Advertisement

ಫೋನ್‌ ಇನ್‌ ಕಾರ್ಯಕ್ರಮಕ್ಕೆ ಸ್ಪಂದನೆ

03:22 PM Feb 21, 2022 | Team Udayavani |

ಕೋಲಾರ: ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸುವ ದೃಷ್ಟಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ 2ನೇ ಫೋನ್‌ ಇನ್‌ಕಾರ್ಯಕ್ರಮದಲ್ಲಿ 210 ದೂರವಾಣಿ ಕರೆಗಳು ಬಂದಿದ್ದು, ಮಕ್ಕಳು ವಿವಿಧ ವಿಷಯಗಳಿಗೆ ಸಂಬಂಧಿಸಿದ 289 ಪ್ರಶ್ನೆಗಳಿಗೆ ಪರಿಹಾರ ಕಂಡುಕೊಂಡರು ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬರುವ ಮಾರ್ಚ್‌-ಏಪ್ರಿಲ್‌ನಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಎದುರಿಸಲಿರುವ ಮಕ್ಕಳಲ್ಲಿನ ಗೊಂದಲ ನಿವಾರಣೆಗಾಗಿ ತಮ್ಮ ಕಚೇರಿಯ ಡಿವಿಜಿ ಸಭಾಂಗಣದಲ್ಲಿ ನಡೆಸಿದ ಮೊದಲ 2ನೇ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕೋವಿಡ್‌ ಅಲೆಗಳಿಂದಾಗಿ ಕಳೆದೆರಡು ವರ್ಷಗಳಿಂದ 8 ಮತ್ತು 9ನೇ ತರಗತಿ ಮಕ್ಕಳಲ್ಲಿ ನಿಗದಿತ ಶೆ„ಕ್ಷಣಿಕ ಸಾಮರ್ಥ್ಯ ಬೆಳೆಸಲು ಸಾಧ್ಯವಾಗಿಲ್ಲ, ಇದರಿಂದ 10ನೇ ತರಗತಿಮಕ್ಕಳಲ್ಲಿ ಕಲಿಕೆ,ಪರೀಕ್ಷೆಗಳ ಕುರಿತು ಇರುವಗೊಂದಲ, ಭಯ ಹೋಗಲಾಡಿಸುವ ಅಗತ್ಯವಿದೆ ಎಂದರು.

ಸ್ಪಂದನೆ: ಈ ಸಾಲಿನ 2ನೇ ´ಫೋನ್‌ ಇನ್‌ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು,ಮಕ್ಕಳು ಪರೀಕ್ಷೆ,ಪ್ರಶ್ನೆಪತ್ರಿಕೆ, ಕ್ಲಿಷ್ಟತೆ ಸೇರಿದಂತೆ ಅನೇಕ ಪ್ರಶ್ನೆಗಳನ್ನು ಕೇಳಿದ್ದು, ಅಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಿ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ ಎಂದರು.

ಪರೀಕ್ಷಾ ನೋಡಲ್‌ ಅಧಿಕಾರಿ ಎ.ಎನ್‌.ನಾಗೇಂದ್ರಪ್ರಸಾದ್‌, ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳ ಕುರಿತು ಮಾಹಿತಿ ನೀಡಿ, ಪರೀಕ್ಷಾ ವಿಧಾನಕ್ಕೆ ಸಂಬಂಧಿಸಿದಂತೆ 40 ಕರೆಗಳು ಹಾಗೂ 51 ಪ್ರಶ್ನೆಗಳನ್ನು ಮಕ್ಕಳು ಕೇಳಿದ್ದು, ಅವರಲ್ಲಿನ ಗೊಂದಲ ನಿವಾರಿಸಲಾಗಿದೆ ಎಂದರು.

Advertisement

ಇಂದಿನ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪ್ರಥಮ ಭಾಷೆ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ 75 ಪ್ರಶ್ನೆ, ದ್ವೀತೀಯ ಭಾಷೆ ಇಂಗ್ಲಿಷ್‌ ವಿಷಯಕ್ಕೆ 39 ಪ್ರಶ್ನೆ, ಹಿಂದಿಗೆ 22, ಗಣಿತ ವಿಷಯಕ್ಕೆ ಸಂಬಂಧಿಸಿದಂತೆ 32, ವಿಜ್ಞಾನ ವಿಷಯಕ್ಕೆ 25 ದೂರವಾಣಿ ಕರೆಗಳು ಹಾಗೂ ಸಮಾಜವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ 30 ಕರೆ ಹಾಗೂ 40 ಪ್ರಶ್ನೆ, ಉರ್ದು ವಿಷಯಕ್ಕೆ 10 ಪ್ರಶ್ನೆಗಳನ್ನು ಹಾಗೂ ಪರೀಕ್ಷೆಗೆ ಸಂಬಂಧಿಸಿದಂತೆ 51 ಪ್ರಶ್ನೆಗಳನ್ನು ಮಕ್ಕಳು ಕೇಳಿದರು ಎಂದು ವಿವರಿಸಿದರು.

