Advertisement

ತತ್ವಾಚರಣೆಯಿಂದ ಅರ್ಥಪೂರ್ಣ ಬದುಕು: ಬಸವಪ್ರಭು ಶ್ರೀ

03:18 PM Jan 06, 2022 | Team Udayavani |

 ದಾವಣಗೆರೆ: ದೈನಂದಿನ ಜೀವನದಲ್ಲಿ ತತ್ವಾಚರಣೆಯಿಂದ ಬದುಕಿಗೆ ಬೆಲೆ ಬರುತ್ತದೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

Advertisement

ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ನಡೆದ ಶರಣ ಸಂಗಮ ಹಾಗೂ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು, ದೈನಂದಿನ ಜೀವನದಲ್ಲಿ ತತ್ವಾಚರಣೆ ಮಾಡುವುದು ಸುಲಭ. ಜೀವನದಲ್ಲಿ ಪ್ರೀತಿ, ವಿಶ್ವಾಸ, ಸತ್ಯ, ಪ್ರಾಮಾಣಿಕತೆ, ಶಾಂತಿ, ಸಹನೆ, ವಿನಯ, ತ್ಯಾಗ, ಸಮಾನತೆ ಎಂಬ ತತ್ವಗಳನ್ನು ಬರೀ ಬಾಯಿ ಮಾತಿಗೆ ಹೇಳುವುದಲ್ಲ, ತತ್ವಗಳಂತೆ ಬದುಕಿ ತೋರಿಸಬೇಕು. ತತ್ವಗಳು ಕೇವಲ ಭಾಷಣ ಮಾಡಿ ಉಪದೇಶ ಮಾಡುವುದಕ್ಕೆ ಅಲ್ಲ. ಮೌಲ್ಯಯುತ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಚಾಚೂ ತಪ್ಪದೆ ಪಾಲಿಸಬೇಕು ಎಂದರು. ಮಾನವ ಸೃಷ್ಟಿಯ ಮುಕುಟಮಣಿಯಾ ಗಿದ್ದಾನೆ. ಕಾರಣ ಇತರೆ ಜೀವರಾಶಿಗಳಿಗಿಂತಲೂ ಮಾನವರಲ್ಲಿ ವಿಚಾರ ಶಕ್ತಿ, ಆಲೋಚನಾ ಸಾಮರ್ಥ್ಯ, ಮಾತನಾಡುವ ಕಲೆ ಇವೆ. ಮಾನವರಲ್ಲಿ ಅದಮ್ಯ ಶಕ್ತಿ ಇದ್ದರೂ ಅಜ್ಞಾನ, ಮೈಮರೆವು ಕಾರಣಗಳಿಂದ ಬಹಳ ಕಡಿಮೆ ಪ್ರಮಾಣದಲ್ಲಿ ಅದಮ್ಯ ಶಕ್ತಿ ಬಳಕೆಯಾಗುತ್ತಿರುವುದು ಕಂಡು ಬರುತ್ತಿದೆ ಎಂದು ವಿಷಾದಿಸಿದರು. ಅಜ್ಞಾನದ ಕಾರಣದಿಂದಾಗಿಯೇ ಅಪ್ರತಿಮ, ಅನನ್ಯ ಗುರಿಯತ್ತ ಜೀವನವನ್ನ ಸಾಗಿಸದೆ ಕೇವಲ ಲೌಕಿಕ ಜೀವನದ ಕ್ಷಣಿಕ ಸುಖಕ್ಕಾಗಿ ಹಂಬಲಿಸುತ್ತಾ ಸದಾ ದುಖೀಃಯಾಗಿರುವುದು ಸರಿಯಲ್ಲ. ಭೌತಿಕ ಪ್ರಪಂಚದ ವಿಷಯ ಸುಖಗಳನ್ನ ಕೊಡಬಹುದೇ ಹೊರತು ಶಾಶ್ವತ ಆನಂದವನ್ನು ಕೊಡುವುದೇ ಇಲ್ಲ ಎಂಬುದನ್ನು ಅರಿತು ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ಸಾಗುವಂತಾಗಬೇಕು ಎಂದು ಆಶಿಸಿದರು.

