Advertisement

ಫೋನ್‌ ಇನ್‌ ನಲ್ಲಿ ಮಕ್ಕಳ ಗೊಂದಲ ನಿವಾರಣೆ

06:37 PM Mar 24, 2021 | Team Udayavani |

ಕೋಲಾರ: ಕೋವಿಡ್‌ 2ನೇ ಅಲೆಯ ಭೀತಿಯ ನಡುವೆ ಎಸ್ಸೆಸ್ಸೆಲ್ಸಿ ಮಕ್ಕಳ ಗೊಂದಲ ನಿವಾರಣೆಗೆ ಶಿಕ್ಷಣಇಲಾಖೆ ನಡೆಸಿದ ಈ ಸಾಲಿನ ಮೊದಲ ಫೋನ್ ‌ಇನ್‌ ಕಾರ್ಯಕ್ರಮದಲ್ಲಿ 365 ಪ್ರಶ್ನೆಗಳನ್ನು ಮಕ್ಕಳುಕೇಳಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ಸಮರ್ಪಕ ಉತ್ತರ ನೀಡಲಾಗಿದೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಜೂನ್‌ ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲಿರುವ ಮಕ್ಕಳಲ್ಲಿನ ಗೊಂದಲ ನಿವಾರಣೆಗಾಗಿ ಮಂಗಳವಾರತಮ್ಮ ಕಚೇರಿ ಸಭಾಂಗಣದಲ್ಲಿ ನಡೆಸಿದ ಮೊದಲಫೋನ್‌ ಇನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೋವಿಡ್‌ ಆತಂಕದ ಚಕಾರ ಎತ್ತಲಿಲ್ಲ: ಪ್ರಶ್ನೆ ಕೇಳಿದ ಯಾವ ವಿದ್ಯಾರ್ಥಿಯಲ್ಲೂ ಕೋವಿಡ್‌ ಮತ್ತು ಪರೀಕ್ಷಾ ಭಯ ಕಾಣಲಿಲ್ಲ. ಪ್ರತಿಯೊಬ್ಬರೂ ಪರೀಕ್ಷಾ ಸಿದ್ದತೆ, ಪಠ್ಯ ಕಡಿತದ ಮಾಹಿತಿ, ಪರೀಕ್ಷಾವಿಧಾನ, ಪ್ರಶ್ನೆಪತ್ರಿಕೆ ಮಾದರಿ ಹೀಗೆ ಗೊಂದಲ ಪರಿಹಾರಕ್ಕೆ ಪ್ರಶ್ನೆ ಕೇಳಿದರೆ ಹೊರತೂ, ಯಾರೂಕೋವಿಡ್‌ ಎರಡನೇ ಅಲೆಯ ಆತಂಕದ ಕುರಿತುಚಕಾರವೂ ಎತ್ತಲಿಲ್ಲ. ಶಾಲೆಗಳಲ್ಲಿ ಕೋವಿಡ್‌ಮಾರ್ಗಸೂಚಿ ಸಮರ್ಪಕ ಪಾಲನೆಯೇ ಮಕ್ಕಳಲ್ಲಿನ ಈ ಕೋವಿಡ್‌ ಭಯ ನಿವಾರಣೆಗೆ ಕಾರಣವಾಗಿದೆ.ಶಾಲೆಗಳಲ್ಲಿ ಮಾರ್ಗಸೂಚಿ ಕಡ್ಡಾಯ ಪಾಲನೆಗೆಸೂಚಿಸಲಾಗಿದೆ. ಎಸ್ಸೆಸ್ಸೆಲ್ಸಿ ಮಕ್ಕಳ ಗೊಂದಲನಿವಾರಣೆಗೆ ಮುಂದಿನ ದಿನಗಳಲ್ಲೂ ಮತ್ತಷ್ಟು ಫೋನ್‌ ಇನ್‌ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

ವಿಜ್ಞಾನ ವಿಷಯದ್ದೇ ಹೆಚ್ಚು ಪ್ರಶ್ನೆ: ಪರೀಕ್ಷಾ ನೋಡಲ್‌ ಅಧಿಕಾರಿ ಎ.ಎನ್‌.ನಾಗೇಂದ್ರಪ್ರಸಾದ್‌, ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಕ್ಕಳು ಕೇಳಿದಪ್ರಶ್ನೆಗಳ ಕುರಿತು ಮಾಹಿತಿ ನೀಡಿ, ಪರೀûಾ ವಿಧಾನಕ್ಕೆ ಸಂಬಂಧಿಸಿದಂತೆ 30 ಪ್ರಶ್ನೆಗಳು ಮಕ್ಕಳಿಂದ ಬಂತು ಎಂದರು.

ಉಳಿದಂತೆ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ 60 ಪ್ರಶ್ನೆ, ಇಂಗ್ಲಿಷ್‌ ವಿಷಯಕ್ಕೆ 54 ಪ್ರಶ್ನೆ, ಹಿಂದಿಗೆ 25,ಗಣಿತ ವಿಷಯಕ್ಕೆ ಸಂಬಂಧಿಸಿದಂತೆ 54, ವಿಜ್ಞಾನ ವಿಷಯಕ್ಕೆ 78 ಪ್ರಶ್ನೆ ಹಾಗೂ ಸಮಾಜ ವಿಜ್ಞಾನವಿಷಯಕ್ಕೆ ಸಂಬಂಧಿಸಿದಂತೆ 64 ಪ್ರಶ್ನೆಗಳನ್ನು ಮಕ್ಕಳು ಕೇಳಿದರು ಎಂದು ವಿವರಿಸಿದರು.

