Advertisement
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರನಡೆದ ಜಿಲ್ಲಾ ಮಟ್ಟದ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಕರೆ ಮಾಡಿದಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಜಿಪಂ ಸಿಇಒ ಎ.ಎಂ.ಯೋಗೇಶ್ ಆಲಿಸಿದರು.
Related Articles
Advertisement
ಧನಗಳ್ಳಿಯಲ್ಲಿ ನಿವೇಶನದ 11 ಬಿ ಪಡೆಯುಲು ನನ್ನ ಬಳಿ ಲಂಚ ಪಡೆದರು. ಬಡವರನ್ನು ಈ ಪರಿ ಗೋಳಾಡಿಸುವುದು ನ್ಯಾಯವೇ? ಬಡವರಿಗೆಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಅನುಪಮಾ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಉಪ ಕಾರ್ಯರ್ದಶಿ ದೇವರಾಜೇಗೌಡ ಪ್ರತಿಕ್ರಿಯಿಸಿ, ಲಂಚ ಸ್ವೀಕರಿಸುವುದು ಹೇಗೆ ಅಪರಾಧದವೋ ಲಂಚ ನೀಡುವುದು ಅಪರಾಧ. ನಿಮಗೆ ಅನ್ಯಾಯವಾಗಿದ್ದರೆ ಮೇಲಿನ ಸಂಸ್ಥೆಗಳಿಗೆ ದೂರು ನೀಡಬಹುದು. ನಿಮ್ಮ ಸಮಸ್ಯೆಯನ್ನುಸಂಬಂಧಪಟ್ಟವರ ಗಮನಕ್ಕೆ ತರಲಿದೆ ಎಂದರು. ಮಾನಸಿನಗರದ ನಿವಾಸಿ ವಿಜಯ್ ಕುಮಾರ್, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ, ಟೆರೇಷಿಯನ್ ಕಾಲೇಜಿಂದ ಮಾನಸಿನಗರಕ್ಕೆ ಬಸ್ ಬಿಡುವಂತೆಕೋರಿದರೆ, ಮೈಸೂರಿನ ಶ್ರೀನಗರದ ರಸ್ತೆಗಳನ್ನುಅಭಿವೃದ್ಧಿಪಡಿಸಬೇಕೆಂಬ ವಾಣಿ ಎಂಬವರು ಮನವಿಗೆಸ್ಪಂದಿಸಿದ ಅಧಿಕಾರಿಗಳು, ನಿಮ್ಮ ಬಡಾವಣೆ ಮುಡಾವ್ಯಾಪ್ತಿಗೆ ಬರುತ್ತದೆ. ಮುಡಾಗೆ ಮನವಿ ಸಲ್ಲಿಸುವಂತೆ ಸಲಹೆ ನೀಡಿದರು.
ಮೈಸೂರು ತಾಲೂಕು ದಡದಹಳ್ಳಿಯ ಸುನಿಲ್ ಅವರು ಸಿಂಧುವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 5 ವರ್ಷದ ಹಿಂದೆ 20×30 ನಿವೇಶನ ಖರೀದಿಸಿದ್ದೇವೆ. ಆ ಜಾಗ ಸರ್ವೆ ನಂಬರ್‌ನಲ್ಲಿದೆ. ಅಕ್ರಮ ಸಕ್ರಮದಲ್ಲಿಬದಲಾಯಿಸಿಕೊಳ್ಳಬಹುದೇ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಉಪ ಕಾರ್ಯದರ್ಶಿ ಸರ್ವೆನಂಬರ್‌ನಲ್ಲಿರುವ ಆಸ್ತಿ ಕ್ರಮಬದ್ಧವಲ್ಲ. ಸರ್ಕಾರ ಅಕ್ರಮ ಸಕ್ರಮಕ್ಕೆ ಅರ್ಜಿ ಕರೆದಾಗ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.
ಸಹಾಯಕ ಕಾರ್ಯದರ್ಶಿ ಕುಲದೀಪ್, ಡಿಎಚ್‌ಒ ಡಾ.ಕೆ.ಎಚ್.ಪ್ರಸಾದ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರುದ್ರೇಶ್ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.
ಅರ್ಧ ಗಂಟೆಗೆ ಫೋನ್ ಇನ್ ಮುಕ್ತಾಯ: ಸಾರ್ವಜನಿಕರ ಆಹವಾಲು ಆಲಿಸಿ ಪರಿಹರಿಸುವಮಹತ್ವಾಕಾಂಕ್ಷೆಯ ಜಿಲ್ಲಾ ಮಟ್ಟದ ಫೋನ್ ಇನ್‌ಕಾರ್ಯಕ್ರಮ ಅರ್ಧ ಗಂಟೆಗೆ ಸೀಮಿತವಾಯಿತು.ವಿವಿಧ ಭಾಗಗಳಿಂದ 15 ಕರೆಗಳು ಬಂದವು. ಸಮಸ್ಯೆಆಲಿಸಿದ ಅಧಿಕಾರಿಗಳು ಶೀಘ್ರ ಬಗೆಹರಿಸುವ ಭರವಸೆ ನೀಡಿದರು.
15 ಇಲಾಖೆಗಳಂತೆ ಸೇರಿ 15 ದಿನಕ್ಕೊಮ್ಮೆ ಫೋನ್ ಇನ್ ಕಾರ್ಯಕ್ರಮ ನಡೆಸಬೇಕು. ಕಡ್ಡಾಯವಾಗಿಜಿಲ್ಲಾ ಮಟ್ಟದ ಅಧಿಕಾರಿ ಇರಬೇಕು. ಸಮಸ್ಯೆಗಳನ್ನು ಬಗೆಹರಿಸಲು ನಿರ್ಲಕ್ಷಿಸಬಾರದು–ಎ.ಎಂ. ಯೋಗೇಶ್, ಸಿಇಒ, ಜಿಪಂ