Advertisement
ನೋ ಪಾರ್ಕಿಂಗ್ ಫಲಕ ಮಾಯಕೊಟ್ಟಾರಚೌಕಿ ಸರ್ವೀಸ್ ರಸ್ತೆಯಲ್ಲಿ ನೋ ಪಾರ್ಕಿಂಗ್ ಫಲಕ ಕಾಣುತ್ತಿಲ್ಲ. ಹಾಗಾಗಿ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೊಟ್ಟಾರ ಚೌಕಿ ಬಸ್ ಬೇನಲ್ಲಿ ಲಾರಿ ಪಾರ್ಕಿಂಗ್ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರೊಬ್ಬರು ದೂರಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಭರವಸೆ ನೀಡಿದರು.
ತೊಕ್ಕೊಟ್ಟು ಮತ್ತು ಬೈಕಂಪಾಡಿ ಬಳಿ ಹಾಲ್ ಗಳಲ್ಲಿ ಸಮಾರಂಭ ಇರುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರೊಬ್ಬರು ತಿಳಿಸಿದರು. ಹಾಲ್‌ನ ಆವರಣದಲ್ಲೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಮಾಲಕರಿಗೆ ಸೂಚಿಸಲಾಗುವುದು ಎಂದು ಡಿಸಿಪಿ ಹೇಳಿದರು. ಕಾಟಿಪಳ್ಳ ಕೈಕಂಬ ಬಳಿ ನೆರೆ ಮನೆಯ ಸೇಫ್ಟಿ ಟ್ಯಾಂಕ್ ತುಂಬಿ ಹರಿದು ಮನೆಯ ಆವರಣಕ್ಕೆ ಬರುತ್ತಿದೆ. ನಾಲ್ಕು ವರ್ಷಗಳಿಂದ ಸಮಸ್ಯೆ ಅನುಭವಿಸುತ್ತಿದ್ದೇವೆ ಎಂದು ಮಹಿಳೆಯೊಬ್ಬರು ದೂರಿದರು. ಈ ಬಗ್ಗೆ ಮನಪಾ ಆಯುಕ್ತರನ್ನು ಭೇಟಿ ಮಾಡಿ ದೂರು ನೀಡಲು ಡಿಸಿಪಿ ಸೂಚಿಸಿದರು. ಕಟೀಲಿಗೆ ನರ್ಮ್ ಬಸ್ ಬೇಕು
ಮಂಗಳೂರು- ಕಟೀಲು ಬಸ್‌ನವರು ಟಿಕೆಟ್ ನೀಡುತ್ತಿಲ್ಲ. ಕಟೀಲಿಗೆ ನರ್ಮ್ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರೊಬ್ಬರು ತಿಳಿಸಿದರು. ಡಿಸಿಪಿ ಉಮಾ ಪ್ರಶಾಂತ್, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
Related Articles
– ಬಿಜೈ ಭಾರತ್ ಮಾಲ್, ಮನಪಾ ಕಚೇರಿ ಎದುರು ನೀರು ನಿಲ್ಲುತ್ತಿದೆ.
Advertisement
– ಸೈಂಟ್ ಆ್ಯನ್ಸ್ ಕಾಲೇಜು ಬಳಿ ಹುಡುಗರು ಹೆಲ್ಮೆಟ್ ಹಾಕದೆ ವೇಗವಾಗಿ ಬೈಕ್ ಚಲಾಯಿಸುತ್ತಿದ್ದಾರೆ.
– ಕೈಕಂಬ ಪೊಂಪೈ ಶಾಲಾ ವಾಹನದವರು ಮಗುವನ್ನು ರಸ್ತೆ ದಾಟಿಸಿ ಮನೆ ತನಕ ಕರೆ ತರದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
– ಕಾವೂರಿನಲ್ಲಿ ನೆರೆ ಮನೆಯವರ ತೆಂಗಿನ ಮರ ತನ್ನ ಮನೆಗೆ ವಾಲಿ ನಿಂತಿದೆ ಎಂದು ವ್ಯಕ್ತಿಯೊಬ್ಬರು ದೂರಿದ್ದಾರೆ.
– ಮೂಡುಬಿದಿರೆ ಪ್ರಾರ್ಥನ ಮಂದಿರದ ಬಳಿ ವಾಹನ ಪಾರ್ಕಿಂಗ್ ನಿಂದ ಸಮಸ್ಯೆಯಾಗುತ್ತಿದೆ.
– ಬಂಟ್ಸ್ ಹಾಸ್ಟೆಲ್ ಬಳಿ ರಸ್ತೆ ದಾಟಲು ತೊಂದರೆಯಾಗುತ್ತಿದೆ.