಿದೆ. ಕೇಂದ್ರದ ಪೊಲೀಸ್ ಮುಖ್ಯಸ್ಥ ಸ್ಥಾನ ದೊರೆಯುವ ಮೊದಲು ಮಹಾರಾಷ್ಟ್ರದಲ್ಲೂ ಉನ್ನತ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.