Advertisement

ವೈದ್ಯಕೀಯ ಸಿಬಂದಿ ಸುರಕ್ಷತೆ ಮರೆತ ಫಿಲಿಫೈನ್ಸ್‌

10:09 AM Apr 09, 2020 | mahesh |

ಮನಿಲಾ(ಫಿಲಿಫೈನ್ಸ್‌): ಜೀವ ಕೈಯಲ್ಲಿಟ್ಟುಕೊಂಡು ತಮ್ಮ ಸಂಸಾರ/ಕುಟುಂಬಸ್ಥರಿಂದ ದೂರಾಗಿ ವೈದ್ಯರು, ದಾದಿಯುರು ಜಗತ್ತಿನಾದ್ಯಂತ ಕೋವಿಡ್‌-19 ಸೋಂಕಿತರ ಆರೈಕೆ ಮಾಡುತ್ತಿದ್ದಾರೆ. ವಿಚಿತ್ರವೆಂದರೆ, ಅವರ ಆರೋಗ್ಯದ ಬಗ್ಗೆ ಸ್ಥಳೀಯ ಸರಕಾರಗಳು ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಇದ ರೊಂದಿಗೆ ಕೆಲವೆಡೆ ಜನರು ಆರೋಗ್ಯ ಯೋಧರಿಗೂ ಮರ್ಯಾ ದೆಯೇ ಕೊಡುತ್ತಿಲ್ಲ. ನಮ್ಮಲ್ಲಿಯೂ ಆಶಾ ಕಾರ್ಯ ಕರ್ತೆಯರ ಮೇಲೆ ಹಲ್ಲೆಯೂ ನಡೆದಿತ್ತು.

Advertisement

ಈಗ ಫಿಲಿಫೈನ್ಸ್‌ ಸರಕಾರವು ತನ್ನ ವೈದ್ಯಕೀಯ ಸಿಬಂದಿಗಳ ಸುರಕ್ಷತೆಯನ್ನೇ ಮರೆತ ಆರೋಪಕ್ಕೆ ಗುರಿಯಾಗಿದೆ. ರಾಜಧಾನಿ ಮನಿಲಾದ ಗ್ರಾಮೀಣ ಪ್ರಾಂತ್ಯದಲ್ಲಿ ಕಾರ್ಯಾಚರಿಸುತ್ತಿರುವ ಪ್ರಾಥಮಿಕ ಕೇಂದ್ರ ವೈದ್ಯರು, ನರ್ಸ್‌ಗಳಿಗೆ ಅಗತ್ಯ ಸುರಕ್ಷ ಕವಚಗಳನ್ನು ನೀಡಿಲ್ಲ ಎಂದು ಸಿಎನ್‌ಎನ್‌ ವರದಿ ಮಾಡಿದೆ.

30 ಮೈಲಿ ನಡೆದುಹೋಗಿ ಶಂಕಿತರ ತಪಾಸಣೆ
ಇಲ್ಲಿನ ಮನಿಲಾ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌- 19 ಸೋಂಕು ಹೆಚ್ಚುತ್ತಿದ್ದು, ಈ ಗ್ರಾಮದ ಹೊಣೆಗಾರಿಕೆ ಯನ್ನು ಪ್ರಾಥಮಿಕ ಕೇಂದ್ರಗಳಿಗೆ ವಹಿಸಲಾಗಿದೆ. ಆದರೆ ಹೊಣೆಗ ಾರಿಕೆಯನ್ನು ನಿರ್ವಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಮೂವತ್ತು ಮಂದಿ ಸೋಂಕು ಶಂಕಿತರ ತಪಾಸಣೆಗಾಗಿ ಸುಮಾರು 30 ಮೈಲಿ ನಡೆದೇ ಸಾಗಬೇಕಿದೆ. ಪೂರಕ ಸೌಲಭ್ಯ ಕಲ್ಪಿಸಿಲ್ಲ. ಜತೆಗೆ ಆಧುನಿಕ ಮಾಸ್ಕ್ಗಳನ್ನು, ರಕ್ಷಕ ವಚಗಳನ್ನು ನೀಡಲಾಗಿಲ್ಲ. ಅಸಹಾಯಕರಾಗಿ ನಾವು ಕರ ವಸ್ತ್ರ ಮತ್ತು ಬಟ್ಟೆಗಳನ್ನು ಬಳಸುತ್ತಿದ್ದೇವೆ ಎಂದು ಅಲ್ಲಿಯ ದಾದಿಯೊಬ್ಬರು ಮಾಧ್ಯಮಕ್ಕೆ ವಿವರಿಸಿದ್ದಾರೆ.