Advertisement

ಓದುವ ಅಭ್ಯಾಸ ರೂಢಿಸಿಕೊಳ್ಳಿ: ಮಕ್ಕಳು ಅತಿ ಹೆಚ್ಚುಅಂಕ ಗಳಿಸಲು ಏನು ಮಾಡಬೇಕು ಎಂಬಪ್ರಶ್ನೆಗೆ ಉತ್ತರಿಸಿದ ನಾಗೇಂದ್ರಪ್ರಸಾದ್‌, ಪಠ್ಯಪುಸ್ತಕ ಓದುವಅಭ್ಯಾಸ ರೂಢಿಸಿಕೊಳ್ಳಬೇಕು. ಪ್ರತಿ ಅಧ್ಯಾಯದ ಅಭ್ಯಾಸದಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿ, ಇಲಾಖೆ ನೀಡಿರುವ ಅಧ್ಯಾಯವಾರು ಪ್ರಶ್ನೆಪತ್ರಿಕೆ, “ನನ್ನನ್ನೊಮ್ಮೆಗಮನಿಸಿ’ ಪ್ರಶ್ನೋತ್ತರ ಮಾಲಿಕೆಯನ್ನು ಓದಿ,ಪ್ರಶ್ನೆಗಳಿಗೆ ನೀವೇ ಉತ್ತರ ಬರೆದು ಅಭ್ಯಾಸ ಮಾಡಿ ಎಂದು ಸಲಹೆ ನೀಡಿದರು.

ಶೇ.10ರಷ್ಟು ಮಾತ್ರ ಕಠಿಣ ಪ್ರಶ್ನೆಗಳು: ನಿರಂತರ ಪುನರ್ಮನನ ಮಾಡಿದರೆ ಎಲ್ಲಾ ಉತ್ತರಗಳುನೆನಪಿನಲ್ಲಿರಲು ಸಾಧ್ಯ. ಈ ಬಾರಿ ಪ್ರಶ್ನೆ ಪತ್ರಿಕೆಸುಲಭವಾಗಿರಲಿದೆ. ಶೇ.10ರಷ್ಟು ಮಾತ್ರ ಕಠಿಣ ಪ್ರಶ್ನೆಗಳು ಇರುತ್ತವೆ. ಪುಸ್ತಕದಲ್ಲಿನ ಮಾಹಿತಿಹೊರತುಪಡಿಸಿ, ಬೇರಾವುದೇ ಪ್ರಶ್ನೆ ಕೇಳುವುದಿಲ್ಲ ಎಂದು ಸ್ವಷ್ಟಪಡಿಸಿದರು.

ಕನ್ನಡ, ಇಂಗ್ಲಿಷ್‌, ಹಿಂದಿಯಲ್ಲಿ ಮಕ್ಕಳುವ್ಯಾಕರಣದ ಕುರಿತು ಹೆಚ್ಚು ಪ್ರಶ್ನೆ ಕೇಳಿದರೆ, ಗಣಿತದಲ್ಲಿ 4 ಅಂಕಗಳ ಪ್ರಶ್ನೆ, ಗ್ರಾಪ್‌ ಲೆಕ್ಕಗಳ ಕುರಿತು ಪ್ರಶ್ನೆಕೇಳಿದರು. ವಿಜ್ಞಾನದಲ್ಲಿ ಅನುವಂಶಿಕತೆ ಮತ್ತು ಮಾನವಿ ವಿಕಾಸದ ಅಧ್ಯಾಯಗಳಿಂದ ಹೆಚ್ಚಿನ ಪ್ರಶ್ನೆಕೇಳಿದ ಮಕ್ಕಳು, ಸಮಾಜದಲ್ಲಿ 3-4 ಅಂಕದ ಪ್ರಶ್ನೆಗಳಕುರಿತು ಮಾಹಿತಿ ಕೇಳಿದರು. ಧೀರ್ಘ‌ ಉತ್ತರದಪ್ರಶ್ನೆಗಳನ್ನು ಕೇಳಿದ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳು ಉತ್ತರವನ್ನು ಅವರ ಪೋಷಕರ ವಾಟ್ಸಪ್‌ಗೆಕಳುಹಿಸಲು ಕ್ರಮವಹಿಸಲಾಗಿದೆ ಎಂದು ನಾಗೇಂದ್ರಪ್ರಸಾದ್‌ ತಿಳಿಸಿದರು.

ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಸಿ.ಆರ್‌.ಅಶೋಕ್‌, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್‌, ವಿಷಯ ಪರಿವೀಕ್ಷಕ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ವೆಂಕಟೇಶಪ್ಪ ಹಾಜರಿದ್ದರು.ಮಕ್ಕಳ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳಾದನರಸಿಂಹ ಪ್ರಸಾದ್‌, ಮುಖ್ಯ ಶಿಕ್ಷಕ ಹನುಮನಹಳ್ಳಿನಾಗರಾಜ್‌, ಬಿ.ಎ.ಕವಿತಾ, ನಾರಾಯಣ ರೆಡ್ಡಿ, ಎನ್‌. ಎಸ್‌.ಭಾಗ್ಯ, ಶೈಲಾ, ಬಸವರಾಜ್‌, ರಮಾ,ವೇಣುಗೋಪಾಲ್‌, ಕವಿತಾ ಮತ್ತಿತರರು ಮಕ್ಕಳ ಪ್ರಶ್ನೆಗಳಿಗೆ ಉತ್ತರ ನೀಡಿ ಗೊಂದಲ ಪರಿಹರಿಸಿದರು

Advertisement

Udayavani is now on Telegram. Click here to join our channel and stay updated with the latest news.

Next