ಮಕ್ಕಳು ಸೋಮವಾರದಿಂದ ನಡೆಯುವ ಪೂರ್ವಸಿದ್ಧತಾ ಪರೀಕ್ಷೆಗೆ ಸಿದ್ಧತೆ, ಕಠಿಣಪ್ರಶ್ನೆಗಳು ಎಷ್ಟಿರುತ್ತವೆ, ವಾರ್ಷಿಕ ಪರೀಕ್ಷೆಗಳುನಿಗದಿಯಾದಂತೆ ನಡೆಯುತ್ತದೆಯೇ, 100ಅಂಕ ಗಳಿಕೆಗೆ ಏನು ಮಾಡಬೇಕು ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿದರು ಎಂದರು.

ಕೆಲವು ಮಕ್ಕಳು ಈ ಬಾರಿಯ ಎಸ್ಸೆಸ್ಸೆಲ್ಸಿಪರೀಕ್ಷೆ ನಿಗದಿತ ವೇಳಾಪಟ್ಟಿಯಂತೆನಡೆಯುವುದೇ ಎಂದು ಪ್ರಶ್ನಿಸಿದ್ದು, ಅದಕ್ಕೆಹೌದು ಎಂದು ಉತ್ತರಿಸಿದ ಅವರು,ಪಠ್ಯಪುಸ್ತಕ ಹೊರತುಪಡಿಸಿ ಯಾವುದೇ ಕಾರಣಕ್ಕೂ ಪ್ರಶ್ನೆಗಳನ್ನು ಕೇಳುವುದಿಲ್ಲ ಎಂದರು.

ಕನ್ನಡ,ಇಂಗ್ಲಿಷ್‌, ಹಿಂದಿಯಲ್ಲಿ ಮಕ್ಕಳು ವ್ಯಾಕರಣದ ಕುರಿತು ಹೆಚ್ಚು ಪ್ರಶ್ನೆ ಕೇಳಿದರೆ,ಗಣಿತದಲ್ಲಿ 4 ಅಂಕಗಳ ಪ್ರಶ್ನೆ,ವಿಜ್ಞಾನದಲ್ಲಿ ರಸಾಯನಿಕ ಕ್ರಿಯೆಗಳ ಸಮೀಕರನಗಳು ಮತ್ತು ಮಾನವಿ ವಿಕಾಸದ ಅಧ್ಯಾಯಗಳಿಂದ ಹೆಚ್ಚಿನ ಪ್ರಶ್ನೆ ಕೇಳಿದ ಮಕ್ಕಳು, ಸಮಾಜದಲ್ಲಿ 3-4 ಅಂಕದ ಪ್ರಶ್ನೆಗಳ ಕುರಿತು ಮಾಹಿತಿ

ಕೇಳಿದರು. ಫೋನ್‌ ಇನ್‌ ಕಾರ್ಯಕ್ರಮದಲ್ಲಿಜಿಲ್ಲಾ ದೆ„ಹಿಕ ಶಿಕ್ಷಣಾಧಿಕಾರಿ ಮಂಜುನಾಥ್‌,ವಿಷಯ ಪರಿವೀಕ್ಷಕರಾದ ಗಾಯತ್ರಿ,ಶಶಿವಧನ, ಕೃಷ್ಣಪ್ಪ, ವೆಂಕಟೇಶಪ್ಪ ಹಾಜರಿದ್ದರು.

ಪರಿಹಾರ: ಮಕ್ಕಳ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳಾದ ನರಸಿಂಹಪ್ರಸಾದ್‌, ಚೈತ್ರಾ, ಮುಖ್ಯ ಶಿಕ್ಷಕ ಹನುಮನಹಳ್ಳಿ ಬಿ.ಕೆ.ನಾಗರಾಜ್‌, ವಾಣಿ, ಬಿ.ಎ.ಕವಿತಾ, ರಮಾ, ಎನ್‌.ಎಸ್‌ .ಭಾಗ್ಯ,ಶಾರದಾಂಭ, ವೇಣುಗೋಪಾಲ್‌,ಪ್ರಭಾ, ಬಸವರಾಜ್‌, ಶ್ರೀನಿವಾಸಗೌಡ,ಸಿರಾಜುದ್ದೀನ್‌ ಮತ್ತಿತರರು ಮಕ್ಕಳ ಪ್ರಶ್ನೆಗಳಿಗೆ ಉತ್ತರ ನೀಡಿ ಗೊಂದಲ ಪರಿಹರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next