Advertisement
ಸಂತ ಫಿಲೋಮಿನಾ ಕಾಲೇಜಿನ ಮಾನವಿಕ ಸಂಘವು ತುಳು ಸಾಹಿತ್ಯ ಅಕಾಡೆಮಿ ಸಹಕಾರದೊಂದಿಗೆ ಆಯೋಜಿ ಸಿದ ವಿವಿ ಮಟ್ಟದ ಫಿಲೋ ಪಂಥೊ ಅಂತರ್ ಕಾಲೇಜು ತುಳು ಜಾನಪದ ಸ್ಪರ್ಧೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ದಿನಗಳಲ್ಲಿ ಜಾಗತೀಕರಣದ ಪ್ರಭಾವಕ್ಕೊಳಗಾಗಿ ನಾವೆಲ್ಲರೂ ವಿದೇಶಿ ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಿ ದ್ದೇವೆ. ಇಂತಹ ಸನ್ನಿವೇಶದಲ್ಲಿ ನಾಡಿನ ಶ್ರೀಮಂತ ಸಂಸ್ಕೃತಿಯನ್ನು ಗೌರವ ಭಾವನೆ ಯಿಂದ ಕಂಡು, ನಮ್ಮ ನಡೆ -ನುಡಿಗಳಲ್ಲಿ ಅಳವಡಿಸಿಕೊಳ್ಳುವುದು ಆದ್ಯ ಕರ್ತವ್ಯ ಎಂದು ಹೇಳಿದರು.
Related Articles
ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕ ವಂ| ಆಲ್ಫೆÅಡ್ ಜೆ. ಪಿಂಟೋ, ಭತ್ತ ತುಂಬಿದ ಕಳಸದಲ್ಲಿ ಸಿಂಗಾರವನ್ನು ಅರಳಿಸಿ, ಸ್ಪರ್ಧೋತ್ಸವಕ್ಕೆ ಚಾಲನೆ ನೀಡಿದರು. ತುಳು ನಾಡು ವಿವಿಧ ಜಾತಿ ಮತ ಪಂಥಗಳ ಜನರನ್ನು ಒಳಗೊಂಡಿದೆ.
ಇಲ್ಲಿರುವ ಜನರೆಲ್ಲರೂ ಒಂದೇ ತುಳು ಮಾತೆಯ ಮಕ್ಕಳಂತೆ ಪರಸ್ಪರ ಅನ್ಯೋನ್ಯತೆಯಿಂದ ಕೂಡಿದ್ದಾರೆ. ನಮ್ಮ ತುಳು ಭಾಷೆ ರಾಷ್ಟ್ರ ಮಟ್ಟದಲ್ಲಿಯೂ ಮನ್ನಣೆ ಪಡೆದಿರುವುದು ಸಂತೋಷದ ವಿಷಯ ಎಂದು ಹೇಳಿದರು.
Advertisement
ಸ್ಪಧೋತ್ಸವದ ತೀರ್ಪುಗಾರರಾದ ರಮೇಶ್ ಉಳಯ, ಸಹ ತೀರ್ಪುಗಾರರಾದ ರಮೇಶ್ ಕಲ್ಮಾಡಿ, ಸುಧೀರ್ ಬಾಳೆಪುಣಿ, ತಾರನಾಥ ಸವಣೂರು, ವಿಜಯಾ ಶೆಟ್ಟಿ ಸಾಲೆತ್ತೂರು, ಬಾಲಕೃಷ್ಣ ಪೊರ್ದಾಲ್, ಬಿ. ವಿ. ಸೂರ್ಯನಾರಾಯಣ, ಲಿಂಗಪ್ಪ ಬೆಳ್ಳಾರೆ, ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ| ವಿಷ್ಣು ಭಟ್ ಉಪಸ್ಥಿತರಿದ್ದರು.
ನಿಶಾ ಮತ್ತು ತಂಡದವರು ತುಳು ನಾಡ ಪೊರ್ಲು ತೂಲೆ, ಮಲ್ಲಿಗೆ ಪೂತ ಮಾಲೆ ಎಂಬ ತುಳು ಪ್ರಾರ್ಥನಾ ಗೀತೆಯನ್ನು ಹಾಡಿದರು. ವಿದ್ಯಾರ್ಥಿ ಸಂಯೋಜಕ ರಾಕೇಶ್ ರಾವ್ ಪಿ.ಜಿ. ಸ್ವಾಗತಿಸಿ, ಮಾನವಿಕ ಸಂಘದ ಸಂಯೋಜಕ ಪ್ರೊ| ಸುಬೇರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಂಕಿತ ವಂದಿಸಿದರು.
ವಿದ್ಯಾರ್ಥಿ ಸಹ ಸಂಯೋಜಕಿ ಅಕ್ಷತಾ ಶರ್ಮ ವಿ. ಕಾರ್ಯಕ್ರಮ ನಿರ್ವಹಿಸಿದರು. ಪಾಡªನ, ಕಂಬಳ ಬೋಡು/ ಬೊಡಿc ಕುರಿತು ತುಳು ಚರ್ಚೆ, ಮುಂಡಾಸು ಕಟ್ಟುವುದು, ದಾರ ರಹಿತ ಹೂಮಾಲೆ ಕಟ್ಟುವುದು, ಸ್ಮರಣ ಶಕ್ತಿ, ಸೋಬಾನೆ, ಜಾನಪದ ಸಮೂಹ ನೃತ್ಯ ಮೊದಲಾದ ಸ್ಪರ್ಧೆಗಳು ನಡೆದವು.”
ನದಿಯಂತಿರಬೇಕುಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಪುರಸಭಾ ಅಧ್ಯಕ್ಷೆ ಪಿ. ಲತಾ ಗಣೇಶ್ ರಾವ್ ಮಾತನಾಡಿ, ನಾಡಿನ ಅಪರೂಪದ ಸಂಸ್ಕೃತಿ ಮತ್ತು ಆಚರಣೆಗಳನ್ನು ಉಳಿಸಿಕೊಳ್ಳುವಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸುವ ಅಗತ್ಯವಿದೆ. ಅಮೂಲ್ಯವಾದ ಜಾನಪದ ಸಂಸ್ಕೃತಿ ನಿಂತ ನೀರಿನಂತಿರದೆ, ತುಂಬಿ ಹರಿಯುವ ನದಿಯಂತಿರಬೇಕು ಎಂದು ಹೇಳಿದರು.