ಈಗಾಗಲೇ 17 ವೈದ್ಯ ಸಿಬಂದಿ ಅಗತ್ಯ ಸುರಕ್ಷತೆಗಳಿಂದ ವಂಚಿ ತರಾಗಿ ಸಾವ ನ್ನಪ್ಪಿದ್ದು, 600 ಮಂದಿಯನ್ನು ಕ್ವಾರಂಟೇನ್‌ ಮಾv ‌ಲಾಗಿದೆ. ಆದರೂ ನಾವು ಕೆಲಸ ಮಾಡಲು ಸಿದ್ಧರಿದ್ದೇವೆ. ನಿತ್ಯವೂ ಸೋಂಕು ಶಂಕಿತರನ್ನು ತಪಾ ಸಣೆ ಮಾಡು ವುದರಿಂದ ರೋಗ ಹರಡುವುದನ್ನು ತಡೆಗಟ್ಟಹುದು ಎಂಬ ಆಶಾವಾದ ದಾದಿಯರದ್ದು,

ಪರೀಕ್ಷಾ ಕಿಟ್‌ಗಳ ಅಭಾವ
ಇಲ್ಲಿಯ ರೋಗಿಯೊರ್ವ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ವಾಸಿಸುತ್ತಿದ್ದಾನೆ. ಅಗತ್ಯ ಸೇವೆಗಳ ಪೂರೈಕೆಯಲ್ಲಿ ಈ ವಸ್ತುಗಳು ಬರುವುದರಿಂದ ಇಡೀ ಲುಜಾನ್‌ ದ್ವೀಪ ಸ್ಥಗಿತಗೊಂಡರೂ ಈ ಮಾರುಕಟ್ಟೆ ನಡೆಯುತ್ತಿದೆ. ವಿಪರ್ಯಾಸ ಎಂದರೆ ಆ ರೋಗಿಗೆ ಜ್ವರ ಮತ್ತು ದೇಹದ ನೋವು ಕಾಣಿಸಿಕೊಂಡಿದ್ದು, ಅವನನ್ನು ತಪಾಸಣೆ ಮಾಡಲು ಅಗತ್ಯವಿರುವ ಪರೀಕ್ಷಾ ಕಿಟ್‌ಗಳಿಲ್ಲ.

Advertisement

ಸಾವಿರಾರು ದಾದಿಯರ ಕನಸುಗಳಿಗೆ ತಣ್ಣೀರು
ನರ್ಸಿಂಗ್‌ ವ್ಯಾಸಂಗ ಮಾಡುವ ಪ್ರತಿಯೊರ್ವ ಮಹಿಳೆಯೂ ತಾವು ಇತರ ಆರೋಗ್ಯ ಕಾರ್ಯ ಕರ್ತರಂತೆ ವಿದೇಶದಲ್ಲಿ ಕೆಲಸ ಮಾಡಿ ಕುಟುಂಬ ನಿರ್ವ ಹಣೆಗೆ ಸಹಾಯ ಹಸ್ತ ನೀಡಬೇಕು ಎಂಬ ಕನ ಸನ್ನು ಹೊಂದಿರುತ್ತಾರೆ. ಅದರ ಸಾಕಾರಕ್ಕೆ ಎಷ್ಟೋ ಜನರು ಪ್ರಾರಂಭಿಕ ಹಂತದಲ್ಲಿ ಸ್ವಯಂ ಸೇವಕರಾಗಿ ಯಾವುದೇ ಭತ್ತೆ ಇಲ್ಲದೇ ಕೆಲಸ ಮಾಡುತ್ತಾರೆ. ಒಪ್ಪಂದದ ಮೇರೆಗೆ ಕಾರ್ಯಾಚರಿಸುತ್ತಿರುವುದರಿಂದ ಇದನ್ನು “ತರಬೇತಿ ಹಂತ’ ಎಂದು ಪರಿಗಣಿಸಲಾಗುತ್ತದೆ. ಆದರೆ ಇಂತಹ ಪರಿಸ್ಥಿತಿಗಳಲ್ಲಿ ನಮ್ಮ ಸ್ಥಿತಿ ಮತ್ತಷ್ಟು ಶೋಚನೀಯ ಗೊಂಡು, ಸಣ್ಣ ಪುಟ್ಟ ಆಸೆಗಳೊಂದಿಗೆ ಬರುವ ಸಾವಿರಾರು ದಾದಿಯರ ಕನಸುಗಳಿಗೆ ತಣ್ಣೀರು ಎರಚಿದಂತಾಗಿದೆ ಎನ್ನುತ್ತಾರೆ ಮತ್ತೂಬ್ಬ ದಾದಿ.

