ಕೌಲಾಲಂಪುರ : ಫಿಲಿಪ್ಪೀನ್ಸ್ ಮತ್ತು ಮಲೇಷ್ಯಾ ದೇಶಗಳು ವರ್ಷಗಳಲ್ಲಿ ಕಂಡರಿಯದ ಭೀಕರ ಪ್ರವಾಹವನ್ನು ಎದುರಿಸುತ್ತಿದ್ದು, ಸೋಮವಾರದವರೆಗೆ 375 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಮಲೇಷ್ಯಾದಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದು , 71,000 ಜನರನ್ನು ಸ್ಥಳಾಂತರಗೊಳಿಸಲಾಗಿದೆ.
ರೈ ಎಂಬ ಹೆಸರಿನ ಚಂಡಮಾರುತದ ಪರಿಣಾಮವಾಗಿ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದ ದೇಶಾದ್ಯಂತ ಕೆಲವು ವರ್ಷಗಳಲ್ಲಿ ಕಾಣದ ಅತ್ಯಂತ ಕೆಟ್ಟ ಪ್ರವಾಹಕ್ಕೆ ಕಾರಣವಾಗಿದೆ. ನಗರಗಳು ಮತ್ತು ಹಳ್ಳಿಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ರಾಜಧಾನಿ ಕೌಲಾಲಂಪುರ್ ಅನ್ನು ನೆರೆಯ ನೀರು ಸುತ್ತುವರೆದಿದ್ದು, ದೇಶದ ಅತ್ಯಂತ ಶ್ರೀಮಂತ ಮತ್ತು ಹೆಚ್ಚು ಜನನಿಬಿಡ ರಾಜ್ಯವಾದ ಸೆಲಂಗೋರ್ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದೆ.
ಫಿಲಿಪ್ಪೀನ್ಸ್ ನಲ್ಲೂ ಪ್ರವಾಹ
ಫಿಲಿಪ್ಪೀನ್ಸ್‌ನ ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ರೈ ಚಂಡಮಾರುತ ಅಪ್ಪಳಿಸಿದ ಕಾರಣ ಅಸುನೀಗಿದವರ ಸಂಖ್ಯೆ ೩೫೦ ದಾಟಿದೆ.ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.