ಕೆಲವರು ತತ್ವಾಚರಣೆಗಳ ಮಾಡಲಾಗದೆ ಅವು ಎಲ್ಲವೂ ಕಬ್ಬಿಣದ ಕಡಲೆ ಎನ್ನುತ್ತಾರೆ. ವಾಸ್ತವವಾಗಿ ತತ್ವಾಚರಣೆ ಕಬ್ಬಿಣದ ಕಡಲೆಯಲ್ಲ. ತತ್ವಾಚರಣೆ ಜ್ಞಾನದ ಬುತ್ತಿ. ಸುಲಿದ ಬಾಳೆಹಣ್ಣಿನಂತೆ ಬಹಳ ಸುಲಭವಾಗಿವೆ. ನಾವೆಲ್ಲರೂ ತತ್ವ ನೀತಿಯಂತೆ ಬಾಳುವಂತಹ ಬದ್ಧತೆ ತೋರಬೇಕು ಎಂದು ಕರೆ ನೀಡಿದರು. ಜೀವನವನ್ನು ನಿರಂತರ ಅಂತರ ಅವಲೋಕನದಿಂದ ಅರ್ಥಪೂರ್ಣವಾಗಿಸಿ ಕೊಳ್ಳುವ ಮೂಲಕ ಮೌಲ್ಯಗಳ ಶ್ರೀಮಂತ ಬದುಕಾಗುತ್ತದೆ. ಆಗ ಮಾತ್ರ ಸಾರ್ಥಕತೆ ಕಾಣುತ್ತದೆ. ಯಾರಲ್ಲಿ ಅಂತರಂಗದ ತಿಳವಳಿಕೆ ಜಾಗೃತವಾಗಿ ಇರುತ್ತದೆಯೋ ಅದು ಬಹಿರಂಗ ನvುವಳಿಕೆಯಾಗುತ್ತದೆ. ಜೀವನದ ಪರಿಪೂರ್ಣತೆ ಸಾಧ್ಯ ಆಗುತ್ತದೆ ಎಂದು ತಿಳಿಸಿದರು. ನಡೆ ಮತ್ತು ನುಡಿಯಲ್ಲಿ ಸಾಮ್ಯತೆಯಿಂದ ಮಾನವನ ಜೀವನ, ವ್ಯಕ್ತಿತ್ವ ವಿಕಸನವಾಗುತ್ತದೆ. ಆಗ ವಿಶ್ವ ಮಾನವರಾಗುತ್ತೇವೆ. ನಡೆ-ನುಡಿಯ ಸಾಮ್ಯತೆಗಳು ನಮ್ಮಲ್ಲಿನ ಜವಾಬ್ದಾರಿಯ ಹೆಚ್ಚಿಸುತ್ತವೆ ಎಂದರು.

ಸಾಹಿತಿ ಎನ್‌.ಜೆ. ಶಿವಕುಮಾರ್‌ “ದೈನಂದಿನ ಜೀವನದಲ್ಲಿ ತತ್ವಾಚರಣೆ ಆಗುವುದೇ’ ವಿಷಯದ ಕುರಿತು ಉಪನ್ಯಾಸ ನೀಡಿದರು. ದಾವಣಗೆರೆ ವಿಶ್ವವಿದ್ಯಾಲಯದ ಉಪ ಕುಲಸಚಿವೆ ಎಂ.ಜಿ. ಸುಜಾತಾ, ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ. ರಾಘವೇಂದ್ರ ನಾಯರಿ, ಸಿವಿಲ್‌ ಎಂಜಿನಿಯರ್‌ ಸಮೀರ್‌ ಖಾನ್‌ ಇತರರು ಇದ್ದರು. ರುದ್ರಾಕ್ಷಿಬಾಯಿ, ರುಕಾ¾ಬಾಯಿ ವಚನ ಗಾಯನ ಪ್ರಸ್ತುತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next