ನಮ್ಮನ್ನು ಕೀಳಾಗಿ ನೋಡಬೇಡಿ
ಮನೆ ಮನೆಗೆ ಹೋಗಿ ಶಂಕಿತರ ಪರೀಕ್ಷೆ ತಪಾಸಣೆ ಮಾಡುವಾಗ ಹತ್ತಾರು ಜನ ಚುಚ್ಚು ಮಾತುಗಳನ್ನು ಆಡು ತ್ತಾರೆ. ಮನೆ ಮುಂದೆ ಹೋಗಿ ನಿಂತರೆ ಕೀಳಾಗಿ ನೋಡುತ್ತಾರೆ. ನಾವು ನಮ್ಮ ಸಂಸಾರದಿಂದ, ಮಕ್ಕ ಳನ್ನು ಕಣ್ತುಂಬ ನೋಡದೇ ನಿಮ್ಮ ಸೇವೆಗೆ ನಮ್ಮ ಇಡೀ ದಿನವನ್ನು ಮುಡಿಪಾಗಿಟ್ಟಿದ್ದೇವೆ. ನಮಗೂ ಕುಟುಂಬ ಇದೆ ಅನ್ನುವದನ್ನು ಮರೆತು ನಿಮ್ಮ ಮತ್ತು ನಿಮ್ಮವರ ಆರೋಗ್ಯಕ್ಕಾಗಿ ಬಂದಿದ್ದೇವೆ. ದಯಮಾಡಿ ಯಾವ ಆರೋಗ್ಯ ಕಾರ್ಯಕರ್ತರನ್ನೂ ಕೀಳಾಗಿ ನೋಡಬೇಡಿ ಎಂದು ಮನವಿ ಮಾಡಿದ್ದಾರೆ ಅವರು.

ವೈಯಕ್ತಿಕ ಸಂರರಕ್ಷಣಾ ಸಾಧನಗಳ
ಕೊರತೆಯ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಇಲ್ಲಿನ ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರ ಸ್ಥಿತಿ ಇತರ ದೇಶಗಳಿಗಿಂತ ವಿಭನ್ನವಾಗಿದೆ. ಅನ್ಯ ದೇಶಗಳಲ್ಲಿ ವೈದ್ಯ ಸಿಬಂದಿಗೆ ನೀಡಲಾಗುತ್ತಿರುವ ಸುರಕ್ಷತೆಯ ಶೇ.10ರಷ್ಟು ನಮಗೆ ದೊರೆಯುತ್ತಿಲ್ಲ ಎಂದಿದ್ದಾರೆ ವೈದ್ಯರೊಬ್ಬರು.

ಉತ್ತರ ಗ್ರಾಮೀಣ ಪ್ರದೇಶಗಳಿಗೆ ಎಂಟು ಗಂಟೆಗಳ ಪ್ರಯಾಣ ಮಾಡಿ ಸುಮಾರು 53 ಸಾವಿರ ಮಂದಿಯ ಶುಶ್ರೂಷೆಯಲ್ಲಿ ನಿರತರಾದ 40 ಮಂದಿಯ ತಂಡಕ್ಕೆ ವಿಶ್ವದ್ಯಾಂತ ಜಾರಿ ಇರುವ ಯಾವುದೇ ಸುರಕ್ಷಾ ಕ್ರಮಗಳು ಅನ್ವಯಿಸಿಲ್ಲ ಎಂಬ ಆರೋಪಕ್ಕೆ ಸರಕಾರ ಗುರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next